ಹಣಕ್ಕಾಗಿ ನಿರಾಶ್ರಿತರಾದ 10 ಸಾವಿರ ಪಾಕಿಗಳು

0
2
loading...

ಇಸ್ಲಾಮಾಬಾದ್,:ಸಂಯುಕ್ತ ರಾಷ್ಟ್ರದ ಉನ್ನತ ಆಯೋಗವು ಸ್ವಯಂ ಪ್ರೇರಿತ ವಾಪಸಾತಿ ಯೋಜನೆಯಡಿ ನಿರಾಶ್ರಿತರಿಗೆ ನೀಡುವ ಹಣದಾಸೆಯಿಂದ ಹತ್ತು ಸಾವಿರ ಜನ ಪಾಕಿಸ್ತಾನದ ನಾಗರಿಕರು ತಮ್ಮನ್ನು ಅಪ್ಘಾನಿಸ್ತಾನ್ ದ ನಿರಾಶ್ರಿತರೆಂದು ಘೋಷಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ದತ್ತಾಂಶ ಮತ್ತು ನೋಂದಣಿ ಪ್ರಾಧಿಕಾರ (ನಾದಾರ್) ತಿಳಿಸಿದೆ.
ಸಂಯುಕ್ತ ರಾಷ್ಟ್ರದ ಉನ್ನತ ಆಯೋಗವು ಸ್ವಯಂ ಪ್ರೇರಿತ ವಾಪಸಾತಿ ಯೋಜನೆಯಡಿ ನಿರಾಶ್ರಿತರಿಗೆ 400 ಡಾಲರ್ ಭತ್ತೆ ನೀಡುತ್ತಿದ್ದು, ಇದರ ಲಾಭ ಪಡೆಯಲು 10 ಸಾವಿರ ಪಾಕಿಸ್ತಾನ ನಾಗರಿಕರು ತಮ್ಮನ್ನು ಅಪ್ಘಾನಿಸ್ತಾನದ ನಿರಾಶ್ರಿತರೆಂದು ಹೇಳಿಕೊಂಡಿದ್ದಾರೆ ಎಂದು ನಾದಾರ್ ಅಧ್ಯಕ್ಷ ಯೂಸುಫ್ ಮೊಬಿನ್ ಸಿನೆಟ್ ನ ಸ್ಥಾಯಿ ಸಮಿತಿ ಸಭೆಯಲ್ಲಿ ಹೇಳಿದ್ದಾರೆ.
ನಕಲಿ ಗುರುತಿನ ಪತ್ರ ಸೃಷ್ಟಿಸಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಸ್ವಯಂ ಪ್ರೇರಿತ ವಾಪಸಾತಿ ಯೋಜನೆಯಡಿ ಸುಮಾರು 10 ಲಕ್ಷ ಅಪ್ಘಾನಿಸ್ತಾನ್ ನಿರಾಶ್ರಿತರಿಗೆ 400 ಅಮೆರಿಕನ್ ಡಾಲರ್ ನೀಡಿ ವಾಪಸ್ ಕಳುಹಿಸಲಾಗಿದೆ. ಒಂದು ಕಾಲದಲ್ಲಿ ಪಾಕಿಸ್ತಾನದಲ್ಲಿ ಅಪ್ಘಾನಿಸ್ತಾನ್ ನಿರಾಶ್ರಿತರೆಂದು 24 ಲಕ್ಷ ಜನರು ತಮ್ಮ ಹೆಸರು ನೋಂದಾಯಿಸಿದ್ದರು. ಇದೀಗ 15 ಲಕ್ಷ ಜನ ನಿರಾಶ್ರಿತರು ಪಾಕಿಸ್ತಾನದಲ್ಲಿದ್ದಾರೆ ಎಂದು ಮೊಬಿನ್ ಹೇಳಿದ್ದಾರೆ.

loading...