Home ಬೆಳಗಾವಿ

ಬೆಳಗಾವಿ

Belgaum city and district news

ಮಟಕಾಡುತ್ತಿದ್ದ: ಮೂರರ ಬಂಧನ

ಕನ್ನಡಮ್ಮ ಸುದ್ದಿ-ಬೆಳಗಾವಿ: ಸವದತ್ತಿ ತಾಲೂಕಿನ ಮನಿಕಟ್ಟಿ ಮತ್ತು ಹೂಲಿಕಟ್ಟಿ ಗ್ರಾಮದಲ್ಲಿ ಮಟಕಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿದ ಪೊಲೀಸರು ಮೂರರನ್ನು ಬಂಧಿಸಿದ್ದಾರೆ. ಹೂಲಿಕಟ್ಟಿ ಗ್ರಾಮದ ಬಸಪ್ಪ ಹಣಮಂತ ಮೂಲಿಮನಿ, ಮುನವಳ್ಳಿ ಗ್ರಾಮದ ಪ್ರಕಾಶ ಚಂದ್ರಪ್ಪ ಸಂಗತಿ ಮತ್ತು ಗೋರಬಾಳ ಗ್ರಾಮದ ಯಲ್ಲಪ್ಪ ಸಿದ್ದಪ್ಪ ಕುರಿ ಎಂಬುವವರು ಬಂಧಿತರು. ಇವರಿಂದ 1,280 ರೂ. ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ: ಇಬ್ಬರ ಸೆರೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ನಿಪ್ಪಾಣಿ ಮತ್ತು ಮುರಗೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಣಗಲಾ ಗ್ರಾಮದ ಸುಭಾಷ ಸದಾನಂದ ನಾಯಿಕ ಮತ್ತು ಯರಜರ್ವಿ ಗ್ರಾಮದ ಪುಂಡಲೀಕ ಲಕ್ಷ್ಮಣ ಗೊಡಚಿ ಎಂಬ ಬಂಧಿತರು. ಇವರಿಂದ 1505 ರೂ. ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ನಿಪ್ಪಾಣಿ ಮತ್ತು ಮುರಗೋಡ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ: ದುರ್ಗೇಶ

ಕನ್ನಡಮ್ಮ ಸುದ್ದಿ-ಬೆಳಗಾವಿ: ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕು. ಶಿಕ್ಷಣದಿಂದ ಎಲ್ಲವನ್ನು ಗೆಲ್ಲಬಹುದು ಇವತ್ತಿನ ದಿನಮಾನಗಳಲ್ಲಿ ಶಿಕ್ಷಣ ಪಡೆಯದೇ ಇದ್ದರೆ ಮನುಷ್ಯ ಬದಕುವುದು ಕಷ್ಟವಾಗಿದೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ದುರ್ಗೇಶ ಗೋವಿಂದ ಮೇತ್ರಿ ಹೇಳಿದರು. ಖಾನಾಪುರ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಛಲವಾದಿ ಮಹಾಸಭಾ ಖಾನಾಪೂರ ತಾಲೂಕು ಘಟಕದಂದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಅವರು. ಡಾ. ಬಿ.ಆರ್ ಅಂಬೇಡ್ಕರ್ ವಿದ್ಯಾರ್ಥಿಗಳಿಗೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು. ದಲಿತ ವ್ಯಕ್ತಿಯಾದ ಕೋವಿಂದ ರಾಮ ರಾಷ್ಟ್ರಪತಿಯಾಗಿದ್ದಾರೆ. ಛಲವಾದಿ...

ಕಾಳಿಕಾ ಜುವೆಲರ್ಸನಲ್ಲಿ ಚಿನ್ನಾಭರಣ ದರೋಡೆ

ಬೆಳಗಾವಿ: ಒಂದು ಕೆಜಿ ಬೆಳ್ಳಿ, ಎರಡು ತೊಲೆ ಬಂಗಾರ ಮುತ್ತು ಹವಳ ದರೋಡೆ ಮಾಡಿದ ಪ್ರಕರಣ ಮಂಗಳವಾರ ತಡರಾತ್ರಿ ನಡೆದಿದೆ. ರಾಮದುರ್ಗ ತಾಲೂಕಿನ ಚಂದರಗಿ ಗ್ರಾಮದ ಮೌನೇಶ ಬಡಿಗೆರ ಎಂಬುವರ ಕಾಳಿಕಾ ಜುವೆಲರ್ಸ ಅಂಗಡಿಯಲ್ಲಿ ದರೋಡೆ ನಡೆದಿದೆ. ಇವರು ರಾತ್ರಿ ಅಂಗಡಿ ಬಾಗಿಲು ಹಾಕಿ ಮನೆಗೆ ತೆರಳುವ ಸಮಯವನ್ನು ನೋಡಿಕೊಂಡಿದ್ದ ಕದಿಮರು ೧ ಕೆಜಿ ಬೆಳ್ಳಿ, ೨ ತೊಲೆ ಬಂಗಾರ, ಹವಳ ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ‌ಎಂದು ತಳಿದು ಬಂದಿದೆ. ಈ ಕುರಿತು ಕಡಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ‌ನಡೆಸಿದ್ದಾರೆ.

ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಿ: ಡಿಸಿ ಜಿಯಾವುಲ್ಲಾ

ಕನ್ನಡಮ್ಮ ಸುದ್ದಿ-ಬೆಳಗಾವಿ: ಶಿಕ್ಷಕರು ಇಂದಿನ ಮಕ್ಕಳಿಗೆ ನೈತಿಕ ಶಿಕ್ಷನವನ್ನು ನೀಡಿ ನಮ್ಮ ನಾಡಿನ ಪರಂಪರೆಯನ್ನು ಉಳಿಸಿ ಬೆಳಸಿ ಎಂದು ಜಿಲ್ಲಾಧಿಕಾರಿ ಎಸ್ ಜಿಲಾಯಾವುಲ್ಲಾ ಹೇಳಿದರು. ಇಂದು ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರು ಸಂಭ್ರಮ-೨೦೧೭ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು. ಮಕ್ಕಳು ಶಾಲೆಯಲ್ಲಿ ಉತ್ತಮ ರ‌್ಯಾಂಕ ಹೊಂದುತ್ತಿದ್ದರೆ ಹೊರತು ತಾಳ್ಮೆ, ಸಹನೆ ಗುಣಗಳನ್ನು...

ಅಂಗಡಿ ದರೋಡೆ: ಅಪಾರ ಪ್ರಮಾಣದ ಹಣ ಕಳವು

ಲೋಕಾಪುರ: ಲೋಕಾಪೂರ ಗ್ರಾಮದ ಬಿ.ಕೆ. ಮಠದ ಕಾಂಪ್ಲೆಕ್ಸನಲ್ಲಿನ ನಾಲ್ಕೂ ಹಾಗೂ ಅದರ ಪಕ್ಕದ ಎರಡು ಅಂಗಡಿಗಳ ಸೆಟ್ರಸ್ ಮುರಿದು ಏಳು ಜನ ದರೋಡೆಕೋರರು ಅಪಾರ ಪ್ರಮಾಣದ ಹಣ ನಗದು ಹಾಗೂ ಇನ್ನಿತರ ವಸ್ತುಗಳನ್ನು ಕಳವು ಮಾಡಿದ ಘಟನೆ ಸೋಮವಾರ ಮಧ್ಯರಾತ್ರಿ 1 ಘಂಟೆ ಸುಮಾರಿಗೆ ನಡೆದಿದೆ. ಸ್ಥಳೀಯ ಜ್ಞಾನೇಶ್ವರ ಮಠದ ಹಿಂದುಗಡೆ ಇರುವ ಇಂಡಿಯನ್ ಸ್ಪೋಟ್ರ್ಸ, ಶ್ರೀಧರ ಅಡಕೆ ಅಂಗಡಿ, ಶ್ರೀ ಸಾಯಿ ಗಣೇಶ ಸ್ಟೋರ್ಸ, ಶ್ರೀ ಗಣೇಶ ಹಾರ್ಡವೇರ್ಸ, ಮಂಜುನಾಥ ಇಲೇಕ್ಟ್ರಿಕಲ್, ವಜ್ರಾ ಆಗ್ರಿ ಎಂಬವರ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ. ಸಿಸಿಟಿವ್ಹಿ ಕಳ್ಳರ...

ಸುಮುದಾಯ ಭವನದ ಶಂಕುಸ್ಥಾಪನೆ

ರಾಯಬಾಗಃ ಸುಮುದಾಯ ಭವನ ನಿರ್ಮಾಣ ಮಾಡುವುದರಿಂದ ಸಭೆ ಸಮಾರಂಭಗಳಿಗೆ ಇನ್ನಿತರ ಸಾಮಾಜಿಕ ಕೆಲಸಗಳಿಗೆ ಉಪಯೋಗವಾಗುತ್ತದೆ ಆದ್ದರಿಂದ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು ತಾಲೂಕಿನ ನಾಗರಾಳ ಗ್ರಾಮದಲ್ಲಿ ಶಾಸಕರ ಅನುದಾನದಡಿಯಲ್ಲಿ ರೂ.12 ಲಕ್ಷ ವೆಚ್ಚದಲ್ಲಿ ಉದ್ದೇಶಿತ ಬಾಬು ಜಗಜ್ಜೀವನರಾಮ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಸಮುದಾಯ ಭವನ ನಿರ್ಮಿಸುವುದರಿಂದ ಸಭೆ ಸಮಾರಂಭ, ಮದುವೆ ಕಾರ್ಯ ನಡೆಸಲು ಸಹಕಾರಿಯಾಗಲಿದೆ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು. ಈ ಸಂರ್ಭದಲ್ಲಿ ಸದಾಶಿವ ಘೋರ್ಪಡೆ, ಅನಿಲ ಸಾನೆ, ಶಿವಾನಂದ ಮಗದುಮ್, ದಶರಥ ದೊಡ್ಡಮನಿ, ಮಹಾದೇವ ಐಹೊಳೆ, ಮನೋಹರ ಪಾಟೀಲ, ಬಸಲಿಂಗ...

ರಸ್ತೆ ನಿರ್ಮಾಣ ಕಾಮಗಾರಿಗೆ ಅಶೋಕ ಪಟ್ಟಣ ಭೂಮಿ ಪೂಜೆ

ರಾಮದುರ್ಗ: ಸ್ಥಳೀಯ ಸಾರಿಗೆ ಘಟಕದಲ್ಲಿನ ಡಿಪೋ ಆವರಣದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಭೂಮಿ ಪೂಜೆ ನೇರವೆರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ತಾಲೂಕಿನ ಬಹುತೇಕ ಬಸ್ ನಿಲ್ದಾಣಗಳಲ್ಲಿ ಸಿಮೇಂಟ್ ಕಾಂಕ್ರೀಟ್ ಮಾಡುವ ಮೂಲಕ ಶಾಶ್ವತ ಕೆಲಸ ಮಾಡಲಾಗಿದೆ. ಜನದಟ್ಟನೆ ಹೆಚ್ಚಾಗಿರುವ ಸ್ಥಳೀಯ ಬಸ್ ನಿಲ್ದಾಣದ ಆವರಣವನ್ನು 1.52 ಕೋಟಿ ವೆಚ್ಚದಲ್ಲಿ ಸಿ.ಸಿ ಕರಣಗೊಳಿಸಲಾಗುವದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷ ಸದಾನಂದ ಡಂಗನವರ, ಪುರಸಭೆ ಅಧ್ಯಕ್ಷ ರಾಜು ಮಾನೆ, ಸಣ್ಣ...

ಮಲೇಶಿಯಾದ ಅಂತಾರಾಷ್ಟ್ರೀಯ ಪತಂಗೋತ್ಸವದಲ್ಲಿ ಸಂದೇಶ ಮಾಡಲಿದ್ದಾರೆ ಕಮಾಲ್

ಕನ್ನಡಮ್ಮ ಸುದ್ದಿ ಬೆಳಗಾವಿ:19 ಮಲೇಶಿಯಾದ ಮರ್ಸಿಂಗ್ ಹಾಗೂ ಬೊರ್ನಿಯೊದಲ್ಲಿ ಇದೇ ದಿ. 23 ರಿಂದ 27ರ ವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿ ಪತಂಗೋತ್ಸವಕ್ಕೆ ಬೆಳಗಾವಿಯಿಂದ ಸಂದೇಶ ಕಡ್ಡಿ ಅವರು ಭಾಗವಹಿಸಲಿದ್ದಾರೆ. ಸಂದೇಶ ಕಡ್ಡಿ ಅವರು ಇತ್ತೀಚೆಗೆ ಇಂಡೋನೇಷಿಯಾದ ಬಾಲಿಯ ಮರ್ತಸಾಲಿ ಬಿಚ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಪತಂಗೋತ್ಸವದಲ್ಲಿ ಭಾಗವಹಿಸಿದ್ದರು. ಇವರು ಹಾರಿಸುವ ಪಂತಂಗಗಳು ಬಾನಂಗಳದಲ್ಲಿ ಹಕ್ಕಿಗಳ ಹಾರಾಟ ನೋಡೊದು ಚೆಂದ, ಆದರೆ ಬಣ್ಣ ಬಣ್ಣದ ಗಾಳಿಪಟಗಳು ಹೊರ ದೇಶದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ್ದನ್ನು ನೋಡುವದು ಇನ್ನೂ ಚೆಂದ. ವಿಶಾಲ ಮೈದಾನದ ತುಂಬ ಗಾಳಿ ಪಟದ ಸುದ್ದಿ. ಒಂದಕ್ಕಿಂತ...

ನಿಧಿಯಾಸೆಗಾಗಿ ಶಿಶುಗಳನ್ನು ಬಲಿಕೊಡುವ ಪೈಶ್ಚಾಚಿಕ ಕೃತ್ಯ ಬಯಲು

ಕನ್ನಡಮ್ಮ ಸುದ್ದಿ ಬೆಳಗಾವಿ:19 ಮಹಾಲಯ ಅಮವಾಸೆ ಹಿಂದುಗರಿಗೆ ದಸರಾಹಬ್ಬಕ್ಕೆ ಆರಂಭದ ಅಮವಾಸೆ ಇದೊಂದು ಪವೀತ್ರ ಅಮವಾಸೆಯೂ ಹೌದು ಇದನ್ನು ಹಿಂದುಗಳು ದೊಡ್ಡ ಅಮವಾಸೆ ಎಂದು ಕರೆಯುವುದು ಸಹಜ. ಇಮಾಮ್ ಸಾಬಿಗೂ ಗೋಕಲಾಷ್ಠಮಿಗೂ ಎತ್ತಣ ಸಂಬಂಧ ಆದರೂ ತಿಂಗಳಲ್ಲಿ ಎರಡುದಿನಗಳಾದ ಅಮವಾಸೆ ಮತ್ತು ಹುಣ್ಣಿಮೆ ಇದಾವುದೋ ಕರಾಳ ದಿನಗಳೆಂದರೆ ತಪ್ಪಾಗಲಾರದು. ನಿಧಿಯ ಆಸೆಗಾಗಿ ಸುಮಾರು ನಾಲ್ಕಾರು ಕಂದಮ್ಮಗಳನ್ನು ಬಲಿ ಕೊಡಬೇಕೆನ್ನುವ ವಾಮಾಚಾರದ ಕುತಂತ್ರÀ ಬಡಕಲಗಲ್ಲಿಯ ಮನೆಯೊಂದರಲ್ಲಿ ಅಮವಾಸೆಯ ಮುನ್ನಾದಿನವಾದ ಮಂಗಳವಾರ ಬೆಳಕಿಗೆ ಬಂದಿದೆ. ಅಜ್ಞಾನ ಮೂಡನಂಭಿಕೆ ಕಂದಾಚಾರಗಳು ಇನ್ನೂ ನಮ್ಮಲ್ಲಿವೆ ಎನ್ನುವುದಕ್ಕೆ ಇದೊಂದು ಸಾಕ್ಷಿಯಾಗಿದೆ. ಭಾರಿ ಪ್ರಮಾಣದ ನಿಧಿ...
loading...
Facebook Auto Publish Powered By : XYZScripts.com