ವಿಟಿಯು ವಿಭಜನೆ ಕೈಬಿಡಿ,ಇಲ್ಲವೇ ಪ್ರತ್ಯೇಕ ರಾಜ್ಯವನ್ನಾಗಿಸುವಂತೆ ಒತ್ತಾಯ

0
30
loading...

ಕನ್ನಡಮ್ಮ ಸುದ್ದಿ- ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ಖಂಡಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು‌ ವಿಭಜನೆ ಮಾಡುತ್ತಿರುವುದು ಉತ್ತರ ಕರ್ನಾಟಕ ಜನತೆಗೆ ಅನ್ಯಾಯ ಮಾಡುತ್ತಿದೆ. ಉ.ಕ ಕಚೇರಿಗಳನ್ನು ಸ್ಥಳಾಂತರ ಮಾಡುವುದು, ವಿಶ್ವವಿದ್ಯಾಲಯವನ್ನು ವಿಭಜನೆ ಮಾಡುವುದು ನಿರಂತರ ಉ.ಕ ಮಲತಾಯಿ ದೊರಣೆ ಸರಿಯಲ್ಲ. ಆದ ಕಾರಣ ವಿಶ್ವವಿದ್ಯಾಲಯ ವಿಭಜನೆ ಕೈ ಬಿಡಬೇಕು ಇಲ್ಲವೆ , ಇಲ್ಲವೇ ಉ.ಕ ಪ್ರತ್ಯೇಕ ರಾಜ್ಯವನ್ನಾಗಿ ಘೋಣಣೆ ಮಾಡುವ ಮೂಲಕ ಕಚೇರಿ ಸ್ಥಳಾಂತರ ಮಾಡಿ ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಡವೇಶ ಇಟಗಿ, ಶ್ರೀಕಾಂತ ಮಾದುಭರಮನ್ನವರ , ಲಕ್ಷ್ಮಣ ಮಾದರ ಸೇರಿದಂತೆ ಇತರರು ಇದ್ದರು.

loading...