ಮಯಾಂಕ್‌ ಅಗರ್ವಾಲ್‌ ಅರ್ಧ ಶತಕ : ಶೇಷ ಭಾರತಕ್ಕೆ ಉತ್ತಮ ಆರಂಭ

0
2
loading...

ನಾಗ್ಪುರ:- ಮಯಾಂಕ್‌ ಅಗರ್ವಾಲ್‌ ( 83 * ರನ್‌, 117 ಎಸೆತಗಳು) ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ ಶೇಷ ಭಾರತ ತಂಡ, ಇರಾನಿ ಕಪ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ವಿದರ್ಭ ಎದುರು ಉತ್ತಮ ಆರಂಭ ಪಡೆದಿದೆ.
ಇಲ್ಲಿನ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಶೇಷ ಭಾರತ ಮಧ್ಯಾಹ್ನದ ಬೋಜನ ವಿರಾಮದ ವೇಳೆಗೆ 34 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 142 ರನ್‌ ದಾಖಲಿಸಿತು.
ಆರಂಭಿಕರಾಗಿ ಕಣಕ್ಕೆ ಇಳಿದ ಅನ್ಮೋಲ್‌ ಪ್ರೀತ್‌ ಸಿಂಗ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಅವರು ಕೇವಲ 15 ರನ್‌ ಗಳಿಸಿ ರಜನೀಶ್‌ ಗುರ್ಬಾನಿ ಅಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು.
ನಂತರ ಜತೆಯಾದ ಮಯಾಂಕ್‌ ಅಗರ್ವಾಲ್‌ ಹಾಗೂ ಹನುಮ ವಿಹಾರಿ ಜೋಡಿ ಅಮೋಘ ಬ್ಯಾಟಿಂಗ್‌ ಮಾಡುವಲ್ಲಿ ಸಫಲವಾಯಿತು. ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 96 ರನ್‌ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿತು.
ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಆತಿಥೇಯ ವಿದರ್ಭ ಬೌಲರ್‌ಗಳನ್ನು ಸಮರ್ಥವಾಗಿ ದಂಡಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಮೊರೆ ಹೋಗದ ಅವರು, 117 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಎಂಟು ಬೌಂಡರಿ ನೆರವಿನಿಂದ ಅಜೇಯ 83 ರನ್‌ ಗಳಿಸಿದರು. ಮತ್ತೊಂದು ತುದಿಯಲ್ಲಿ ತಾಳ್ಮೆಯ ಬ್ಯಾಟಿಂಗ್‌ ಮಾಡಿದ ಹನುಮ ವಿಹಾರಿ 67 ಎಸೆತಗಳಲ್ಲಿ 36 ರನ್‌ ಗಳಿಸಿ ಮಯಾಂಕ್‌ ಅಗರ್ವಾಲ್‌ಗೆ ಉತ್ತಮ ಸಾಥ್‌ ನೀಡಿದರು.

loading...