ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಧರ್ಮಸ್ಥಳ ಸಂಸ್ಥೆಯ ಕೊಡುಗೆ ಅಮೋಘ-ಅನಂತ

0
1
loading...

 

ಕನ್ನಡಮ್ಮ ಸುದ್ದಿ-ದಾಂಡೇಲಿ: ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಮೋಘವಾಗಿದೆ. ಗ್ರಾಮೀಣಾಭಿವೃದ್ಧಿ ಚಟುವಟಿಕೆಯ ಜೊತೆಗೆ ಸಮಾಜದ ಬದಲಾವಣೆಗಾಗಿ ವಿಶಿಷ್ಟ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ನಾಡಿನ ಧರ್ಮ, ಸಂಸ್ಕøತಿಯನ್ನು ಸಂರಕ್ಷಿಸಿ, ಬೆಳೆಸುವಲ್ಲಿ ಧರ್ಮಸ್ಥಳ ಸಂಸ್ಥೆ ಶ್ಲಾಘನೀಯ ಸೇವೆ ಮಾಡುತ್ತಿದೆ.
ಆರೋಗ್ಯವಂತ ಮತ್ತು ಸ್ವಸ್ಥ ಸಮಾಜ ನಿರ್ಮಾಣದ ಕನಸನ್ನು ಹೊತ್ತಿ ಫಲಪ್ರದಾಯಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಧರ್ಮಸ್ಥಳ ಸಂಸ್ಥೆಯಿಂದ ಸಹಸ್ರ ಸಹಸ್ರ ಕುಟುಂಬಗಳು ಕತ್ತಲಿನಿಂದ ಬೆಳಕಿನೆಡೆಗೆ ಸಾಗಿವೆ. ಧರ್ಮ ಸಂಸ್ಥಾಪನೆಯ ಮೂಲಕ ಸಮಾಜಕ್ಕೆ ಅಪಾಯಕಾರಿಯಾಗುತ್ತಿರುವ ದುಶ್ಚಟಗಳನ್ನು ಮತ್ತು ಅನಾಗರೀಕ ನಡೆಯನ್ನು ಹೊಡೆದುರುಳಿಸಿ, ಸುಂದರ, ಸ್ವಚ್ಚ ಮತ್ತು ಸಂತೃಪ್ತಿಯ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳ ಸಂಸ್ಥೆ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಯಲ್ಲಾಪುರದ ಖ್ಯಾತ ಜ್ಯೋತಿಷಿ ಅನಂತ ಭಟ್ ಸಿದ್ರಪಾಲ ಅವರು ಹೇಳಿದರು.

ಅವರು ಭಾನುವಾರ ನಗರದ ಶ್ರೀ.ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ.ಕ್ಷೇತ್ರ.ಧ.ಗ್ರಾ ಯೋಜನೆ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಡುತ್ತಿದ್ದರು. ಪೂಜೆ ಕೇವಲ ಪೂಜೆಯಾಗಿರಬಾರದು, ಅದು ಮನಸ್ಸಿನಿಂದ ಮಾಡಿದ ಪೂಜೆಯಾಗಬೇಕು. ಮನಸ್ಸನ್ನು ಭಕ್ತಿಮಾರ್ಗಕ್ಕೆ ಕೊಂಡೊಯ್ಯಲು ಇಂತಹ ಸಾಮೂಹಿಕ ಪೂಜಾ ಕಾರ್ಯಕ್ರಮಗಳು ಉಪಯುಕ್ತವಾಗಿದೆ. ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮಗಳಿಂದ ಊರಿನಲ್ಲಿ ಶಾಂತಿ, ಸೌರ್ಹಾಧತೆ ಸದೃಢಗೊಳ್ಳುವುದರ ಜೊತೆಗೆ ಆದರ್ಶ ಸಂಸ್ಕಾರ, ಸಂಸ್ಕøತಿಗಳು ಮೇಳೈಸಲು ಸಾಧ್ಯವಿದೆ ಎಂದು ಹೇಳಿ ಕಾರ್ಯಕ್ರಮದ ಬಗ್ಗೆ ಅನಂತ ಭಟ್ ಸಿದ್ರಪಾಲ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಿವೃತ್ತ ಎಸಿ.ಎಫ್ ಹಾಗೂ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ವೈ.ಎನ್.ಮುನವಳ್ಳಿಯವರು ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರ ಮಹತ್ವಕಾಂಕ್ಷಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ರಾಜ್ಯವ್ಯಾಪಿ ಜನಪ್ರಿಯ ಕಾರ್ಯಚಟುವಟಿಕೆಗಳಿಂದ ಗಮನ ಸೆಳೆದಿದೆ. ಆದರ್ಶ ಜೀವನಕ್ಕೆ ಬೇಕಾಗುವ ಎಲ್ಲ ಮೌಲ್ಯಯುಕ್ತ ಜೀವನಪಾಠದ ಜೊತೆಗೆ ಸದೃಢ ಬದುಕು ನಿರ್ಮಾಣಕ್ಕೆ ಧರ್ಮಸ್ಥಳ ಸಂಸ್ಥೆ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಧರ್ಮ ಸಂಸ್ಕಾರದ ಜೀವನ ನಡವಳಿಕೆಯನ್ನು ನಡೆಸುವಂತಾಗಲೂ ಇಂತಹ ಕಾರ್ಯಕ್ರಮಗಳು ಸ್ಪೂರ್ತಿಯಾಗಲಿದೆ ಎಂದರು. ಅಧ್ಯಕ್ಷತೆಯನ್ನು ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಶಂಕರ ಗಣಾಚಾರಿ ವಹಿಸಿ, ಶ್ರೀ.ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ರಮಗಳಲ್ಲಿನ ಶಿಸ್ತು ಮತ್ತು ಬದ್ಧತೆ ಅನುಕರಣೀಯ. ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಸರ್ವರು ಭಾಗವಹಿಸಿ ಭವಿಷ್ಯದಲ್ಲಿ ಉನ್ನತಿಯನ್ನು ಸಾಧಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಜನಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯ ಶಂಕರ ಮುಂಗರವಾಡಿ, ಈಶ್ವರಿ ವಿದ್ಯಾಲಯದ ಬಿ.ಕೆ.ಗೀತಕ್ಕಾ ಅವರುಗಳು ಬಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀ.ಕ್ಷೇತ್ರ.ಧ.ಗ್ರಾ ಯೋಜನೆಯ ಯೋಜನಾಧಿಕಾರಿ ಹರೀಶ ಪಾವಸ್ಕರ, ಅರ್ಚಕ ಅಂಬಿಕಾನಗರದ ಗಣೇಶ ಭಟ್, ವನವಾಸಿ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಲಕ್ಷ್ಮೇಶ್ವರ, ಶ್ರೀ.ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಸದಸ್ಯ ಶಿವನಗೌಡ ಶಿವಳ್ಳಿ, ಅರಣ್ಯ ಇಲಾಖೆಯ ಬ್ರಹ್ಮಾನಂದ ಕಾಂಬಳೆ, ಗುರುನಾಥ ಭಜಂತ್ರಿ, ಗ್ರಾ.ಪಂ.ಸದಸ್ಯ ವಸಂತ ಗಾವಡೆ, ಸಮಾಜ ಸೇವಕ ಮಾರುತಿ ಬೋಸ್ಲೆ, ಗುತ್ತಿಗೆದಾರ ಬಿ.ಎಲ್.ಲಮಾಣಿ ಮೊದಲಾದವರು ಉಪಸ್ಥಿತರಿದ್ದರು. ಮಂಜುಳಾ ಪ್ರಾರ್ಥಿಸಿದರು. ಶ್ರೀ.ಕ್ಷೇತ್ರ.ಧ.ಗ್ರಾ.ಯೋಜನೆಯ ಮೇಲ್ವಿಚಾರಕ ಕೇಶವ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಮೇಲ್ವಿಚಾರಕ ಲೋಕೇಶ ಗೌಡ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಅಂಬಿಕಾನಗರದ ಖ್ಯಾತ ಪುರೋಹಿತರಾದ ಗಣೇಶ ಭಟ್ ಯಶಸ್ವಿಯಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಯಶಸ್ಸಿಗೆ ಶ್ರೀ.ಕ್ಷೇತ್ರ.ಧ.ಗ್ರಾ.ಯೋಜನೆಯ ಅಧಿಕಾರಿಗಳು, ಸಿಬ್ಬಂದಿಗಳು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಮತ್ತು ಪೂಜಾ ಸಮಿತಿಯ ಸದಸ್ಯರುಗಳು ಸಹಕರಿಸಿದರು.

loading...