ಎಟಿಪಿ ಟೂರ್ನಿ: ಸೆಮಿಫೈನಲ್‌ ತಲುಪಿದ ರೋಹನ್‌ ಬೋಪಣ್ಣ ಜೋಡಿ

0
5
loading...

ಚಂಡೀಗಡ:- ಭಾರತದ ರೋಹನ್‌ ಬೋಪಣ್ಣ ಹಾಗೂ ಡಿವಿಜ್‌ ಶರಣ್‌ ಪುರುಷರ ಡಬಲ್ಸ್‌ ಜೋಡಿಯು ಬಲ್ಗೇರಿಯಾದ ಅಲೆಕ್ಸಾಂಡರ್‌ ಡೊನಸ್ಕಿ ಮತ್ತು ಅಲೆಕ್ಸಾಂಡರ್‌ ಲಜರ್ವ್ ಜೋಡಿಯನ್ನು 6-3, 6-1 ನೇರ ಸೆಟ್‌ಗಳಿಂದ ಸೋಲಿಸಿ ಎಟಿಪಿ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ತಲುಪಿದೆ.
ಬಲ್ಗೇರಿಯಾದಲ್ಲಿ ನಡೆದ 50 ನಿಮಿಷಗಳ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಜೋಡಿಯು ಸ್ಥಳೀಯ ಜೋಡಿಯ ವಿರುದ್ಧ ಪಾರಮ್ಯ ಮೆರೆಯಿತು.
ತನ್ನ ಚುರುಕಾದ ಆಟದ ನೆರವಿನಿಂದ ಎರಡೂ ಸೆಟ್‌ಗಳಲ್ಲಿ ಜಯಬೇರಿ ಬಾರಿಸಿತು. ರೋಹನ್‌ ಬೋಪಣ್ಣ ಜೋಡಿ ಅಂತಿಮ ನಾಲ್ಕರ ಘಟ್ಟದಲ್ಲಿ ಇಂಡೋನೇಷ್ಯಾದ ಕ್ರಿಸ್ಟೋಫರ್ ರಂಗ್ಕಾಟ್ ಹಾಗೂ ಚೈನೀಸ್‌ ತೈಪೈನ ಚೆಂಗ್‌-ಪೆಂಗ್‌ ವಿರುದ್ಧ ಸೆಣಸಲಿದೆ.
ಜೀವನ್‌ ಹಾಗೂ ಪುರವ್‌ ಭಾರತದ ಪುರುಷರ ಮತ್ತೊಂದು ಜೋಡಿಯು ಕ್ರೊವೇಷ್ಯಾದ ನಿಕೋಲಾ ಮೆಕ್ಟಿಚ್‌ ಹಾಗೂ ಆಸ್ಟ್ರೀಯಾದ ಜುರ್ಗೆನ್ ಮೆಲ್ಜರ್ ಜೋಡಿಯ ವಿರುದ್ಧ 5-7, 6-4, 10-5 ಅಂತರದಲ್ಲಿ ಸೋಲುವ ಮೂಲಕ ಟೂರ್ನಿಯ ಅಭಿಯಾನ ಮುಗಿಸಿತು.

loading...