ಸಮಾಜದ ಉನ್ನತಿಗೆ ಸಹಾಯ ಸಹಕಾರ ಅಗತ್ಯ: ಅಷ್ಟಗಿಮಠ

0
0
loading...

ಸಮಾಜದ ಉನ್ನತಿಗೆ ಸಹಾಯ ಸಹಕಾರ ಅಗತ್ಯ: ಅಷ್ಟಗಿಮಠ

ಕನ್ನಡಮ್ಮ ಸುದ್ದಿ-ಮುನವಳ್ಳಿ : ಪಟ್ಟಣದ ಶ್ರಿÃ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜೈಂಟ್ಸ ಗ್ರುಪ್ ವತಿಯಿಂದ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ. ೧೩ ರಂದು ಜರುಗಿತು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವಿÃಕರಿಸಿ ಮಾತನಾಡಿದ ಡಾ. ಎಂ.ಬಿ. ಅಷ್ಟಗಿಮಠ ಪ್ರತಿಯೊಬ್ಬರೂ ಸೇವಾ ಮನೋಭಾವನೆಯೊಂದಿಗೆ ಕೈಲಾದಷ್ಟು ಸಮಾಜದ ಉನ್ನತಿಗೆ ಸಹಾಯ ಸಹಕಾರ ಸಲ್ಲಿಸಬೇಕು ಎಂದರು.
ರಾಣಿ ಚೆನ್ನಮ್ಮ ಮಹಿಳಾ ಗುಂಪಿನ ನೂತನ ಅಧ್ಯಕ್ಷರಾಗಿ ಶ್ರಿÃಮತಿ ಗೌರಿ ಜಾವೂರ ಅಧಿಕಾರ ಸ್ವಿÃಕರಿಸಿದರು.
ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲಾಧ್ಯಕ್ಷೆ ಶ್ರಿÃಮತಿ ಮಂಗಳಾ ಮೆಟಗುಡ್ಡ ಸಮಾಜದ ಸೇವೆಯ ಜೊತೆಗೆ ನಾಡು ನುಡಿ ಉಳಿಸುವ ಕಾರ್ಯವನ್ನು ಸಹ ಜೈಂಟ್ಸ ಸಂಸ್ಥೆ ಮಾಡಬೇಕು. ಕನ್ನಡ ಸಾಹಿತ್ಯ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಅತಿಥಿಗಳಾಗಿ ಹುಬ್ಬಳ್ಳಿ ತೆರಿಗೆ ಇಲಾಖೆಯ ಬಿ.ಬಿ.ಗೌಡಪ್ಪಗೋಳ, ದಿನಕರ ಅಮಿನ, ಜೈಂಟ್ಸ ರಾಜ್ಯಾಧ್ಯಕ್ಷ ಮೋಹನ ಸರ್ವಿ, ಡಾ. ಎಸ್.ಬಿ. ಅಷ್ಟಗಿಮಠ, ಗಜಾನನ ನೀಲಾಕಾರಿ, ಎಂ.ಎಂ.ಯಲಿಗಾರ,ಉಮೇಶ ಬಾಳಿ, ಸಂಜು ತುಳಜಣ್ಣವರ, ಜಯಶ್ರಿÃ ಕುಲಕರ್ಣಿ, ಶಿವಾನಂದ ಕರೀಕಟ್ಟಿ, ಅಶೋಕ ರೇಣಕೆ, ವಿಜಯಕುಮಾರ ವನಕುದರಿ,ಅರುಣಗೌಡ ಪಾಟೀಲ, ಬಸವರಾಜ ಅಂಗಡಿ, ಬಿ.ಬಿ.ಹುಲಿಗೊಪ್ಪ, ಪ್ರಶಾಂತ ಕೊಂಡ್ಲಿ,ಅರ್ಜುನ ಕಲಾಲ, ಮಹಾಂತೇಶ ಹಾದಿಮನಿ,ಎಸ್.ಎಸ್.ಮಾನೆ, ಅಪ್ಪು ಅಮಠೆ, ವಿರಾಜ ಕೊಳಕಿ, ಅನಿಲ ಕಿತ್ತೂರ ವಾಯ್.ಪಿ.ರಾಮಜಾರ. ಜ್ಯೊÃತಿ ಯಲಿಗಾರ, ಪದ್ಮಾವತಿ ಪಾಟೀಲ, ನಿರ್ಮಲಾ ಶಿರೆಣ್ಣವರ, ಅನ್ನಪೂರ್ಣಾ ಲಂಬೂನವರ,ಸುಮಾ ಯಲಿಗಾರ ಇತರರು ಇದ್ದರು.
ವೀರಣ್ಣ ಕೊಳಕಿ ನಿರೂಪಿಸಿದರು. ರಮೇಶ ಗಂಗಣ್ಣವರ ವಂದಿಸಿದರು.

loading...