ಸ್ಪೇಸ್ ಎಕ್ಸ್ ನ ಶೇ.10 ರಷ್ಟು ಉದ್ಯೋಗಿಗಳು ಹೊರಕ್ಕೆ : ವರದಿ

0
0
loading...

ವಾಷಿಂಗ್‌ಟನ್‌, ಜ 12 (ಸ್ಫುಟ್ನಿಕ್‌) ಅಮೆರಿಕದ ಖಾಸಗಿ ಸಂಸ್ಥೆ ಸ್ಪೇಸ್ ಎಕ್ಸ್ ತನ್ನ ಆರು ಸಾವಿರ ಉದ್ಯೋಗಿಗಳ ಪೈಕಿ ಶೇ 10 ರಷ್ಟು ಉದ್ಯೋಗಿಗಳನ್ನು ತೆಗೆದು ಹಾಕುವುದಾಗಿ ಮಾಧ್ಯಮ ವರದಿ ತಿಳಿಸಿದೆ.
ಈ ನಿರ್ಧಾರದಿಂದಾಗಿ ಉದ್ಯೋಗವಂಚಿತರಾಗುವವರಿಗೆ ಕನಿಷ್ಠ ಎಂಟು ವಾರಗಳ ವೇತನ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಗ್ರಾಹಕರ ಅಗತ್ಯಗಳಿಗಾಗಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಸಂಸ್ಥೆ ಹೇಳಿದೆ.

loading...