ಸಂಸದರು ಮತ್ತು ವಿಪಕ್ಷಗಳಿಂದ ಪ್ರಧಾನಿ ಕಾರ್ಯಕ್ರಮ ಬಹಿಷ್ಕಾರ

0
4
loading...

ಅಗರ್‌ತಲ : ವಿರೋಧಕ್ಷ ಪಕ್ಷಗಳ ನಂತರ ಸಿಪಿಐಎಂನ ಎಲ್ಲ ಮೂವರು ಸಂಸದರು ಇಂದು ರಾಜ್ಯದಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ.
ಪ್ರಧಾನಿ ಮೋದಿ ಇಂದಿನ ತ್ರಿಪುರ ಸಂಕ್ಷಿಪ್ತ ಭೇಟಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಹರಾಜ್‌ ಬಿರ್‌ ಬಿಕ್ರಂ ಕಿಶೋರ್‌ ಮಾಣಿಕ್ಯ ಬಹದ್ದೂರ್‌ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಜೊತೆಗೆ ತ್ರಿಪುರ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಹೊಸ ಕಟ್ಟಡ ಉದ್ಘಾಟಿಸುತ್ತಾರೆ. ಗರ್ಜಿ-ಬೆಲೊನಿಯಾ ನಡುವಿನ 23 ಕಿ.ಮೀ ಉದ್ದದ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡುತ್ತಾರೆ.
ರಾಜ್ಯ ಸರ್ಕಾರ ಪ್ರಧಾನಿ ಕಾರ್ಯಕ್ರಮಕ್ಕೆ ಸಂಸದರನ್ನು ಕರೆಯುವ ಶಿಷ್ಠಾಚಾರ ಮುರಿದಿದೆ ಎಂದು ಮೂವರು ಸಂಸದರು ಆರೋಪಿಸಿದ್ದಾರೆ.
ಪ್ರಧಾನಿ ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರೆ, ಸ್ಥಳೀಯ ಸಂಸದರು ಅದರ ಭಾಗವಾಗಬೇಕು. ಮೋದಿ ಭೇಟಿ ವೇಳೆ ಯಾವುದೇ ಸಂಸದರನ್ನು ಆಹ್ವಾನಿಸಿಲ್ಲ’ ಎಂದು ಸಂಸದ ಜಿತೇಂದ್ರ ಚೌಧರಿ ಹೇಳಿದ್ದಾರೆ.
ಬಿಜೆಪಿ ಮತ್ತು ಮಿತ್ರ ಪಕ್ಷ ಐಪಿಎಫ್‌ಟಿ ಹೊರತಾಗು ಉಳಿದ ರಾಜಕೀಯ ಪಕ್ಷಗಳಾದ ಸಿಪಿಐ(ಎಂ), ಕಾಂಗ್ರೆಸ್‌, ಐಎನ್‌ಪಿಟಿ, ಟಿಎಸ್‌ಎಫ್‌, ಐಪಿಎಫ್‌ಟಿ(ತ್ರಿಪುರ) ಮತ್ತು ಎನ್‌ಸಿಟಿಗಳು ಕೇಂದ್ರ ಸರ್ಕಾರದ ನಾಗರೀಕತ್ವ ಕಾಯ್ದೆ 2016ರ ಅನುಷ್ಠಾನ ವಿರೋಧಿಸಿ ಇಲ್ಲಿನ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆಯುವ ಪ್ರಧಾನಿ ಕಾರ್ಯಕ್ರಮ ಬಹಿಷ್ಕರಿಸಿದ್ದವು.

loading...