ವಿಟಿಯು ವಿಭಜನೆಗೆ ಕನ್ನಡ ಸಂಘಟನೆ ತೀವ್ರ ಆಕ್ರೋಶ

0
8
loading...

ವಿಟಿಯು ವಿಭಜನೆಗೆ ಕನ್ನಡ ಸಂಘಟನೆ ತೀವ್ರ ಆಕ್ರೋಶ

ಕನ್ನಡಮ್ಮ ಸುದ್ದಿ-ಬೆಳಗಾವಿ: ಉತ್ತರ ಕರ್ನಾಟಕ್ಕಕೆ ಹೊಂದಿರುವ ವಿಟಿಯು ವಿಶ್ವವಿದ್ಯಾಲಯವನ್ನು ಸಿಎಂ ಕುಮಾರಸ್ವಾಮಿ ಕಣ್ಣುಮುಚ್ಚಾಲೆ ಆಟಮಾಡಿ ವಿಟಿಯುವನ್ನು ವಿಭಜನೆ ಮಾಡಿದ್ದಾರೆ‌. ಇಂತಹ ಸಿಎಂ ಇರುವುದು ನಾಡಿಗೆ ನಾಚಿಗೆಡಿನ ಸಂಗತಿ ಎಂದು ಕರವೇ ದಿಂದ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.  ಸ್ಥಳೀಯ ರಾಣಿ ಚನ್ನಮ್ಮ ವೃತ್ತದಲ್ಲಿ ಧರಣಿ ನಡೆಸಿದ ಅವರು, ಒಡೆದಾಳುವ ನೀತಿಗಳನ್ನು ಮೈತ್ರಿ ಸರಕಾರ ಅನುವಹಿಸುತ್ತಿದೆ.ಊಟಕ್ಕೆ ಸ್ಥಾನವನ್ನು ನೀಡಿದರೆ ಮನೆಯನೇ ಮಾರುತ್ತಿದೆ ಮೈತ್ರಿ ಸರಕಾರ.

ಬೆಳಗಾವಿಗೆ ಹೆಮ್ಮೆಯಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅರಮನೆಯ ಒಡೆದು ತಮ್ಮ ನೈತಿಕತೆಯ ರಾಜ್ಯ ಸರಕಾರ ತೊರುತ್ತಿದೆ‌.
ಬೆಳಗಾವಿಗೆ ಸರಿಯಾದ ಬಜೆಟ್ ಮಂಡಿಸಿದೆ ಇಲ್ಲಿರುವ ಇಲಾಖೆ, ವಿಶ್ವವಿದ್ಯಾಲಯ ನ್ನು
ಹಾಸಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಆಯುಕ್ತ ಕಚೇರಿ, ಬರಪರಿಹಾರಕ್ಕೆ ನೀಡಬೇಕಾದ ಅನುದಾನವನ್ನು ಬಿಡುಗಡೆ ಮಾಡದೇ ಮೈತ್ರಿ ಸರಕಾರ ತನ್ನ ವೈಫಲ್ಯ ತೊರಿ ಬೆಳಗಾವಿ ಗೆ ಅನ್ಯಾಯ ಮಾಡುತ್ತಿದೆ ಎಂದು ರೋಧಿಸಿದರು.
ಈ ಸಂದರ್ಭದಲ್ಲಿ ದೀಪಕ ಗುಡಗನಟ್ಟಿ, ಸುಮಿತ ಅಗಸಗಿ, ಸಿದ್ದನಗೌಡ ಪಾಟೀಲ್, ಬಾಬು ಸಂಗೋಡಿ, ಮಹಾದೇವ ತಳವಾರ, ವಸೋದಾ ಬಿರಡೆ, ಸುರೇಶ ಗೌವನ್ನವರ , ಕಸ್ತೂರಿಬಾವಿ ಹಾಗೂ ಉಪಸ್ಥಿತರಿದ್ದರು.

 

loading...