ಶಾಲಾ ಮಕ್ಕಳಲ್ಲಿ ಗಣಿತಶಾಸ್ತ್ರದ ಮೂಲಭೂತ ಜ್ಞಾನದ ಕೊರತೆ

0
2
loading...

ಕನ್ನಡಮ್ಮ ಸುದ್ದಿ-ಧಾರವಾಡ: ಶಿಕ್ಷಕರಿಗೆ ವಿದ್ಯಾರ್ಥಿಗಳಲ್ಲ್ಲಿ ಗಣಿತ ವಿಷಯ ಕಠಿಣ ಅನ್ನುವ ಭಯವನ್ನು ಮೊದಲು ಹೋಗಲಾಡಿಸಬೇಕು. ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಗಣಿತ ವಿಷಯ ತುಂಬಾ ಸರಳ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೆಶಕರಾದ ಡಾ. ಕೆ.ಬಿ.ಗುಡಸಿ ಹೇಳಿದರು.
ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು, ಕರ್ನಾಟಕ ವಿಜ್ಞಾನ ಮತ್ತು ತಂತ್ರವಿಧ್ಯಾ ಮಂಡಳಿ, ಬೆಂಗಳೂರು ಇವುಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಜಿಲ್ಲೆಯ ಪ್ರೌಢಶಾಲಾ ಗಣಿತ ಶಿಕ್ಷಕರನ್ನುದ್ಧೇಶಿಸಿ ಮಾತನಾಡಿದರು. ಶಾಲಾ ಮಕ್ಕಳಲ್ಲಿ ಗಣಿತಶಾಸ್ತ್ರದ ಮೂಲಭೂತ ಜ್ಞಾನದ ಕೊರತೆ ಇದ್ದು, ಇದರ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದರು. ಶಿಕ್ಷಕರು ಗಣಿತವನ್ನು ತಿಳಿಸಿಕೊಡಬೇಕಾದಲ್ಲಿ ಮೂಲಭೂತ ತತ್ವಗಳು, ಅವುಗಳ ಮೌಲ್ಯಗಳನ್ನು ಹಾಗೂ ಅನ್ವಯಗಳನ್ನು ತಿಳಿಸಿಕೊಡಬೇಕು. ಗಣಿತ ವಿಷಯವನ್ನು ಭೋಧನೆ ಮಾಡುವಾಗ ಪ್ರಾಯೋಗಿಕವಾದ ಸರಳ ವಿಧಾನದ ಮೂಲಕ ತಿಳಿಸಿಕೊಡಬೇಕು ಮತ್ತು ಮಾಧ್ಯಮಿಕ ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಿಸಿದಾಗ ಮಾತ್ರ ಮುಂದಿನ ಭವಿಷ್ಯ ಉಜ್ವ¯ವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಇಂತಹ ತರಬೇತಿಗಳ ಪ್ರಯೋಜನ ಪಡೆದುಕೊಂಡು ತರಗತಿಗೆ ಹೋಗುವ ಮೊದಲು ಆ ವಿಷಯದ ಕುರಿತು ಹೆಚ್ಚಿನ ಅಧ್ಯಯನ ಮಾಡಿ ವಿದ್ಯಾರ್ಥಿಗೆ ಆ ವಿಷಯವನ್ನು ಯಾವುದೇ ರೀತಿಯ ಸಂದೇಹವಿರದಂತೆ ಬೋಧಿsಸಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿಗಳಾದ ಅಡಿವೆಪ್ಪ ಎಸ್. ಅಂತಣ್ಣವರ, ಎಂ.ಸಿ. ಕಂದಗಲ್ಲ, ಆರ್.ಪಿ. ಗಾಳಿ, ಎಸ್. ಎಫ್. ಆಡಿನ, ಅಭಿಷೇಕ ಸಿ., ಶಶಿಧರ ಬಿ., ಎಂ.ಕೆ. ಹೊರಕೇರಿ, ಲಕ್ಷ್ಮಣ ಕೆ.ಎನ್. ಎಂ. ಸಿ. ಶಂಕರೇಗೌಡ, ಆರ್. ಎನ್. ಕಿಲ್ಲೇದಾರ, ಎಸ್. ಎಫ್. ಮಾದರ, ಎಸ್.ವಿ. ಹಿರೇಮಠ ಉಪಸ್ಥಿತರಿದ್ದರು.

loading...