ವಿಟಿಯು ವಿಭಜನೆ ಕಾಣದ ಕೈಗಳ ಕೈವಾಡ !

0
7
loading...

ವಿಟಿಯು ವಿಭಜನೆ ಕಾಣದ ಕೈಗಳ ಕೈವಾಡ !
ಕನ್ನಡಮ್ಮ ಸುದ್ದಿ-ಬೆಳಗಾವಿ: ವಿಶ್ವೆÃಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವ್ನು ವಿಭಜಿಸುವ ಹುನ್ನಾರಗಳು, ಕಾಣದ ಕೈಗಳ ಕೆಲಸ ಮಾಡುತ್ತಾನೆ ಬಂದಿವೆ ಎಂಬುವುದು ಕೇಳಿ ಬರುತ್ತಿವೆ.
ಹೌದು. ಉತ್ತರ ಕರ್ನಾಟಕದಲ್ಲಿ ಪ್ರತಿಯೊಂದರಲ್ಲಿ ಒಂದರ ಮೇಲೊಂದು ಅನ್ಯಾಯಗಳು ನಡೆಯುತ್ತಾನೆ ಬರುತ್ತಿದೆ. ಕೆಶಿಪ್ ಹಾಸನಕ್ಕೆ, ಆಯುಷ್ ರಾಜಾಜಿನಗರಕ್ಕೆ ಸಿಎಂ ಕುಮಾರಸ್ವಾಮಿ ತೆಗೆದುಕೊಂಡು ಹೋಗಿದ್ದಾರೆ. ಈಗಾ ವಿಟಿಯು ವಿಭಜನೆ ರಾಜ್ಯದಲ್ಲಿ ಮೊಟ್ಟ ಮೊದಲ ಅಚಾತುರ್ಯದ ಕ್ರಮವಾಗಿದೆ. ವಿಟಿಯು ಕನ್ನಡಿಗರ ಹೋರಾಟದ ಫಲವಾಗಿ ಅಂದಿನ ಜೆ. ಎಚ್. ಪಟೇಲ ಅವರು ವಿಟಿಯು ಕೊಡುಗೆ ನೀಡಿದ್ದಾರೆ. ಆದರೆ ಈಗಿನ ರಾಜಕೀಯ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ವಿಟಿಯುನ್ನು ಒಡೆಯುವ ಒಳ ಸಂಚು ನಡೆದದ್ದು ಬಹಿರಂಗವಾಗಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸುವ ಉದ್ದೇಶದ ಹಿಂದೆ ದಕ್ಷಿಣ ಕರ್ನಾಟಕದ ಶಾಸಕರ ಮತ್ತು ಇಬ್ಬರು ಪ್ರಭಾವಿ ಸಚಿವರ ಹುನ್ನಾರ ಇದೆ ಎನ್ನುವ ಅಂಶ ಬಹಿರಂಗವಾಗಿದೆ. ಅಲ್ಲದೆ ಈ ಪ್ರಕ್ರಿಯೆ ಕಳೆದ ಡಿಸೆಂಬರ್ ನಲ್ಲಿ ಆರಂಭವಾಗಿತ್ತು ಎಂಬುವುದು ಗೊತ್ತಾಗಿದೆ. ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ೨೦೧೮ರ ಡಿಸೆಂಬರ್ ೧೩ರಂದೇ ಉನ್ನತ ಶಿಕ್ಷಣ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಮತ್ತು ವಿಟಿಯು ಕುಲಪತಿಗಳಿಗೆ ಪತ್ರ ಬರೆದು ವಿಟಿಯು ವಿಭಜನೆ ಸಂಬಂಧ ಅಭಿಪ್ರಾಯ ಕೇಳಿದ್ದಾರೆ.
ಪತ್ರದಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಸಚಿವರು, ಕಾನೂನು ಮತ್ತು ಸಂಸದೀಯ ಸಚಿವರು, ಕೃಷಿ ಸಚಿವರು, ಕೋಲಾರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಮಾಲೂರು, ಬಂಗಾರಪೇಟೆ ಮುಳಬಾಗಿಲು ಕ್ಹಾಷೇತ್ಗೂರದ ಸಾಸಕರು ಹಾಗೂ ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ಅವರು ೨೦೧೮ರ ನವೆಂಬರ್ ೨೬ರಂದು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ರಾಜ್ಯದ ಭವಿಷ್ಯ ತಾಂತ್ರಿಕ ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಪ್ರೊಯೋಶ್ ಪಾಲ್ ವರದಿಯ ಪ್ರಕಾರ ಹಾಗೂ ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿದ ಹಾಗೆ, ಅವಿಭಜಿತ ಆಂದ್ರಪ್ರದೇಶದಲ್ಲಿ ಜೆಎನ್ ಟಿಯು ವಿವಿ ವಿಭಜಿಸಿದ ಹಾಗೆ ವಿಶ್ವೇಶ್ವರಯ್ಯ ತಾಂತ್ರಿ ವಿವಿಯನ್ನು ವಿಭಜಿಸಿ ವಿಶ್ವೇಶ್ವರಯ್ಯನವರ ಹುಟ್ಟೂರಾದ ಮುದ್ದೇನಳ್ಳಿಯಲ್ಲಿ ಸ್ಥಾಪಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ವಿಟಿಯುನಲ್ಲಿ ಉಳಿದ ಮೊದಲ ಸಿಎಂ: ವಿಟಿಯು ಗೆಸ್ಟ್ ಹೌಸದಲ್ಲಿ ಸಿಎಂ ಕುಮಾರಸ್ವಾಮಿ ಅವರೇ ಅಧಿವೇಶನದ ವೇಳೆ ತಂಗಿದ್ದ ಮೊಟ್ಟ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಗೆಸ್ಟ್ ಹೌಸ್‌ನಲ್ಲಿ ವಸತಿ ಮಾಡಿ ಬೆಳಗಾವಿಗರ ವಿರುದ್ಧ ಒಳಸಂಚು ಮಾಡಿದ್ದಾರೆ. ಬೆಳಗಾವಿಗರ ಮುಗ್ದತೆ ದುರುಪಯೋಗ ಮಾಡಿರುವ ಮುಖ್ಯಮಂತ್ರಿ ನಮ್ಮ ಅಡುಗೆಮನೆವರೆಗೆ ನುಗ್ಗಿ ಅವಾಂತರ ಮಾಡಿದ್ದಾರೆ ಎಂದು ಜಿಲ್ಲೆಯ ಜನತೆ ,ಕನ್ನಡಪರ ಸಂಘಟನೆಯ ಹೋರಾಟಗಾರರು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ವಿಟಿಯುನಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸಿಕೊಂಡು ಅಭಿವೃದ್ಧಿ ಪಡೆಸುವುದನ್ನು ಬಿಟ್ಟು ವಿಟಿಯುವನ್ನೆÃ ವಿಭಾಗ ಮಾಡಿ ದಕ್ಷಿಣ ಕರ್ನಾಟಕ ವಿದ್ಯಾರ್ಥಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹೊರಟ ಸರ್ಕಾರಕ್ಕೆ , ಉ.ಕ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಏಕಿಲ್ಲ ಎಂಬ ಪ್ರಶ್ನೆÃ ಸಾಮಾನ್ಯ ಮೂಡುತ್ತಿದೆ.
^^^^^^^^^^^^^^^^^^^^^^^
ದ.ಕ ಇದ್ದ ಕಾಳಜಿ, ಉ.ಕರ್ನಾಟಕ್ಕೆ ಏಕಿಲ್ಲ
ತಾಂತ್ರಿಕ ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ದೃಷ್ಟಿಯ ಉದ್ದೆÃಶವಿಟ್ಟುಕೊಂಡು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಸರ್ಕಾರ ವಿಭಜಿಸುವುದಕ್ಕೆ ಮುಂದಾಗಿದೆ. ಅದೇ ರೀತಿಯಲ್ಲಿ ಉ.ಕ ವಿದ್ಯಾರ್ಥಿಗಳ ಮೇಲೆ ಗಮನ ಯಾಕೆ ಹರಿಸುತ್ತಿಲ್ಲವೆಂಬುದು ಸಾಮಾನ್ಯ ವರ್ಗದ ಪ್ರಶ್ನೆÃಯಾಗಿದೆ.
ಇಲ್ಲಿ ಇನ್ನೊಂದು ಸಂದರ್ಭವನ್ನು ನಿಮ್ಮ ಮುಂದಿಡಲು ಇಚ್ಚೆÃ ಪಡುತ್ತಿದೆ. ಒಬ್ಬ ವಿದ್ಯಾರ್ಥಿ ಮಾಕ್ಸ್ ಕಾರ್ಡ್ನಲ್ಲಿ ತಪ್ಪು ತಿದ್ದುಪಡೆಯಾಗಿ ವಿಟಿಯುಗೆ ಅಲೆದಾಡು ಸಂದರ್ಭ ಬಂದಿತ್ತು. ಅಂದು ಒಂದೇ ಬಾರಿ ಬಂದಿದ್ದಕ್ಕೆ ಅಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿಯೇ ಎಂದು ಕಣ್ಣಿರಟ್ಟ ಗಳಿಗೆ ಎದುರಾಗಿತ್ತು. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ವಿದ್ಯಾರ್ಥಿಗಳ ಗುಣಮಟ್ಟ ಕಾಯ್ದುಕೊಳ್ಳು ಹೋರಟ ಸರ್ಕಾರಕ್ಕೆ ಪ್ರತಿಯೊಂದಕ್ಕೂ ಉ.ಕ ವಿದ್ಯಾರ್ಥಿಗಳು ಉದ್ಯೊÃಗ ಅರಿಸಿಕೊಂಡು ಸೇರಿದಂತೆ ಎಲ್ಲ ಇಲಾಖೆಗಳು ಬೆಂಗಳೂರಿನಲ್ಲಿ ಇರುವುದರಿಂದ ಜೀವನ ಪೂರ್ತಿ ಅಲೆದಾಡು ಪರಿಸ್ಥಿತಿ ಇದೆ. ಇಲ್ಲಿನ ಯುವ ಜನಾಂಗ , ವಿದ್ಯಾರ್ಥಿಗಳ ಬಗ್ಗೆ ಯಾಕೆ ಯೋಚಿಸುತ್ತಿಲ್ಲ ಎಂಬುವುದು ಯಕ್ಷ ಪ್ರಶ್ನೆÃಯಾಗಿದೆ.
^^^^^^^^^^^^^^^^^^^^^^^^^^^^
ವಿಟಿಯು ವಿಭಜನೆ ರಾಜ್ಯದಲ್ಲಿ ಮೊಟ್ಟ ಮೊದಲ ಅಚಾತುರ್ಯದ ಕ್ರಮವಾಗಿದೆ. ಕನ್ನಡಿಗರ ಹೋರಾಟದ ಫಲವಾಗಿ ಅಂದಿನ ಜೆ. ಎಚ್. ಪಟೇಲ ಅವರು ವಿಟಿಯು ಕೊಡುಗೆ ನೀಡಿದ್ದಾರೆ. ಅದನ್ನು ಒಡೆಯುವ ಸರಕಾರದ ಉದ್ದೇಶದ ಹಿಂದೆ ಒಳ ಸಂಚು ನಡೆದದ್ದು ಬಹಿರಂಗವಾಗಿದೆ.
ಸಿದ್ದನಗೌಡ ಪಾಟೀಲ
ಮಾಜಿ ಮೇಯರ

loading...