ಕರುಳಿನ ಕುಡಿಗಾಗಿ, ತಾಯಿಯಿಂದ ಕಿಡ್ನಿ ಧಾನ

0
3
loading...

ಕರುಳಿನ ಕುಡಿಗಾಗಿ, ತಾಯಿಯಿಂದ ಕಿಡ್ನಿ ಧಾನ

ಮಗನ ಚಿಕಿತ್ಸೆಗಾಗಿ ಹಣ ಹೊಂದಿಸಲು ಹೆಣಗಾಡುತ್ತಿರುವ ತಾಯಿ,
ದಾನಿಗಳ ಬಳಿ ಸಹಾಯಹಸ್ತಕ್ಕಾಗಿ ಕೈ ಚಾಚಿದ ತಾಯಿ

ಅಶೋಕ ಬಾ.ಮಗದುಮ್ಮ
ಬೆಳಗಾವಿ: ಒಂದಡೇ ಆರ್ಥಿಕ ಸಂಕಷ್ಠ, ಇನ್ನೊಂದೆಡೆ ಮಗನ ಪ್ರಾಣ ಸಂಕಟ ಎರಡರ ಮಧ್ಯೆ ತೊಳಲಾಡುತ್ತಿರುವ ತಾಯಿಯು ಮಗನ ವೈದ್ಯಕೀಯ ಚಿಕಿತ್ಸೆಗಾಗಿ, ಹಣ ಹೊಂದಿಸಲು ಹೆಣಗಾಡುತ್ತಿದ್ದಾಳೆ.
ಎರಡು ಕಿಡ್ನಿ ವೈಪಲ್ಯಕ್ಕೊಳ್ಳಗಾದ ತನ್ನ ಕರುಳಿನ ಕುಡಿಯನ್ನು ಉಳಿಸಿ ಕೊಳ್ಳಲು ಸಹಾಯಹಸ್ತಕ್ಕಾಗಿ ತಾಯಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾಳೆ. ಮಗನ ಪ್ರಾಣವನ್ನು ಉಳಿಸಿಕೊಳ್ಳಲು ತನ್ನದೊಂದು ಕಿಡ್ನಿಯನ್ನೆ ನೀಡಲು ಮುಂದಾಗಿದ್ದಾಳೆ.
ಜಿಲ್ಲೆಯ ಹುಕ್ಕೆÃರಿ ತಾಲೂಕಿನ ಅಮ್ಮಣಿಗಿಯ ಕಡು ಬಡಕುಂಟುಂಬದಲ್ಲಿ ಬೆಳೆದ ಬಂದ ಇತ್ತ. ತಾಯಿ ಲಲಿತಾ ಅವರ ಪುತ್ರ ೨೯ ವರ್ಷದ ಬಬ್ರುವಾಹನ ಕಾಂಬಳೆ ಅವರನ್ನು ಉಳಿಕೊಳ್ಳಲು ತಾಯಿ ಇನ್ನಿಲ್ಲದ ಕಷ್ಟಪಡುತ್ತಿದ್ದಾರೆ.
ಬಬ್ರುವಾಹನ ಚಿಕ್ಕ ವಯಸ್ಸಿನಲ್ಲೆÃ ತನ್ನ ತಂದೆ ಕಳೆದುಕೊಂಡಿದ್ದಾರೆ. ಕಿತ್ತು ತ್ತಿನ್ನುವ ಬಡತನದಲ್ಲಿ ತಾಯಿ ಕೂಲಿ-ನಾಲಿ ಮಾಡಿ ಮಗನನ್ನು ಸಾಕಿದ್ದಾರೆ.
ಓದಿ ಜೀವನದಲ್ಲಿ ಏನ್ನಾದರೂ ಸಾಧನೆ ಮಾಡಬೇಕೆಂಬ ಕನಸು ಕಂಡಿದ ಬಬ್ರುವಾಹನಿಗೆ ಕಳೆದ ಒಂದೂವರೆ ವರ್ಷದಿಂದ ಕಿಡ್ನಿ ವೈಪಲ್ಯ ಆದರಿಂದ ದೊಡ್ಡದೊಂದು ಆಘಾತಕ್ಕೆ ಒಳಗಾಗಿದ್ದಾರೆ.
ಓದಿನ ಖರ್ಚಿಗಾಗಿ ಹೋಟೆಲನಲ್ಲಿ ಕೆಲಸ ಮಾಡುತ್ತಾ, ಬಿಎ ಓದುತ್ತಿರುವ ಬಬ್ರುವಾಹನ, ಬೆಳಗಾವಿಯ ಸರ್ಕಾರಿ ವಸತಿ ನಿಲಯದಲ್ಲಿ ಉಳಿದುಕೊಂಡಿದ.್ದ ಇವರಿಗೆ, ಎರಡು ಕಿಡ್ನಿಗಳು ವಿಪಲವಾಗಿವೆ ಎಂದು ತಿಳಿದು ಚಿಕಿತ್ಸೆಗಾಗಿ ನಾಲ್ಕು ತಿಂಗಳಿಂದ ಕೆಎಲ್‌ಇ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸುತ್ತಿದ್ದಾರೆ.
ಒಂದು ಬಾರಿ ಡಯಾಲಿಸಿಸ್ ಮಾಡಿಸಿದರೆ ೨ ಸಾವಿರ ರೂ. ಬೇಕಾಗುತ್ತದೆ. ಮೊದಲೇ ಒಂದು ಹೊತ್ತು ಊಟಕ್ಕೆ ಈಡೀದಿನ ಶ್ರಮಪಡುತ್ತಿರುವ ಕುಂಟುಂಬಕ್ಕೆ ೨ ಸಾವಿರ ರೂ. ಮಾತು ಕೇಳಿ ಸಿಡಿಲು ಬಡಿದಂತಾಗಿದೆ.
ನಿಮ್ಮ ಮಗನಿಗೆ ಕಿಡ್ನಿ ನೀಡಲು ಏನಿಲ್ಲವೆಂದರೂ ೫ ರಿಂದ ೬ ಲಕ್ಷ ರೂ ಖರ್ಚಾಗಬಹುದು ಎಂದು ವೈದ್ಯರು ಹೇಳಿದಾರೆ. ತಮ್ಮಗಾಗಿರುವ ಸಂಕಷ್ಠ ಇನ್ಯಾವುದೇ ತಾಯಿ ಮಗನಿಗೆ ಬಾರದಿರಲ್ಲಿ ಎಂದು ತಾಯಿ ಲಲಿತಾ ಕಾಂಬಳೆ ಮಾಧ್ಯಮದವರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.
ಇದು ವರೆಗೂ ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು ೧.೫೦ ಲಕ್ಷ ರೂ ಹಣವನ್ನು ಕೈಸಾಲ ಮಾಡಿದ್ದೆವೆ, ಮಾರಲಿಕ್ಕೆ ಮನೆ, ಹೊಲವಿಲ್ಲ ಕೂಲಿ ಮಾಡಿ ಜೀವನ ಸಾಗಿಸಬೇಕಾಗಿದೆ.
ನಿದ್ರೆ, ಸರಿಯಾಗಿ ಊಟವಿಲ್ಲದಕ್ಕೆ ನಿಮ್ಮ ಮಗನಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಕಾಣಿಸಿಕೊಂಡಿದೆ. ಮತ್ತು ಎರಡು ಕಿಡ್ನಿಗಳು ವಿಪಲವಾಗಿದೆ. ಬಬ್ರುವಾಹನನ್ನು ಕಾಪಾಡಿಕೊಳ್ಳ ಬೇಕಾದರೆ, ಸರಿಯಾದ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಕಿಡ್ನಿ ಕಸಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಮಗನ ಪ್ರಾಣಕ್ಕೆ ತೊಂದರೆಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ದಿಕ್ಕೆತೊಚ್ಚದ ಕುಂಟುಂಬಸ್ಥರು ದಾನಿಗಳ ಬಳಿ ಸಹಾಯಹಸ್ತಕ್ಕಾಗಿ ಕೈ ಚಾಚಿದೆ, ಧನಸಹಾಯ ಮಾಡುವ ಧಾನಿಗಳು ನೇರವಾಗಿ ಈ ಬ್ಯಾಂಕ್ ಖಾತೆಗೆ ಹಣ ಕಳಿಸಬಹುದು.

Babruvahana Kamble

State Bank Of India,

Branch- Sankewar, TQ- Hukkeri,

A/C NO= 34307019194

IFSC CODE=0001727

Phone=9739149326

 

loading...