ದಾರೋಳಿ ಅರಣ್ಯ ಪ್ರದೇಶದಲ್ಲಿ ಕಾಡುಕೋಣ ಮೃತ ದೇಹ ಪತ್ತೆ !

0
8
loading...

ದಾರೋಳಿ ಅರಣ್ಯ ಪ್ರದೇಶದಲ್ಲಿ ಕಾಡುಕೋಣ ಮೃತ ದೇಹ ಪತ್ತೆ !
ಕನ್ನಡಮ್ಮ ಸುದ್ದಿ-ಬೆಳಗಾವಿ: ಖಾನಾಪೂರ ತಾಲೂಕಿನ ದಾರೋಳಿ ಅರಣ್ಯ ಪ್ರದೇಶದಲ್ಲಿ ಕಾಡುಕೋಣ ಮೃತ ದೇಹ ಪತ್ತೆಯಾಗಿದೆ.
ಶನಿವಾರ ಮದ್ಯಾಹ್ನ ವೇಳೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ದಾರೋಳಿ ಅರಣ್ಯದಲ್ಲಿ ಮೃತ ದೇಹ ಕಾಡುಕೋಣ ಕಳೆಬರ ಕಾಣಿಸಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳದಲ್ಲೇ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಇಲಾಖೆಯ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಿದರು.
ಮರಣೋತರ ಪರೀಕ್ಷೆ ನಡೆಸಿದ ಜಾಂಬೋಟ್ಟಿ ಪಶು ಆಸ್ಪತ್ರೆ ವೈದ್ಯರಾದ ಡಾಕ್ಟರ್ ಬಿ.ಸಿ.ಚವಾಣ, ೧೫ ವರ್ಷ ವಯಸ್ಸಿನ ಕಾಡುಕೋಣ ದ ಕಣ್ಣಿಗೆ ಕ್ಯಾಟರಾಕ್ಟ್ ರೋಗ ತಗುಲಿದೆ ಇದರ ಕಾರಣ ದೃಷ್ಟಿಹೀನಗೊಂಡು ನೀರು ಮತ್ತು ಆಹಾರ ಸೇವಿಸದೇ ನಿತ್ರಾಣ ಗೊಂಡು ಎರಡು ದಿನಗಳ ಹಿಂದೆ ಮೃತಪಟ್ಟಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಿಎಪ್‌ಒ ಅಮರನಾಥ ರೈ, ಎಸಿಎಫ್ ಸಿ.ಬಿ.ಪಾಟೀಲ, ಖಾನಾಪೂರ ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

loading...