ಫೆ. 14 ರಿಂದ ಚೆನ್ನೈನಲ್ಲಿ ರಾಷ್ಟ್ರೀಯ ಕಿರಿಯರ ಸ್ಕ್ವಾಷ್ ಚಾಂಪಿಯನ್‌ಶಿಪ್‌

0
2
loading...

ಚೆನ್ನೈ:-ಇದೇ 14 ರಿಂದ 16 ರವರೆಗೆ ಭಾರತೀಯ ಸ್ಕ್ವಾಷ್‌ ಅಸೋಸಿಯೇಷನ್‌ ವತಿಯಿಂದ ಇಲ್ಲಿ ನಡೆಯುವ ಕಿರಿಯರ ಸ್ಕ್ವಾಷ್‌ ಓಪನ್‌ ಚಾಂಪಿಯನ್‌ಶಿಪ್‌ನಲ್ಲಿ 12 ರಾಜ್ಯಗಳಿಂದ 170 ಬಾಲಕ-ಬಾಲಕಿಯರು ಭಾಗವಹಿಸುತ್ತಿದ್ದಾರೆ. ಇದರಲ್ಲಿ ಹೆಚ್ಚು ಮಂದಿ ತಮಿಳುನಾಡಿನವರೇ ಆಗಿದ್ದಾರೆ.
ಈ ಟೂರ್ನಿಯಲ್ಲಿ ಕಿರಿಯರ ಅಗ್ರ ಆಟಗಾರರಾದ ಕೆ. ಎಸ್‌ ಅರಿಹಾಂತ್‌(ಬಾಲಕರ 13 ವಯೋಮಿತಿ), ಶ್ರೀರಾಮನ್‌ ರಾಘವನ್‌(ಬಾಲಕರ 17 ವಯೋಮಿತಿ), ಖುಷ್ಬೂ(ಬಾಲಕಿಯರ 13 ವಯೋಮಿತಿ) ಹಾಗೂ ಪೂಜಾ ಆರತಿ( ಬಾಲಕಿಯರ 15 ವಯೋಮಿತಿ) ಅವರ ಆಟವನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.
ಟಿಎನ್‌ಎಸ್‌ ಆರ್‌ಎ ನಡೆಯುವ ವರ್ಷದ ಪ್ರಮುಖ ನಾಲ್ಕು ಟೂರ್ನಿಗಳಿಂದ ಆಟಗಾರರು ಹಾಗೂ ಆಟಗಾರ್ತಿಯರು ತಮ್ಮ ಶ್ರೇಯಾಂಕವನ್ನು ಉತ್ತಮ ಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಟಿಎನ್‌ಎಸ್‌ಆರ್‌ಎ ಪತ್ರಿಕಾ ಹೇಳಿಕೆ ತಿಳಿಸಿದೆ.
ಟಿಎನ್‌ಎಸ್‌ಆರ್‌ಎ ನಡೆಸುತ್ತಿರುವ ಎರಡನೇ ಸ್ಟಾರ್‌ ಟೂರ್ನಿ ಇದಾಗಿದ್ದು, ಇದರಿಂದ ಕೆಳ ಕ್ರಮಾಂಕದ ಆಟಗಾರರು ಉತ್ತಮ ರಾಂಕಿಂಗ್‌ ಪಡೆಯಲು ಸಹಕಾರಿಯಾಗುತ್ತದೆ. ಅಲ್ಲದೆ, 3 ಹಾಗೂ 4ನೇ ಸ್ಟಾರ್‌ ಟೂರ್ನಿಗಳು ಉತ್ತಮ ಶ್ರೇಯಾಂಕದ ಆಟಗಾರರ ವಿರುದ್ಧ ಸೆಣಸಲು ಅವಕಾಶ ಕಲ್ಪಸುತ್ತದೆ.
ಕಿರಿಯರಿಗೆ ಹೆಚ್ಚಿನ ಟೂರ್ನಿಗಳನ್ನು ನಡೆಸಿದಾಗ ಅವರಲ್ಲಿನ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ. ಜತೆಗೆ, ಉತ್ತಮ ಶ್ರೇಯಾಂಕ ಪಡೆಯಲು ಸಾಧ್ಯವಾಗುತ್ತದೆ. ಈ ಟೂರ್ನಿ ಭಾರತೀಯ ಸ್ಕ್ವಾಷ್‌ ಅಕಾಡೆಮಿಯ ಅಂಗಳಗಳಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.

loading...