ಸರಕಾರದಿಂದ ವ್ಯವಸಾಯ ಭೂಮಿ ಭೂಸ್ವಾಧೀನ: ಗ್ರಾಮಸ್ಥರ ಅಳಲು

0
0
loading...

ಸರಕಾರದಿಂದ ವ್ಯವಸಾಯ ಭೂಮಿ ಭೂಸ್ವಾಧೀನ: ಗ್ರಾಮಸ್ಥರ ಅಳಲು
ಕನ್ನಡಮ್ಮ ಸುದ್ದಿ-ಬೆಳಗಾವಿ: ದೇವಗಿರಿ ಗ್ರಾಮಸ್ಥರ ವ್ಯವಸಾಯ ಭೂಮಿಯನ್ನು, ರಸ್ತೆ ಅಭಿವೃದ್ಧಿಗಾಗಿ ಸರಕಾರ ಭೂಸ್ವಾಧೀನ ಮಾಡಿಕೊಳ್ಳುವ ಆದೇಶವನ್ನು ತೀರ್ಷ್ಕರಿಸಿ, ಭೂಮಿಯನ್ನು ಗ್ರಾಮಸ್ಥರಿಗೆ ಮರಳಿ ನೀಡುವಂತೆ ಒತ್ತಾಯಿಸಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸ್ಥಳೀಯ ಜಿಲ್ಲಾಧಿಕಾರಿಗಳ ಆವರಣನದಲ್ಲಿ ಪ್ರತಿಭಟನೆ ನಡೆಸಿದ ಅವರು, ಮೂರು ತಲೆಮಾರಗಳಿಂದ ಕಡೋಲಿ ಗ್ರಾ.ಪಂ ವ್ಯಾಪ್ತಿಯ ದೇವಗಿರಿಯ ಗ್ರಾಮದಲ್ಲಿ ವ್ಯವಸಾಯ ಮಾಡುತ್ತಿದ್ದೆವೆ, ಸರಕಾರ ಧೀಡಿರನೆ ವ್ಯವಸಾಯ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡರೆ ನಾವೇಲ್ಲ ಎಲ್ಲಿಗೆ ಹೋಗುವುದು. ನಮ್ಮ ಜೀವನೊಪಾಯಕ್ಕೆ ಕೇವಲ ಒಂದೇ ಭೂಮಿಯಲ್ಲಿ, ನಾವು ನೂರಾರು ವರ್ಷಗಳಿಂದ ಜೀವನ ಸಾಗಿಸುತ್ತಿದೆ. ರಸ್ತೆ ಅಭೀವೃದ್ಧಿಗಾಗಿ ಕಡುಬಡವರ ಭೂಮಿಯ ಯಾಕೆ ಅವರಿಗೆ ನೀಡಬೇಕು ಎಂಧು ಪ್ರಶ್ನಿÃನಿಸಿದರು.
ಸರಕಾರ ಈಗಾಗಲೇ ಪತ್ರಿಕೆಯಲ್ಲಿ ಪ್ರಕಟನೆಯನ್ನು ಸಹ ನೀಡಿದ್ದಾರೆ. ಸರಕಾರದ ರಸ್ತೆಯ ಅಧಿಸೂಚನೆಗೆ ಕೊಡಲಿಕ್ಕೆ ನಾವು ತಯಾರಿಲ್ಲ, ಅದೇ ಜಮೀನುಗಳ ನಾವು ಅವಲಂಬಿತರಾಗಿದ್ದೆವೆ. ಈಗಿರುವ ಜಮೀನುಗಳು ಪಲವತ್ತೆಯನ್ನು ಹೊಂದಿವೆ, ಈ ಭೂಮಿಯ ಸುತ್ತಲೂ ನೀರಾವರಿ ಪೈಪಲೈನಗಳನ್ನು ಸಹ ಅಳವಡಿಸಲಾಗಿದೆ. ಇದೇ ಜಮೀನಿನಲ್ಲಿ ಕಬ್ಬು, ತರಕಾರಿ, ಗೋದಿ, ಜೋಳ ದವಸದಾನ್ಯಗಳನ್ನು ಬೆಳೆಯಲಾಗುತ್ತಿದೆ. ವರ್ಷಕ್ಕೆ ಭೂಮಿತಾಯಿಂದ ಸುಮಾರು ೪ ಲಕ್ಷ ಆದಾಯನ್ನು ನಾವು ಪಡೆಯಲಾಗುತ್ತಿದೆ. ಸರಕಾರ ಭೂಸ್ವಾಧೀನ ಅಧೇಶವನ್ನು ರದ್ದುಗೊಳಿಸಿ, ಉಳಲಿಕ್ಕೆ ಸರಕಾರ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.
ಸರಕಾರ ಒಂದು ವೇಳೆಯಲ್ಲಿ ವ್ಯವಸಾಯ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡರೆ, ಜಮೀನನಲ್ಲಿ ನಾವು ಆತ್ಮಹತ್ಯೆ ಮಾಡಿಕೊಳ್ಳಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಸ್ವಂತ ಜಮೀನಗಳ ಮೇಲೆ ರಾಷ್ಟಿçÃಯ ಹೆದ್ದಾರಿ ಮಾಡುವ ಅಗತ್ಯವಿಲ್ಲ, ಬಡವರ ಭೂಮಿಯನ್ನು ಕಸೆದುಕೊಂಡು ರಸ್ತೆ ನಿರ್ಮಾಣ ಮಾಡುವಂತ ಸಂಕಷ್ಟ ಒದಗಿ ಬಂದರೆ ಹೋರಾಟ ಮಾಡಲಾಗುವುದು ಎಂದು ಮನವಿ ಮಾಡಿಕೊಂಡರು.

loading...