ಡಾ.ಶಾಲೀನಿ ರಜನೀಶ್‌ಯವರಿಂದ ಶೂಛೀ ಪ್ಯಾಡ್ ಯಂತ್ರ ಉದ್ಘಾಟನೆ

0
52
loading...


ಕನ್ನಡಮ್ಮ ಸುದ್ದಿ- ಬೆಳಗಾವಿ : ಮರಾಠಾ ಮಂಡಳ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗಳಿಗೆ ಹಾಗೂ ಹಳ್ಳಿಗಳಲ್ಲಿರುವ ಬಡ ಹೆಣ್ಣುಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಸಿಗಲಿ ಎಂಬ ಉದ್ದೇಶದಿಂದ ಸ್ಯಾನಿಟರಿ ಪ್ಯಾಡ್ ಯಂತ್ರವನ್ನು ತಯಾರಿಸಿದ್ದು ಐಎಎಸ್ ಅಧಿಕಾರಿ ಶಾಲೀನಿ ರಜನೀಶ ಅವರು ಯಂತ್ರವನ್ನು ಭಾನುವಾರ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿ ಅವರು, ಮರಾಠಾ ಮಂಡಳ ಸಂಸ್ಥೆಯ ಅಧ್ಯಕ್ಷರಿಗೆ ಮೊದಲು ಧನ್ಯವಾದಗಳು ಹೇಳಬಯಸುತ್ತೆನೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಆರೋಗ್ಯ ದೃಷ್ಠಿಯಿಂದ ಸ್ಯಾನಿಟರಿ ನ್ಯಾಪಕಿನ್ ಪ್ಯಾಡ್ ತಯಾರಿಸುವ ಯಂತ್ರವನ್ನು ತಯಾರಿಸಿದ್ದಾರೆ. ಪ್ಯಾಡ್ ಗೆ ಶೂಚಿ ಎಂದು ಹೆಸರಿಡಲಾಗಿದೆ. ಇದೊಂದು ಉತ್ತಮ ಪ್ರೋಡೆಕ್ಟ್ ಆಗಿದ್ದು, ಬಡ ಹೆಣ್ಣು ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ದೊರೆಯಲಿದೆ. ಸಂಸ್ಥೆಯು ಸಮಾಜ ಸೇವೆಯ ಜೊತೆಗೆ ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆ ಹೊಂದಿರುವುದು ಸಂತಸದ ವಿಷವೆಂದರು. ಅಲ್ಲದೆ ಈ ಒಂದು ಪ್ರೊಡಕ್ಟ ವಿಚಾರವಾಗಿ ಈ ಹಿಂದೆ ರಾಜಶ್ರೀ ಅವರು ಸ್ಯಾನಿಟರಿ ಪ್ಯಾಡ್ ಯಂತ್ರದ ಬಗ್ಗೆ ಚರ್ಚೆಸಿದ್ದೆವು ಎಂದರು.
ಬಳಿಕ ಮರಾಠಾ ಮಂಡಳ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ನಾಗರಾಜ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸಾಮಾಜಿಕ ಕಾಳಜಿಯಿಂದ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗಳಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಡ ಹೆಣ್ಣು ಮಕ್ಕಳಿಗೊಸ್ಕರ ಕಡಿಮೆ ದರದಲ್ಲಿ ಸ್ಯಾನಿಟರಿ ನ್ಯಾಪಕಿನ್ ವಿತರಿಸುವ ಉದ್ದೇಶದಿಂದ ಸ್ವಚ್ಛ ನಾರಿ ಆರೋಗ್ಯ ನಾರಿ ಎಂಬ ಧೇಯ ವಾಕ್ಯಗಳೊಂದಿಗೆ ಸೋಛಿ ಎಂಬ ಹೆಸರಿನ ಸ್ಯಾನಿಟರಿ ನಾಪಕಿನ್ ತಯಾರಿಸುವ ಯಂತ್ರ ಅಳವಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಎಂಟಿಸಿಯ ಅಧ್ಯಕ್ಷ ನಾಗರಾಜ ಯಾದವ, ಡಾ.ವಿ.ಆರ್ ಉಡುಪಿ, ಡಾ. ವಿಜಯಲಕ್ಷ್ಮಿ, ಡಾ. ಎ.ಬಿ ಪವಾರ, ಎಸ್.ಎಂ ಸಾಂಬ್ರೇಕರ, ಎ.ಎನ್ ಪೊತದಾರ, ಎಸ್. ಕೆ ಶಿವಯೋಗಿಮಠ, ಆನಂದ ಮಟಕಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...