ಚೆನ್ನೈ, ಉತ್ತರ ಅಂಡಮಾನ್‌ನಲ್ಲಿ ಲಘು ಭೂಕಂಪ: ಜನರ ಆತಂಕ

0
3
loading...

ಚೆನ್ನೈ: ಚೆನ್ನೈ ನಗರದ ಕೆಲವೆಡೆ ಲಘು ಭೂಕಂಪನದ ಅನುಭವವಾಗಿದ್ದು, ಮಂಗಳವಾರ ಬೆಳಗ್ಗೆ ಸಮುದ್ರದಲ್ಲಿ 5.1 ಮಧ್ಯಮ ತೀವ್ರತೆ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ.
ಬೆಳಗ್ಗೆ 7.02ಕ್ಕೆ ಮಧ್ಯ ಬಂಗಾಳ ಕೊಲ್ಲಿಯ 10 ಕಿ.ಮೀ.ಆಳದಲ್ಲಿ ಮತ್ತು ಚೆನ್ನೈನ ಪೂರ್ವಕ್ಕೆ 600 ಕಿ.ಮೀ.ದೂರದಲ್ಲಿ ಭೂ ಕಂಪನ ಉಂಟಾಗಿದೆ ಎಂದು ಹವಾಮಾನ ಇಲಾಖೆಯ ಉಪ ಮಹಾ ನಿರ್ದೇಶಕ ಡಾ.ಎಸ್‌.ಬಾಲಚಂದ್ರನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಚೆನ್ನೈ ಮತ್ತು ಪೋರ್ಟ್‌ಬ್ಲೇರ್‌ ಭೂಕಂಪನಶಾಸ್ತ್ರ ಕೇಂದ್ರಗಳಲ್ಲಿ ಕಂಪನದ ತೀವ್ರತೆ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭೂ ಕಂಪನದಿಂದಾಗಿ ಚೆನ್ನೈ ಮತ್ತು ಉತ್ತರ ಅಂಡಮಾನ್‌ ಪ್ರದೇಶಗಳಲ್ಲಿ ಕಂಪನ ಉಂಟಾಗಿತ್ತು. ಸುನಾಮಿಯ ಮುನ್ನೆಚ್ಚರಿಕೆ ನೀಡಲಾಗಿಲ್ಲ ಎಂದು ಡಾ.ಬಾಲಚಂದ್ರನ್‌ ತಿಳಿಸಿದ್ದಾರೆ.
ಸಮುದ್ರದ ಆಳದಲ್ಲಿ ಇದು ಸಂಭವಿಸಿದ್ದು, ಯಾವುದೇ ಹಾನಿ ಉಂಟಾಗಿಲ್ಲ ಎಂದವರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಭೂಮಿ ಅಲುಗಾಡಿದ ಅನುಭವವಾಗಿದೆ ಎಂದು ಚೆನ್ನೈಯ ಹಲವು ನಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

loading...