ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿಗೆ 41ನೇ ಸ್ಥಾನ

0
10

ಕನ್ನಡಮ್ಮ ಸುದ್ದಿ- ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದ್ದ ದೇಶದ ನೂರು ಮಹಾನಗರಗಳಲ್ಲಿ ಯೋಜನೆ ಅನುಷ್ಠಾನದಲ್ಲಿ ಬೆಳಗಾವಿ 70.62 ಅಂಕಗಳೊಂದಿಗೆ 41 ನೇ ಸ್ಥಾನವನ್ನು ಪಡೆದುಕೊಂಡಿದೆ.
ರಾಷ್ಟ್ರ ಮಟ್ಟದಲ್ಲಿ 366.21 ಅಂಕಗಳೊಂದಿಗೆ‌ ನಾಗ್ಪುರ ಪ್ರಥಮ ಸ್ಥಾನಗಳಲಿದ್ದರೆ, ಬೂಪಲ್ ದ್ವಿತಿಯ ಸ್ಥಾನ,ರಾಂಚಿ ಮೂರನೇ ಸ್ಥಾನ ಪಡೆದುಕೊಂಡಿದೆ.ದಾವಣಗೆರೆ 10 ಸ್ಥಾನ, ಬೆಳಗಾವಿ 41 , ಹುಬ್ಬಳ್ಳಿ ಧಾರವಾಡ 42 , ಶಿವಮೊಗ್ಗ 32 , ತುಮಕೂರು 24, ಮಂಗಳೂರ 49 ಸ್ಥಾನವನ್ನು ಪಡೆದುಕೊಂಡಿವೆ.
 ಇನ್ನೂ ರಾಜ್ಯ ಮಟ್ಟದಲ್ಲಿ ದಾವಣಗೆರೆ ಮೊದಲ ಸ್ಥಾನ,ತುಮಕೂರು ದ್ವಿತೀಯ, ಶಿವಮೊಗ್ಗ ತೃತೀಯ, ಬೆಳಗಾವಿ ನಾಲ್ಕನೇ ಸ್ಥಾನ, ಹುಬ್ಬಳ್ಳಿ ಧಾರವಾಡ ಐದನೇ ಸ್ಥಾನ ಮಂಗಳೂರ ಆರನೇ ಸ್ಥಾನ ಪಡೆದುಕೊಂಡಿವೆ.
loading...