೧೦ ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ !

0
1
loading...

೧೦ ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ !

ಸ್ಥಾಯಿ ಸಲಹಾ ಸಮಿತಿ ಮುಂದೆ ಹದಿನಾರು ಕೈದಿಗಳ ನೇಮ್ | ೧೦ ಜನರ ಹೆಸರು ಶಿಫಾರಸ್ಸು

ಮಾಲತೇಶ ಮಟಿಗೇರ

ಬೆಳಗಾವಿ: ಹಿಂಡಲಗಾ ಕಾರಾಗೃಹದಲ್ಲಿ ಹದಿನಾಲ್ಕು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ೧೦ ಕೈದಿಗಳು ಗಣರಾಜ್ಯೋತ್ಸವ ದಿನಾಚರಣೆಯಂದು ಬಿಡುಗಡೆಗೊಳ್ಳಬಹುದೆಂದು ನೀರಿಕ್ಷೆಯಲ್ಲಿದ್ದಾರೆ. ಸ್ಥಾಯಿ ಸಲಹಾ ಸಮಿತಿ ಸಭೆಯಲ್ಲಿ ಹತ್ತು ಜನರ ಹೆಸರನ್ನು ಸರ್ಕಾರಕ್ಕೆ ಸಿಪ್ಪಾರಸ್ಸು ಮಾಡಲಾಗುತ್ತಿದೆ.
ಹಿಂಡಲಗಾ ಕಾರಾಗೃಹ ಸ್ಥಾಯಿ ಸಲಹಾ ಸಮಿತಿ ಸಭೆಯು ಸನ್ನಡತೆಯ ಆಧಾರದ ಮೇಲೆ ಅವಧಿ ಪೂರ್ವ ಹತ್ತು ಕೈದಿಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಗುರುವಾರ ನಡೆದ ಸಭೆಯಲ್ಲಿ ತಿರ್ಮಾನಿಸಿದ್ದಾರೆ. ರಾಜ್ಯಪಾಲರ ಅಂಕಿತ ದೊರತರೆ ಜನೇವರಿ ೨೬ ನಡೆಯುವ ಗಣರಾಜ್ಯೋತ್ಸವದ ದಿನದಂದು ಕೈದಿಗಳಿಗೆ ಬಿಡುಗಡೆ ಭಾಗ್ಯ ದೊರೆತು. ಜೈಲು ವಾಸದಿಂದ ಮುಕ್ತಿ ಹೊಂದಲಿದ್ದಾರೆ.

ಸಭೆಯ ಮುಂದೆ ೧೬ ಕೈದಿಗಳ ಹೆಸರು : ಹಿಂಡಲಗಾದಲ್ಲಿ ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಪೊಲೀಸ್ ಅಧೀಕ್ಷರು , ಅಧೀಕ್ಷಕರು ಮತ್ತು ಜಿಲ್ಲಾ ಶಸ್ತç ಚಿಕಿತ್ಸಕರು , ಅಭಿಮನ್ಯು ಎನ್.ಡಿ, ಅನುಶ್ರೀ ದಿನೇಶ ದೇಶಪಾಂಡೆ ಸೇರಿ ಆರು ಸದಸ್ಯರ ಒಳಗೊಂಡ ಸ್ಥಾಯಿ ಸಲಹಾ ಮಂಡಳಿಯು ಗುರುವಾರ ಸಂಜೆ ೫ ಗಂಟೆಯಿಂದ ನಡೆದ ಸಭೆಯ ಮುಂದೆ ಒಟ್ಟು ೧೬ ಕೈದಿನಗಳ ಹೆಸರು ಕೇಳಿ ಬಂದಿದ್ದವು, ಅವರುಗಳಲ್ಲಿ ೨ ಜನ ಮಹಿಳೆ ಹಾಗೂ ೮ ಜನ ಪುರುಷ ಒಟ್ಟು ೧೦ ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೆ ಯೋಗ್ಯರೆಂದು ಗುರುತಿಸಿ ಹತ್ತು ಜನರನ್ನು ಆಯ್ಕೆ ಮಾಡುವ ಮೂಲಕ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಹತ್ತು ಜನ ಕೈದಿಗಳ ಹೆಸರು ಶಿಪ್ಪಾರಸ್ಸು : ಮಹ್ಮದ್ ಹವಾಲ್ದಾರ, ರಾಜಪ್ಪ ಕದಲಿ, ಶ್ರೀರಾಜ ಸಾಂಬರೇಕರ, ಪರ್ನಾಂಡಿಸ್ ಡಿಸೋಜಾ, ಯಲ್ಲಪ್ಪಾ ಹರಿಜನ, ಬಸಯ್ಯ ಹಿರೇಮಠ, ಮಲ್ಲಪ್ಪಾ ಅಕಲನೂರ, ಗಂಗಾದರ ಕಾಡಗೇ, ಲಕ್ಷ್ಮೀ ನಾಯಕ, ರೇಣುಕಾ ಕಮ್ಮಾರ ಎಂಬ ಹೆಸರುಗಳನ್ನು ಸ್ಥಾಯಿ ಸಲಹಾ ಸಮಿತಿ ಮಂಡಳಿ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದಾರೆ ಎಂದು ಎನ್ನಲಾಗಿದೆ.

ಒಟ್ಟಾರೆಯಾಗಿ ಕೆಟ್ಟ ಗಳಿಗೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದ ಕೈದಿಗಳು ಜೈಲಿನ ಒಳಗಡೆ ತಮ್ಮ ನಡತೆಯ ಆಧಾರದ ಮೇಲೆ ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ಬಿಡುಗಡೆಗೊಳ್ಳುವಂತೆ ಬಾರಿಯೂ ಸಹ ಜನೇವರಿ ೨೬ರಂದು ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ವಿವಿಧ ಕಾರಾಗೃಹಗಳಿಂದ ಬಿಡುಗಡೆ ಮಾಡುವಂತೆ ಹಿಂಡಲಗಾ ಕಾರಾಗೃಹದಿಂದ ೧೦ ಜನ ಕೈದಿಗಳ ಹೆಸರು ಕೇಳಿ ಬಂದಿದೆ.

loading...