ಹಸ್ತಾಂತರವಾಗದ ವಸತಿ ಗೃಹಗಳು : “ಸ್ಲಂ” ರಹಿತವಾಗದ ಸ್ಮಾರ್ಟ್ ಸಿಟಿ

0
3
loading...

ಹಾಲಿ-ಮಾಜಿ ಶಾಸಕರ ಕಿತ್ತಾಟ

ಹಸ್ತಾಂತರವಾಗದ ವಸತಿ ಗೃಹಗಳು : “ಸ್ಲಂ” ರಹಿತವಾಗದ ಸ್ಮಾರ್ಟ್ ಸಿಟಿ

ಆನಂದ ಭಮ್ಮಣ್ಣವರ

ಬೆಳಗಾವಿ : ಸ್ಮಾರ್ಟ್‍ಸಿಟಿಯತ್ತ ಹೆಜ್ಜೆ ಹಾಕುತ್ತಿರುವ ಕುಂದಾನಗರಿ ಬೆಳಗಾವಿಯನ್ನು ಸ್ಲಂ ಮುಕ್ತ ನಗರವಾಗಿಸಲು ಸರಕಾರ ರಾಜೀವ ಗಾಂಧಿ ವಸತಿ ಯೋಜನೆ ಅಡಿ ಸುಮಾರು 44 ಕೋಟಿ ರೂ. ಅನುದಾನದಲ್ಲಿ ನಗರದ ಶ್ರೀನಗರದಲ್ಲಿ ಸುಸಜ್ಜಿತ ಅಪಾರ್ಟ್‍ಮೆಂಟ್‍ಯೊಂದನ್ನು ನಿರ್ಮಿಸಿದೆ.ಆದರೆ ಹಾಲಿ ಮಾಜಿ ಶಾಸಕರ ಒಣ ಪ್ರತಿಷ್ಠೆಗಾಗಿ ವಸತಿ ಗೃಹಗಳು ನಿರ್ಮಾಣವಾದರೂ ಫಲಾನುಭವಿಗಳಿಗೆ ಹಸ್ತಾಂತರವಾಗದೆ ಇರುವುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

2013 ರಲ್ಲಿ ಅಂದಿನ ರಾಜ್ಯ ಸರಕಾರದ ವಸತಿ ಸಚಿವರಾಗಿದ್ದ ದಿ.ಅಂಬಿರಿಷ್ ಬೆಳಗಾವಿ ನಗರದ ಸ್ಲಂ ಪ್ರದೇಶಗಳಿಗೆ ಭೇಟಿ ನೀಡಿದರು.ಅವರು ಸ್ಲಂ ನಿವಾಸಿಗಳಿಗೆ 44 ಕೋಟಿ ರೂ ವೆಚ್ಚದಲ್ಲಿ ಶ್ರೀನಗರದಲ್ಲಿ ಜಿ+3 ವಿಸ್ತಿರ್ಣದ 250 ಗೃಹಗಳನ್ನು ನಿರ್ಮಾಣ ಮಾಡಿ ವರ್ಷಗಳೆ ಗತಿಸಿವೆ.ಆದರೆ ಜನಪ್ರತಿನಿಧಿಗಳ ಕಿತ್ತಾಟಕ್ಕೆ ಸ್ಲಂದ ಜನತೆ ಇನ್ನು ಗುಡಿಸಲಿಲ್ಲಿಯೇ ವಾಸಿಸಬೇಕಾಗಿದೆ.

ಈ ಹಿಂದಿನ ಉತ್ತರ ಮತಕ್ಷೇತ್ರದ ಮಾಜಿ ಶಾಸಕ ಪಿರೋಜ್ ಸೇಠ ಅವಧಿಯಲ್ಲಿಯೇ ಈ ವಸತಿ ಗೃಹಗಳು ನಿರ್ಮಾಣವಾಗಿವೆ.ಅರ್ಹ ಪಲಾನುಭವಿಗಳ ಹೆಸರುಗಳ ಪಟ್ಟಿಯನ್ನು ಸಿದ್ಧ ಪಡೆಸಿದರು 2018 ರ ವಿಧಾನ ಸಭೆ ಚುನಾವಣೆ ನಂತರ ಮನೆಗಳನ್ನು ಹಸ್ತಾಂತರಿಸಬೇಕೆಂದುಕೊಂಡಿದ್ದರು.ಆದರೆ ನೂತನ ಶಾಸಕರಾಗಿ ಅನಿಲ ಬೆನಕೆ ಆಯ್ಕೆಯಾದ ಹಿನ್ನಲೆ ಮನೆಗಳ ಹಸ್ತಾಂತರದಲ್ಲಿ ಗೊಂದಲ ನಿರ್ಮಾಣವಾಗಿ ಇಂದಿಗೂ ಮನೆಗಳು ಹಸ್ತಾಂತರವಾಗಿಲ್ಲ.

ಶ್ರೀನಗರದಲ್ಲಿ ನಿರ್ಮಾಣವಾಗಿರುವ ಈ ವಸತಿ ಮನೆಗಳು ಮೊದಲು ಅಲ್ಲಿ ವಾಸವಾಗಿದ್ದ ಸುಮಾರು 120 ಕುಟುಂಬಗಳ ಸ್ಲಂ ನಿವಾಸಿಗಳಿಗೆ ಮನೆಗಳನ್ನು ನೀಡಿ ಉಳಿದ 130 ಮನೆಗಳ ನೀಡುವಲ್ಲಿ ಹಾಲಿ-ಮಾಜಿ ಶಾಸಕರ ನಡುವೇ ಕಿತ್ತಾಟಕ್ಕೆ ಕಾರಣವಾಗಿದೆ.ಮಾಜಿ ಶಾಸಕರು ಸಿದ್ದ ಪಡೆಸಿದ ಪಟ್ಟಿಗೆ ಹಾಲಿ ಶಾಸಕರು ಆಕ್ಷೇಪ ವ್ಯಕ್ತ ಪಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಮಾರ್ಟ್‍ಸಿಟಿಯತ್ತ ದಾಪುಗಾಲಿಡುತ್ತಿರುವ ನಗರದಲ್ಲಿ ಸುಮಾರು 17 ಸ್ಲಂಗಳಿರುವುದು ನಿಜಕ್ಕೂ ವಿಪರ್ಯಾಸ ಸಂಗತಿ.ಸರಕಾರ ವಸತಿ ಯೋಜನೆಯಲ್ಲಿ ಹಣ ನೀಡಿ ಮನೆ ನಿರ್ಮಾಣವಾದರೂ ಜನಪ್ರತಿನಿಧಿಗಳ ತಿಕ್ಕಾಟಕ್ಕೆ ಬಡ ಜನತೆ ಗುಡಿಸಲಲ್ಲಿಯೇ ಕಾಲ ಕಳೆಯ ಬೇಕಾಗಿದೆ.

ಮಳೆ ಬಂದರೆ ಸೊರುವ, ಸಂಜೆಯಾದರೆ ಹುಳ ಹುಪ್ಪಡಿಗಳ ಹಾವಳಿಯಲ್ಲಿ ಕತ್ತಲಿನಲ್ಲಿಯೆ ಕಾಲ ಕಳೆಯುವ ಅನಿರ್ವಾಯತೆ ಇಲ್ಲಿನ ಬಡ ಜನತೆಯದ್ದಾಗಿದೆ,ತಮ್ಮ ಬೆಂಬಲಿಗರಿಗೆ ಮನೆ ಕೊಡಿಸುವಲ್ಲಿ ಪೈಪೋಟಿಗೆ ಬೀಳುವುದನ್ನು ಬಿಟ್ಟು ಬಡ ಜನತೆಗೆ ಮನೆ ಹಸ್ತಾಂತರ ಮಾಡಲಿ ಎಂಬುವುದು ಇಲ್ಲಿನ ಜನರ ಒತ್ತಾಯವಾಗಿದೆ.

loading...