ವಿಟಿಯು ವಿಭಾಗಿಸುವ ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ

0
8
loading...

ಕನ್ನಡಮ್ಮ ಸುದ್ದಿ- ಬೆಳಗಾವಿ:ವಿಟಿಯು ಉಳಿಸಲು ಕನ್ನಡಪರ ಸಂಘಟನೆಗಳಿಂದ ಭಾನುವಾರ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಆರಂಭವಾಗಿದೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಬೆಳಗ್ಗೆ ಕನ್ನಡ ಸಂಘಟನೆಗಳ ಮುಖಂಡರು ಸಭೆ ನಡೆಸಿದ ಬಳಿಕ ಪ್ರತಿಭಟನೆ ನಡೆಸಿದರು‌.
ಸಭೆಯಲ್ಲಿ ಮಾತನಾಡಿದ ಕರವೇ ಮುಖಂಡ ದೀಪಕ ಗುಡಗನಟ್ಟಿ, ಹಾಸನ ರಾಜಕಾರಣಿ ಬೆಳಗಾವಿ ಕಚೇರಿ ಹಾಗೂ ವಿಟಿಯು ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದರೆ. ಬೆಳಗಾವಿ ರಾಜಕರಾಣಿ ಸರ್ಕಾರ ಉಳಿಸಲು ಮತ್ತು ಉರಳಿಸಲಯ ಹೋರಾಟ ಮಾಡುತ್ತಿದ್ದಾರೆ. ವಿಟಿಯು ಉಳಿಸುವ ಸಲುವಾಗಿ ಜಿಲ್ಲೆಯ ಜನಪ್ರತಿನಿಧಿಗಳು ಸಿಎಂ ಭೇಟಿ ಒತ್ತಾಡ ಹಾಕದಿದ್ದರೆ. ಜನಪ್ರತಿನಿಧಿಗಳ ಮನೆಯ ಧರಣಿ ನಡೆಸಲಾಗುವುದು. ಸರ್ಕಾರಿ ಕಾರ್ಯಕ್ರಮಕ್ಕೆ ಅಡಿಪಡಿಸಲಾಗುವುದು. ಬೆಳಗಾವಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಅಶೋಖ ಚಂದರಗಿ ಮಾತನಾಡಿ, ಅಧಿವೇಶನ ವೇಳೆ ವಿಟಿಯುದಲ್ಲಿ ವಾಸ್ತವ್ಯ ಮಾಡಿ ವಿಟಿಯು ಒಡಿಯುವ ಕೆಲಸ ಮಾಡಿದ್ದಾರೆ. ಇದಕ್ಕೆ ವಿಟಿಯು ಕುಲಪತಿ ಸೇರಿದ್ದಾರೆ ಎಂದು ಆರೋಪಿಸಿದರು.
ಮಾಜಿ ಮೇಯರ್ ಸಿದ್ದನಗೌಡಾ ಪಾಟೀಲ, ರಾಜು ಚಿಕ್ಕನಗೌಡರ, ಕರವೇ ಮುಖಂಡ ಮಹದೇವ ತಳವಾರ ಮತ್ತಿತರರು ಇದ್ದರು.

loading...