ಸಿಎಂ ರಿಂದ 12ರಂದು ಶಿವಾಜಿ ಮಹಾರಾಜ ಮೂರ್ತಿ ಲೋಕಾರ್ಪಣೆ: ಕಟಾಂಬಳೆ

0
1
loading...

ಸಿಎಂ ರಿಂದ 12ರಂದು ಶಿವಾಜಿ ಮಹಾರಾಜ ಮೂರ್ತಿ ಲೋಕಾರ್ಪಣೆ: ಕಟಾಂಬಳೆ

ಕನ್ನಡಮ್ಮ ಸುದ್ದಿ- ಬೆಳಗಾವಿ: ಕಡೋಲಿ ಗ್ರಾಮ‌ ಪಂಚಾಯಿತಿ ಎದುರು ನಿರ್ಮಿಸಿಲಾದ ಅಶ್ವರೂಢ ಶಿವಾಜಿ ಮೂರ್ತಿ ಜ. ೧೨ ರಂದು ಸಿಎಂ‌ ಕುಮಾರಸ್ವಾಮಿ‌ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು‌ ಜಿಲ್ಲಾ‌ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ ಅವರು, ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ‌ ಮಾಜಿ ಸಚಿವ ಶರದಚಂದ್ರ ಪವಾರ್, ಶಿವರಾಯ ವಂಶಸ್ಥ, ಮಹಾರಾಷ್ಟ್ರಾ ಎಂಪಿ, ಛತ್ರಪತಿ ಉದಯ‌ನರಾಜೆ ಭೋಸಲೆ, ಸಚಿವ ಸತೀಶ ಜಾರಕಿಹೊಳಿ, ‌ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಶಾಸಕ‌ ಗಣೇಶ ಹುಕ್ಕೇರಿ ಮುಖ್ಯ, ತೋಂಟದ ಮಠದ ಸಿದ್ದರಾಮ ಶ್ರೀ, ಕಡೋಲಿ ದುರದುಂಡೇಶ್ವರ್ ವಿರಕ್ತ ಮಠದ ಗುರುಬಸವಲಿಂಗ ಸ್ವಾಮೀಜಿ ಇತರರು ಭಾಗವಹಿಸಲಿದ್ದಾರೆ.
ಮುಂಬೈ ಮೂಲದ ಕಲಾಕಾರರು ಜಯಪ್ರಕಾಶ ಅವರು ಅಶ್ವರೂಢ ಮೂರ್ತಿ
ತಯಾರಿಸಿದ್ದಾರೆ. ಸುಮಾರು ಒಂದು ಕೋಟಿ‌ರೂ. ವೆಚ್ಚದಲ್ಲಿ‌ ಶಿವಾಜಿ ಮಹಾರಾಜರ ಮೂರ್ತಿ ತಯಾರಿಸಲಾಗಿದ್ದು, ೧ ಕೋಟಿ ರೂ. ೧೨ ಪೋಟ್‌ ಎತ್ತರ. ಶಿವಾಜಿ ಮೂರ್ತಿ ಪ್ರತಿಷ್ಟಾಪನೆ.
ಜ.೧೨ ರಂದು ಸಿಎಂ ಕುಮಾರಸ್ವಾಮಿ‌, ಮಾಜಿ‌ಸಿಎಂ ಸಿದ್ದರಾಮಯ್ಯ, ಗದಗ ತೋಂಟಡ ಸಿದ್ದಾರಾಮ ಶ್ರೀ, ಶರದ ಪವಾರ್ ಸೇರಿದಂತೆ ಇತರ‌ ಗಣ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಮಲಗೌಡಾ ಪಾಟೀಲ,ಪಾಡು ರಂಗಸುಬೆ, ಗ್ರಾಪಂ ಅಧ್ಯಕ್ಷ ರಾಜು ಮಾಯಣ್ಣಾ, ಬಸವಂತ ಮಾಯಾನಾಚೆ, ಗಜಾನನ ಕಾಗನೇಕರ, ಓಮಾನಿ ಚೌಗಲೇ , ವಿನೋಂದ ಜಗಮಳೆ, ಪುಂಡಲೀಕ ಬಾತಕಾಂಡೆ, ಸಾಗರ ಪಡಕೇ,ದತ್ತಾ ಸುತಾರಾ,ಕಲ್ಲಾ ಬಸರಿಕಟ್ಟಿ ಸೇರಿದಂತೆ ಇತರರು ಇದ್ದರು.

loading...