ಶಾಲಾ ವಾರ್ಷಿಕೋತ್ಸವ ನಿಮಿತ್ತ ಪಾಲಕರಿಗೆ ಮೋಜಿನಾಟ ಸ್ಪರ್ಧೆ

0
2
loading...

ಕನ್ನಡಮ್ಮ ಸುದ್ದಿ
ಸಂಕೇಶ್ವರ ೧೧ : ಸ್ಥಳೀಯ ಹಿರಾಶುಗರ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೆÃಹ ಸಮ್ಮೆÃಳನ ಅಂಗವಾಗಿ ವಿದ್ಯಾರ್ಥಿಗಳ ಪಾಲಕರಿಗೆ ನಾನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ತಂದೆಯರಿಗೆ ಏರ್ಪಡಿಸಿದ ದೂರದಲ್ಲಿರುವ ಕೋಲಿಗೆ(೧೦ ಪೂಟು ಅಂತರದ) ರಿಂಗ್ ಎಸೆಯುವ ಸ್ಪರ್ಧೆಯಲ್ಲಿ ಬಸವರಾಜ ನಿಲಜಿ ಪ್ರಥಮ, ಬಾಬಯ್ಯ ಮಠಪತಿ ದ್ವಿತೀಯ, ಶಿವಾನಂದ ಪಾಟೀಲ ತೃತೀಯ ಸ್ಥಾನದಲ್ಲಿ ವಿಜೇತರಾದರು.
ತಾಯಂದಿರಿಗೆ ದೂರದಲ್ಲಿರುವ (೧೫ ಫೂಟು ಅಂತರ) ಬಕೆಟನಲ್ಲಿ ಚಂಡು ಎಸೆಯುವ ಸ್ಪರ್ಧೆಯಲ್ಲಿ ಸೌ.ಮಹೇಶ್ವರಿ ಮಠದ ಪ್ರಥಮ, ಮುಡಸಿ ಸಹೋದರಿಯರು ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.

ಪ್ರಧಾನ ಗುರು ಎಸ್.ಬಿ.ಮುತ್ನಾಳೆ, ಶಿಕ್ಷಕರಾದ ಎಂ.ಎಸ್.ಪೂಜಾರಿ, ವಿ.ವಿ,ಕುಲಕರ್ಣಿ, ಬಿ.ಆರ್.Àಳವಾರ, ಎಂ.ಬಿ.ಬೆಟಗೇರಿ,ಎಸ್.ಎಸ್.ಕರೆಪ್ಪನವರ ನಿರ್ಣಾಯಕರಾಗಿದ್ದರು.

ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಶಂಕರ ಮಠದ, ಕಾಲನಿಯ ಶಿವಾನಂದ ಪಾಟೀಲ, ಬಾಹುಬಲಿ ಪಾಟೀಲ, ಅನಿಲ ಕಮತೆ, ಬಸವರಾಜ ಮುಡಸಿ, ಮಹಾನಿಂಗ ಶೇಗುಣಸಿ ಭಾರತಿ ಬಾಬಯ್ಯ ಮಠಪತಿ, ಸುರೇಖಾ ಮಲ್ಲಪ್ಪ ನಾಯಿಕ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.
..

loading...