ಆರೋಗ್ಯಕ್ಕಾಗಿ ಪೌಷ್ಠಿಕಾಂಶ ಆಹಾರ ಅಗತ್ಯ: ಡಾ.ವನಿತಾ

0
3
loading...

ಶಾಂತಾದೇವಿ ಮಹಾಲಿಂಗಪ್ಪ ಬಣಕಾರ ದತ್ತಿ ಉಪನ್ಯಾಸ ಸಾಧಕರ ಸನ್ಮಾನ ಕಾರ್ಯಕ್ರಮ

ಆರೋಗ್ಯಕ್ಕಾಗಿ ಪೌಷ್ಠಿಕಾಂಶ ಆಹಾರ ಅಗತ್ಯ: ಡಾ.ವನಿತಾ

ಕನ್ನಡಮ್ಮ ಸುದ್ದಿ-ಬೆಳಗಾವಿ: ಹೆಣ್ಣು ಮಕ್ಕಳಲ್ಲಿ ಉದರದರ್ಶಕ ಚಿಕಿತ್ಸೆ ಲ್ಯಾಪ್ರೊÃಸ್ಕೊಪಿ ಹಿನ್ನಲೆ ಲ್ಯಾಪ್ರೊÃಸ್ಕೊಪಿ ಚಿಕಿತ್ಸೆಯಿಂದ ರೋಗಿಗಳಿಗೆ ಆಗುವ ಲಾಭಗಳು ಮತ್ತು ಉದರದರ್ಶಕ ಮೂಲಕ ಬಂಜೆತನಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಸಹಾಯಕವಾಗಿದೆ ಎಂದು ಡಾ.ವನಿತಾ ಮೆಟಗುಡ್ಡ ತಿಳಿಸಿದರು.

ಸ್ಥಳಿಯ ಕ.ಸಾ.ಪ ಜಿಲ್ಲಾ ಘಟಕ ಬೆಳಗಾವಿ ಶನಿವಾರ ೦೯ ರಂದು ಮಹಾಂತೇಶ ನಗರದ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವತಿಯಿಂದ ಶಾಂತಾದೇವಿ ಮಹಾಲಿಂಗಪ್ಪ ಬಣಕಾರದತ್ತಿ ಉಪನ್ಯಾಸ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಉಪನ್ಯಾಸಕರಾದ ಡಾ.ಅಂಜಲಿ ಜೋಶಿಯವರು ಪ್ರಶಿಕ್ಷಣಾರ್ಥಿಗಳನ್ನು ಉದ್ದೆÃಶಿಸಿ ಹೆಣ್ಣು ಮಕ್ಕಳ ಆರೋಗ್ಯದಕುರಿತು ವಿಷೇಶವಾಗಿ ಪೌಷ್ಠಿಕಾಂಶ ಯುಕ್ತ ಆಹಾರಗಳ ಸೇವನೆ ಮಾಡದೇಇರುವದರಿಂದ ಇತ್ತಿÃಚಿನ ಹೆಣ್ಣು ಮಕ್ಕಳ ದೈಹಿಕಆರೋಗ್ಯದ ಅಸಮತೋಲನತೆ ಹೆಚ್ಚಾಗಿ ರಕ್ತ ಹೀನತೆಯ ಕಾಯಿಲೆಗಳಿಗೆತುತ್ತಾಗುತ್ತರೆ. ಇದನ್ನು ತಪ್ಪಿಸಿ ದೈಹಿಕ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳುಲು ಯೋಗ, ಸಮತೋಲನ ಆಹಾರಉತ್ತಮ ಹವ್ಯಾಸಗಳನ್ನು ಬೆಳಸಿಕೊಂಡು ದೈಹಿಕಆರೋಗ್ಯದ ಸಮತೋಲನ ಕಾಪಾಡಿಕೊಳ್ಳುವ ಬಗೆಯನ್ನು ತಿಳಿಸಿದರು.
ಕಾರ್ಯಕ್ರಮzಲ್ಲಿ ಮಂಗಳಾ ಮೆಟಗುಡ್ಡ ಅಧ್ಯಕ್ಷರು ಕ.ಸಾ.ಪ ಬೆಳಗಾವಿ. ಆಶಯ ನುಡಿಗಳನ್ನಾಡಿದರು. ಡಾ. ನಿರ್ಮಲಾ ಬಟ್ಟಲ್ ಪ್ರಾಚಾರ್ಯರು ಮ.ನ.ರ. ಸಂಘದ ಶಿಕ್ಷಣ ಮಹಾವಿದ್ಯಾಲಯರವರುಅಧ್ಯಕ್ಷತೆಯನ್ನುವಹಿಸಿದ್ದರು.ಇವರುಪ್ರಶಿಕ್ಷಣಾರ್ಥಿಗಳನ್ನು ಉದ್ದೆÃಶಿಸಿ ಮಹಿಳೆಯರ ಸಂತಾನೋತ್ಪತ್ತಿ ಪ್ರಕ್ರಿಯೆಯುಕುಂಟಿತವಾಗುವಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಅನುಕರಣೆಯು ಮಹಿಳೆಯ ಸ್ವಾವಲಂಬನೆ, ವೃತ್ತಿ, ಮಹಿಳೆಯರ ಸಂತಾನೋತ್ಪತ್ತಿ ಪ್ರಕ್ರಿಯೆಯುಕುಂಟಿತವಾಗುವಲ್ಲಿಕಾರಣವಾಗಿದೆ. ಆರೋಗ್ಯದ ವಿಷಯದಲ್ಲಿಜನರಲ್ಲಿಜ್ಞಾನಕ್ಕಿಂತಅಜ್ಞಾನವೇ ಹೆಚ್ಚಾಗಿರುವದರಿಂದಶರೀರ ಶಾಸ್ತçÀ ವಿಷಯ ವಸ್ತುವು ಕನ್ನಡದಲ್ಲಿದ್ದರೆಆರೋಗ್ಯದಅರಿಯು ಮೂಡಿಸಲುಸುಲಭವಾಗಿರುತ್ತದೆಆದ್ದರಿಂದ ವೈದ್ಯಕೀಯ ಸಾಹಿತ್ಯವು ಹೆಚ್ಚು ಕನ್ನಡದಲ್ಲಿ ಪ್ರಟಕವಾಗಬೇಕುಎಂದು ತಿಳಿಸಿದರು.
ಶಾಂತಾದೇವಿ ಬಣಕಾರ ದತ್ತಿ ಪ್ರಶಸ್ತಿ ಪಯಣ ಕವನ ಸಂಕಲನವನ್ನು ಕವಿಗಳಾದ ಎನ್. ಡಿ. ಚಿನ್ನಪ್ಪಗೌಡರ ಅವರಿಗೆ ನಗದು ಪ್ರಶಸ್ತಿ ಪಲಕ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಿ.ಕೆ ಜೋರಾಪುರ, ಡಾ.ಚಂದ್ರಶೇಖರ, ಬಿ ಗಣಚಾರಿ, ರಾಜು ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಪ್ರಶಿಕ್ಷಣಾರ್ಥಿಗಳು &ಕನ್ನಡ ಸಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸದಸ್ಯರು, ಸಂಘಟಿಕರು ಉಪಸ್ಥಿತರಿದ್ದರು.

ಪ್ರಶಿಕ್ಷಣಾರ್ಥಿಗಳು ಪ್ರಾರ್ಥಿಸಿದರು, ಶೈಲಜಾ ಬಿಂಗೆ ಸ್ವಾಗತಿಸಿದರು, ಎಮ್ ವಾಯ್ ಮೆಣಸಿನಕಾಯಿ ಸರ್ವರನ್ನು ಪರಿಚಯಿಸಿದರು. ಬಸವರಾಜ ಸಸಾಲಟ್ಟಿ, ಶಾಂತಾ ಮಸೂತಿ, ಯು.ಡಿ ಚಿನ್ನಪ್ಪಗೌಡರ, ವೀರುಪಾಕ್ಷ ಮಡಿವಾಳರ, ಕೃಷ್ಟಾ ರೇಡೆಕರ್, ಸರಾ ಸುಳಕೋಡೆ, ಸುಭಾಷ ಏಣಗಿ, ಸುನಂದಾ ಏಮ್ಮಿ, ನಿರ್ಮಲಾ ಪಾಟೀಲ, ಭುವನೇಶ್ವರಿ ಪೂಜಾರಿ, ಸೈಲಜಾ ಹಿರೇಮಠ, ನಯನಾ ಗಿರಿಗೌಡರ, ಜ್ಯೊÃತಿ ಬದಾಮಿ ಹಾಗೂ ಇತರರು ಉಪಸ್ಥಿತರಿದ್ದರು. ಹೇಮಾ ಸೋನಳ್ಳಿ ನಿರೂಪಿಸಿದರು. ವಾಯ್.ಎಮ್.ಮೆನಸಿನಕಾಯಿ ವಂದಿಸಿದರು.

loading...