ಪ್ರಶಸ್ತಿಗಳಿರುವುದು ಯಾರನ್ನೊ ಓಲೈಸಲಿಕ್ಕಲ್ಲ: ಗುರುಲಿಂಗ ಶ್ರೀಗಳು

0
2
loading...

ಕನ್ನಡಮ್ಮ ಸುದ್ದಿ
ಅಥಣಿ ೧೨: ಪ್ರಶಸ್ತಿಗಳು ನೀಡುವುದು ಯಾರೊಬ್ಬರನ್ನು ಓಲೈಸಲು ಅಲ್ಲ. ಅವರ ಸದ್ಗುಣ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಇನ್ನಷ್ಟು ಸಮಾಜಮುಖಿ ಕಾರ್ಯಗಳಿಗೆ ಕೈ ಜೋಡಿಸಲಿಕ್ಕೆ ಎಂದು ಅಭಿನವ ಗುರುಲಿಂಗ ಜಂಗಮ ಶ್ರೀಗಳು ಹೇಳಿದರು.
ತಾಲೂಕಿನ ಕಕಮರಿ ಗ್ರಾಮದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸದ್ಗುರು ಸೇವಾ ರತ್ನಶ್ರೀ ಮತ್ತು ಅಭಿನವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಮಗುವಿನ ವ್ಯಕ್ತಿತ್ವ ವಿಕಸನವೇ ಶಿಕ್ಷಣದ ಗುರಿಯಾಗಬೇಕು. ಅಲ್ಲದೇ ಮಠಾಧೀಶರು ಹಾಗೂ ಪತ್ರಕರ್ತರು ನೇರವಾದ ನಡೆಯನ್ನು ಹೊಂದಿದ್ದರೆ ಮಾತ್ರ ಸಮಾಜದ ಡೊಂಕನ್ನು ತಿದ್ದಲು ಸಾಧ್ಯವಿದೆ. ಶ್ರೀಮಠವು ಅತ್ಯುನ್ನತ ಸಾಧನೆಗೈದು ಎಲೆಮರೆ ಕಾಯಿಯಂತಿರುವರಿಗೆ ಪ್ರಶಸ್ತಿ ನೀಡಿದ್ದು ನಮಗೆ ಸಂತಸ ತಂದಿದೆ ಎಂದರು.
ಅಥಣಿ ಕ್ಷೇತ್ರ ಶಿಕ್ಷಣಧಿಕಾರಿ ಸಿ.ಎಂ. ನೇಮಗೌಡ ಮಾತನಾಡಿದರು. ಈ ವೇಳೆ ಕರ್ನಾಟಕ ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕಕಮರಿ ಹಾಗೂ ರವಿಚಂದ್ರ ಉಳ್ಳಾಗಡ್ಡಿ ರಚಿಸಿದ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.ಅಭಿನವಶ್ರೀ ಪ್ರಶಸ್ತಿ: ಹಿರಿಯ ಪತ್ರಕರ್ತ ಪ್ರಕಾಶ ಪೂಜಾರಿ, ನಾಗಪ್ಪ ಕೋಳಿ, ನಬಿಸಾಬ ಮುಜಾವರ, ಮಹಾದೇವ ನಾವಿ, ಶರತ್ ಪವಾರ್, ಮಲ್ಲಪ್ಪ ಶೇಡಬಾಳಕರ, ನಾಗಪ್ಪ ಕಾಂಬಳೆ, ರವೀಂದ್ರ ದುರ್ಗನ್ವರ್, ವಾಸು ಕುಲಕರ್ಣಿ, ಶ್ರೀಶೈಲ ಕುಂಬಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸದ್ಗುರು ಸೇವಾ ರತ್ನ: ಗುರಪ್ಪ ಹೂಗಾರ, ಪಾಂಡುರಂಗ ಪೂಜಾರಿ, ಲಕ್ಷ್ಮಣ ಮಾದರ, ಮಾರುತಿ ಮಾಳಿ, ವಸಂತ ಬಡಿಗೇರ, ಭೀಮಪ್ಪ ಮಡಿವಾಳ, ರಾಮು ಚೆನ್ನಗೌಡ, ಮಲ್ಲಪ್ಪ ವಾಲಿ, ಬಾಗವ್ವ ಮಠಪತಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

loading...