5ದಿನಗಳಿಂದ ಸಿಲುಕಿಕೊಂಡಿದ್ದ 10ಕೋತಿಗಳ ರಕ್ಷಣೆ

0
14

ಬೆಂಗಳೂರು: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಬೆಳಗೋಡು ಹಾಳು ಗ್ರಾಮ ವ್ಯಾಪ್ತಿಯ ಅಯ್ಯನಗುಡಿ ಬಳಿ ತುಂಗಭದ್ರಾ ನದಿ ಪ್ರವಾಹದಿಂದ ಅಮ್ಮನ ಮಡಗು ಗಡ್ಡೆಯ ಗಿಡದಲ್ಲಿ ಕಳೆದ 5 ದಿನಗಳಿಂದ ಸಿಲುಕಿಕೊಂಡಿದ್ದ ಹತ್ತು ಕೋತಿಗಳನ್ನು ಗ್ರಾಮದ ಯುವಕರು ತೆಪ್ಪದ ಮೂಲಕ ಸುರಕ್ಷಿತವಾಗಿ ಕರೆತಂದು ನದಿ ದಡ ತಲುಪಿಸಿದ್ದಾರೆ.
ಗ್ರಾಮದ ನಿವಾಸಿ ರೇಣುಕಾ ಎನ್ನುವರು ಗಿಡಗಂಟಿಗಳಲ್ಲಿ ಮಂಕಾಗಿ ಕುಳಿತಿದ್ದ ಕೋತಿಗಳನ್ನು ದೂರದಿಂದಲೇ ಗಮನಿಸಿದ್ದರು. ತಕ್ಷಣ ಗ್ರಾಮದ ಯುವಕರಿಗೆ ಈ ವಿಷಯವನ್ನು ತಿಳಿಸಿದ್ದರು. ನಂತರ ಹಗರಿ ಮೌಲಸಾಬ್ ನೇತೃತ್ವದಲ್ಲಿ ಯುವಕರ ತಂಡ ತೆಪ್ಪ, ಹರಿಗೋಲು, ಹಗ್ಗ, ಬಿದಿರು ಬೊಂಬು ಸೇರಿ ಅಗತ್ಯ ಪರಿಕರಗಳೊಂದಿಗೆ ಅಮ್ಮನ ಮಡಗು ಗಡ್ಡೆಗೆ ತಲುಪಿದ್ದರು.
ಆಗ ಆಹಾರ ಇಲ್ಲದೆ ಹಸಿವಿನಿಂದ ಬಳಲಿದ್ದ ಕೋತಿಗಳು ಬಾಳೆಹಣ್ಣು, ಬ್ರೆಡ್, ಬಿಸ್ಕೇಟ್ ನೀಡಿದ್ದರು.ಇವನ್ನು ತಿಂದು ಚೇತರಿಸಿ ಕೊಂಡವು.ನಂತರ ಅವುಗಳನ್ನು ತೆಪ್ಪದಲ್ಲಿ ಕೂರಿಸಿಕೊಂಡು ದಡ ತಲುಪಿಸಲಾಗಿದೆ.ಇವುಗಳಲ್ಲಿ ಕೆಲ ದೊಡ್ಡ ಕೋತಿಗಳನ್ನು ಹಿಡಿದು ನೀರಿನ ಹರಿವು ಕಡಿಮೆ ಪ್ರಮಾಣದಲ್ಲಿರುವ ಭಾಗದಲ್ಲಿ ಬಿಟ್ಟಿದ್ದರಿಂದ ಈಜಿ ದಡ ಸೇರಿವೆ.
ಯುವಕರಾದ ಕೆ.ರವಿ,ದೇವರಾಜ್,ಆನಂದ್,ರವಿ,ಕಾರ್ತಿಕ್,ಮಂಜು, ನೆವ್ವಾರ್ ಬಸವ, ರೇಣುಕಪ್ಪ, ಟಿ. ಬಸವನಗೌಡ, ಎ. ಯಮುನಪ್ಪ, ಕೆ. ಮಲ್ಲಯ್ಯ, ವಿನಯ, ಎಂ. ಮೂರ್ತಿ ಹಾಗೂ ಉಮೇಶ್ ಕೋತಿಗಳ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

loading...