‘ಸಿಂಬಾ’ದಲ್ಲಿ ಟೈಗರ್!

0
2
loading...

ಮುಂಬಯಿ:- ರೋಹಿತ್ ಶೆಟ್ಟಿ ನಿರ್ದೇಶಿಸಿರುವ ‘ಸಿಂಬಾ’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವಾಗಲೇ, ಚಿತ್ರದ ಮತ್ತೊಂದು ಅವತರಣಿಕೆ ಮಾಡಲು ನಿರ್ದೇಶಕರು ಸಜ್ಜಾಗಿದ್ದಾರೆ ಎಂಬ ಮಾಹಿತಿ ಇದೆ.
ನಟ ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿರುವ ಸಿಂಬಾ ಚಿತ್ರವು 215 ಕೋಟಿಗಿಂತ ಅಧಿಕ ಗಲ್ಲಾಪೆಟ್ಟಿಗೆ ತುಂಬಿಸಿದೆ. ಚಿತ್ರದ ಮತ್ತೊಂದು ಅವತರಣಿಕೆ ಮಾಡುವ ಇಚ್ಛೆಯನ್ನು ನಿರ್ದೇಶಕರು ವ್ಯಕ್ತಪಡಿಸಿದ್ದು, ನಟ ಟೈಗರ್ ಶ್ರಾಫ್ ನಟಿಸುವ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು.
ಇತ್ತೀಚೆಗೆ ರೋಹಿತ್ ಶೆಟ್ಟಿ ಕಚೇರಿಯಲ್ಲಿ ಟೈಗರ್ ಶ್ರಾಫ್, ತಮ್ಮ ಮ್ಯಾನೇಜರ್ ಜೊತೆ ಕಾಣಿಸಿಕೊಂಡಿದ್ದರು. ಸುಮಾರು ಎರಡು ಗಂಟೆಗಳ ಕಾಲ ಚಿತ್ರದ ಕುರಿತು ಚರ್ಚಿಸಲಾಗಿದೆ ಎಂದು ತಿಳಿದು ಬಂದ ನಂತರ ಬಿಟೌನ್ ಅಂಗಳದಲ್ಲಿ ಭಾರಿ ಸುದ್ದಿಯಾಗಿದೆ.
ರೋಹಿತ್ ಶೆಟ್ಟಿ ನಿರ್ದೇಶಿಸಲಿರುವ ಹೊಸ ಚಿತ್ರದ ಕತೆ ಕೇಳಲು ಟೈಗರ್ ಶ್ರಾಫ್, ಅವರ ಕಚೇರಿಗೆ ಆಗಮಿಸಿದ್ದರು ಎನ್ನಲಾಗುತ್ತಿದೆಯಾದರೂ, ಸಿಂಬಾ ಚಿತ್ರದ ಅವತರಣಿಕೆಯಲ್ಲಿಯೇ ಟೈಗರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

loading...