500 ಜನರಿಗೆ ಗಾಯ

0
37

ಮಾಸ್ಕೌ,15-ಇಂದು ಮಧ್ಯ ರಷ್ಯಾದಲ್ಲಿ ಆಕಾಶದಲ್ಲಿ ಸಂಭವಿಸಿದ ಭಾರೀ ಉಲ್ಕಾಪಾತದಿಂದಾಗಿ 500ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಆಕಾಶದಿಂದ ಭೂಮಿಗೆ ಬೆಂಕಿ ಉಂಡೆಗಳು ಅಪ್ಪಳಿಸಿದ್ದರಿಂದ ಅನೇಕ ಕಟ್ಟಡಗಳು ಕಿಟಕಿ ಬಾಗಿಲುಗಳಿಗೆ ಹಾನಿ ಉಂಟಾಗಿದ್ದು, ಗಜುಗಳು ಪುಡಿಪುಡಿಯಾಗಿವೆ.

ಉಲ್ಕಾ ಪತ ನಡೆದ ಸಂದರ್ಭದಲ್ಲಿ ಭಾರೀ ಪ್ರಮಾಣದ ಸಪ್ಪಳ ಉಂಟಾಗಿದ್ದರಿಂದ ಜನರು ಗಾಬರಿಯಾಗಿ ಆಕಾಶವನ್ನು ದಿಟ್ಟಿಸುತ್ತಿದ್ದಾಗ ಬೆಂಕಿ ಉಂಡೆಗಳು ಧರೆಗೆ ಉರುಳಿತ್ತಿರುವುದನ್ನು ಕಂಡು ಅತ್ತಿಂದ ಇತ್ತ ಇತ್ತಿಂದ ಅತ್ತ ಓಡಾಡಿದ ಘಟನೆಗಳು ಸಾಮಾನ್ಯವಾಗಿ ಕಂಡು ಬಂದಿದೆ.

ಮಾಸ್ಕೌದಿಂದ ಪೂರ್ವಕ್ಕೆ 1500 ಕಿ.ಮೀ. (950 ಮೈಲು) ದೂರದಲ್ಲಿರುವ ಓದ್ಯಮಿಕ ನಗರದಲ್ಲಿ ಈ ಉಲ್ಕಾ ಪಾತ ಸಂಭವಿಸಿದೆ. ಎಕ್ಟ್ತ್ರಿಬರ್ಗ್ದಿಂದ 200 ಕಿ.ಮೀ. (125 ಮೈಲು) ದೂರದಲ್ಲಿ ಬೆಂಕಿ ಉಂಡೆಗಳು ಪ್ರಜ್ವಲವಾದ ಬೆಳಕು ಬೀರಿ ಅಪ್ಪಳಿಸಿದ ಪರಿಣಾಮವಾಗಿ ವಿದ್ಯುತ್ ವ್ಯವಸ್ಥೆ, ದೂರವಾಣಿ ನೆಟ್ವರ್ಕ್ ವ್ಯವಸ್ಥೆ ಹಾಳಾಗಿವೆ.

ಸುಮಾರು 20 ನಿಮಿಷ ಕಾಲ ಈ ಘಟನೆ ನಡೆದಿದೆ. ಇದರಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಬಹುಸಂಖ್ಯೆಯ ಜನರು ಗಾಯಗೊಂಡಿರುವ ವರದಿ ಇದೆಯಾದರೂ ಪ್ರಾಣಾಪಾಯ ಸಂಭವಿಸಿಲ್ಲ. ಯಾವುದೇ ವರದಿ ಇದುವರೆಗೆ ಆಗಿರುವುದಿಲ್ಲ.ವಿದ್ಯುತ್ ಸ್ಥಗಿತ, ದೂರವಾಣಿ ಸಂಪರ್ಕ ಇಲ್ಲದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡ ಘಟನೆ ಆ ಪ್ರದೇಶದಲ್ಲಿ ನಡೆದಿದೆ.

ಧಾರವಾಡ ಫೆ. 15: ವಿದ್ಯಾರ್ಥಿಯಾಗಿರುವ ಅವಧಿಯಲ್ಲಿ ತರ್ಕಬದ್ಧವಾಗಿ ಯೋಚಿಸುವ ಹಾಗೂ ಪ್ರತಿಯೊಂದನ್ನು ವಿಮರ್ಶಾತ್ಮಕ ರೂಪದಲ್ಲಿ ಪರೀಶೀಲಿಸುವ ಗುಣಗಳು ವಾಸ್ತವ ಜೀವನವನ್ನು ಎದುರಿಸಲು ಸಹಾಯ ಮಾಡುತ್ತವೆ. ಹಳೆಯದರೊಂದಿಗೆ ಹೊಸದನ್ನು ಸಮಾಗಮಪಡಿಸುವ ದಾರಿಗೆಡೆಮಾಡಿಕೊಡುತ್ತವೆ. ಶೈಕ್ಷಣಿಕ ಹಾಗೂ ಅದರಾಚೆಗಿನ ಜಗತ್ತಿನ ಸಮಾಗಮದ ಒಟ್ಟು ಫಲಿತಾಂಶವೇ ಪದವಿಯ ನಿಜವಾದ ಅರ್ಥ. ವಿಶ್ವವಿದ್ಯಾಲಯಗಳ ಘಟಿಕೋತ್ಸವದ ಸಂದರ್ಭದಲ್ಲಿ ಜ್ಞಾನ ಸಾಧನೆಯನ್ನು ಗೌರವಿಸುವ ಸಂದರ್ಭಗಳು, ವಿಶ್ವವಿದ್ಯಾಲಯದ ಪದವಿಯೇ ಅಂತಿಮಗುರಿಯಲ್ಲ. ಎಂದು ಉಪ ರಾಷ್ಟ್ತ್ರಪತಿ ಶ್ರೀ ಹಮೀದ ಅನ್ಸಾರಿ ಅವರು ನುಡಿದರು.

 

loading...

LEAVE A REPLY

Please enter your comment!
Please enter your name here