ಹಾರ್ದಿಕ್‌, ರಾಹುಲ್‌ ವಿವಾದಾತ್ಮಕ ಹೇಳಿಕೆ: ಕೊನೆಗೂ ಮೌನ ಮುರಿದ ನಾಯಕ ಕೊಹ್ಲಿ

0
0
loading...

ಸಿಡ್ನಿ:- ಟಿವಿ ಕಾರ್ಯಕ್ರಮವೊಂದರಲ್ಲಿ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌ ರಾಹುಲ್‌ ಮಹಿಳೆಯರ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆ ಸಂಬಂಧ ಕೊನೆಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೌನ ಮುರಿದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ” ‘ಕಾಫಿ ವಿಥ್‌ ಕರನ್‌’ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತ ಹೇಳಿಕೆಯು ಹಾರ್ದಿಕ್‌ ಪಾಂಡ್ಯ ಹಾಗೂ ರಾಹುಲ್ ಅವರ ವೈಯಕ್ತಿಕ ಅಭಿಪ್ರಾಯ. ಹಾಗಾಗಿ, ಭಾರತ ತಂಡದ ಎಲ್ಲ ಆಟಗಾರರೂ ಅದೇ ರೀತಿ ಎಂದು ಭಾವಿಸುವುದು ಸರಿಯಲ್ಲ” ಎಂದು ಹೇಳಿದರು.
“ನಾವೆಲ್ಲ ಜವಾಬ್ದಾರಿಯುತ ಕ್ರಿಕೆಟಿಗರಾಗಿದ್ದು, ವೈಯಕ್ತಿಕ ಅಭಿಪ್ರಾಯವನ್ನು ಭಾರತ ತಂಡದೊಂದಿಗೆ ಸರಿಹೊಂದಿಸಬಾರದು. ಈ ಪ್ರಕರಣ ಸಂಬಂಧ ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕಾಗಿ ಕಾಯುತ್ತಿದ್ದೇವೆ. ಈ ಪ್ರಕರಣದಿಂದ ತಂಡದಲ್ಲಿ ಯಾವುದೇ ಪರಿಣಾಮ ಬೀರಲ್ಲ ಹಾಗೂ ತಂಡದ ಆಟಗಾರರಲ್ಲಿನ ಆತ್ಮವಿಶ್ವಾಸ ಕಡಿಮೆಯಾಗುವುದಿಲ್ಲ. ಈ ವಿವಾದಾತ್ಮಕ ಹೇಳಿಕೆ ಬಗ್ಗೆ ಅಂತಿಮ ನಿರ್ಧಾರ ಹೊರಬಂದಾಗ ಒಮ್ಮೆ ಸಂಯೋಜನೆಯನ್ನು ಪರಿಗಣಿಸಬೇಕು” ಎಂದು ಹೇಳಿದರು.
ಸಿಡ್ನಿಯಲ್ಲಿ ನಡೆಯುವ ಮೊದಲ ಏಕದಿನ ಪಂದ್ಯಕ್ಕೆ ಅಂತಿಮ 12 ಆಟಗಾರರ ಆಯ್ಕೆ ಇನ್ನೂ ನಡೆದಿಲ್ಲ. ಕ್ರಿಕೆಟ್‌ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರಾಯ್‌ ಅವರು, ಹಾರ್ದಿಕ್‌ ಹಾಗೂ ರಾಹುಲ್‌ ಅವರನ್ನು ಎರಡು ಏಕದಿನ ಪಂದ್ಯಗಳಿಗೆ ನಿಷೇಧ ಹೇರುವಂತೆ ಗುರುವಾರ ಶಿಫಾರಸ್ಸು ಮಾಡಿದ್ದರು. ಹಾಗಾಗಿ, ಇವರಿಬ್ಬರ ಲಭ್ಯತೆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ ಎಂದರು.
ಮಹಿಳೆ ಕುರಿತು ವಿವಾದಾತ್ಮಕ ಹೇಳಿಕೆ ಸಂಬಂಧ ಹಾರ್ದಿಕ್‌ ಪಾಂಡ್ಯ ಟ್ವಿಟರ್‌ನಲ್ಲಿ ಕ್ಷಮೆ ಕೋರಿದ್ದರು. ಅಲ್ಲದೆ, ಹಿರಿಯ ವಿಕೆಟ್‌ ಕೀಪರ್‌, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ತರಬೇತುದಾರ ರವಿಶಾಸ್ತ್ರಿ ಅವರ ಬಳಿಯೂ ಕ್ಷಮೆ ಕೋರಿದ್ದರು. ಆದರೆ, ಕೆ.ಎಲ್‌. ರಾಹುಲ್‌ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

loading...