2022ರ ವಿಶ್ವಕಪ್‌ವರೆಗೂ ಟೈಟ್‌ ಬ್ರೆಜಿಲ್ ತಂಡದ ಕೋಚ್‌ ಆಗಿ ಮುಂದುವರಿಕೆ

0
0
loading...

ರಿಯೋ ಡಿ ಜನೈರೊ:- ಮುಂಬರುವ ಕೊಪಾ ಅಮೆರಿಕಾ ಟೂರ್ನಿಯಲ್ಲಿ ತಂಡದ ಪ್ರದರ್ಶನದ ಹೊರತಾಗಿಯೂ 2022ರ ಕತಾರ್‌ ವಿಶ್ವಕಪ್‌ವರೆಗೂ ಬ್ರೆಜಿಲ್‌ ತಂಡದ ಮುಖ್ಯ ತರಬೇತುದಾರರಾಗಿ ಟೈಟ್‌ ಮುಂದುವರಿಯಲಿದ್ದಾರೆಂದು ಬ್ರೆಜಿಲ್‌ ಫುಟ್ಬಾಲ್‌ ಒಕ್ಕೂಟದ ಅಧ್ಯಕ್ಷ ರೊಗೆರಿಯೊ ಕ್ಯಾಬೋಕ್ಲೊ ಸ್ಪಷ್ಪಡಿಸಿದ್ದಾರೆ.
ತಂಡದಲ್ಲಿ ಉಂಟಾದ ಅವ್ಯವಸ್ಥೆಯಿಂದಾಗಿ 1994ರ ಫಿಫಾ ವಿಶ್ವಕಪ್‌ ಚಾಂಪಿಯನ್‌ ಬ್ರೆಜಿಲ್‌ ತಂಡದ ನಾಯಕ ದುಂಗಾ ಅವರ ಸ್ಥಾನಕ್ಕೆ 2016ರಲ್ಲಿ ಟೈಟ್‌ ಅವರನ್ನು ಮುಖ್ಯ ತರಬೇತುದಾರರನ್ನಾಗಿ ನೇಮಿಸಲಾಗಿತ್ತು. ಅವರ ಗುತ್ತಿಗೆ ಅವಧಿ 2022ರ ಕತಾರ್‌ ಫಿಫಾ ವಿಶ್ವಕಪ್‌ ಟೂರ್ನಿಯವರೆಗೂ ಮೂಂದುವರಿಯಲಿದೆ ಎಂದು ಕ್ಯಾಬೋಕ್ಲೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಟೈಟ್ ಅವರ ಸಾರಥ್ಯದಲ್ಲಿ ಬ್ರೆಜಿಲ್‌ ತಂಡ, ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನ 9 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಕಳೆದ ವರ್ಷ ರಷ್ಯಾದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಬ್ರೆಜಿಲ್‌ ತಂಡ, ಬೆಲ್ಜಿಯಂ ವಿರುದ್ಧ ಸೋತು ಟೂರ್ನಿಯಿಂದ ಹೊರ ನಡೆದಿತ್ತು. ಫ್ರಾನ್ಸ್ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಕೊಪಾ ಅಮೆರಿಕಾ ಟೂರ್ನಿ ಜೂ.14 ರಿಂದ ಜು. 7ರವರೆಗೆ ನಡೆಯಲಿದೆ.

loading...