Home ಬೆಳಗಾವಿ

ಬೆಳಗಾವಿ

Belgaum city and district news

ಇಂದು ಐಎಂಇಆರ್‍ನಲ್ಲಿ ಹೂಡಿಕೆದಾರರ ಸಂವಾದ: ಕುಲಗೋಡ

ಬೆಳಗಾವಿ:21 ಹುಬ್ಬಳ್ಳಿಯ ಟೈ ಮತ್ತು ಇಲ್ಲಿಯ ಕರ್ನಾಟಕ ಕಾನೂನು ಸಂಸ್ಥೆಯ ಐಎಂಇಆರ್‍ನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ತಂತ್ರಜ್ಞ ಹಾಗೂ ಹೂಡಿಕೆದಾರರಾಗಿರುವ ಅಮೇರಿಕಾದ ಕನ್ವಲ್ ರೇಖಿ ಅವರೊಂದಿಗೆ ನೆಟವರ್ಕಿಂಗ ಹಾಗೂ ಮಾರ್ಗದರ್ಶನದೊಂದಿಗೆ ಉದ್ಯಮದ ಬೆಳವಣಿಗೆ ವಿಷಯ ಕುರಿತು ಜನೇವರಿ 23 ರಂದು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಗುರುವಾರದಂದು ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಟೈನ ವರ್ಕಿಂಗ ಕಮಿಟಿ ಸಂಚಾಲಕ ಶಶಿಕಾಂತ ಕುಲಗೋಡ ಅವರು, ಐಎಂಇಆರ್‍ನ ಸಭಾಭಭವನದಲ್ಲಿ ಜನೇವರಿ 23 ರಂದು ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ಈ ಸಂವಾದ ಏರ್ಪಡಿಸಲಾಗಿದೆ. ಸಂವಾದದಲ್ಲಿ ಉದ್ಯಮಿಗಳು,...

ನಾಳೆ ರಾಷ್ಟ್ರೀಯ ರೈತ ದಿನಾಚರಣೆ

ಸವದತ್ತಿ: ಭಾರತೀಯ ಕೃಷಿಕ ಸಮಾಜ ನವದೆಹಲಿ ಮತ್ತು ಯುವ ಮತ್ತು ಮಹಿಳಾ ಘಟಕ ಕರ್ನಾಟಕ ರಾಜ್ಯ ಘಟಕ ಇವರು ದಿ. 23ರಂದು ಶುಕ್ರವಾರ ಬೆಳಿಗ್ಗೆ 10.30.ಕ್ಕೆ. ತಾಲೂಕಾ ಕ್ರೀಡಾಂಗಣ ಸವದತ್ತಿಯಲ್ಲಿ ರಾಷ್ಟ್ರೀಯ ರೈತ ದಿನಾಚಣೆ ಹಮ್ಮಿಕೋಳ್ಳಲಾಗಿದ್ದು. ಕಾರ್ಯಕ್ರಮದ ದಿವ್ಯ ಸಾನಿದ್ಯ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮ. ಶ್ರೀ ಉಮೇಶ ಶಿವಾಚಾರ್ಯರು ಸಾಂಭಯ್ಯಶಿವ ಮಠ ಹೂಲಿ. ಉದ್ಘಾಟಕರು ಆನಂದ ಮಾಮನಿ ಶಾಸಕರು ಸವದತ್ತಿ. ವಿಶ್ವನಾಥ ಪಾಟೀಲ ಶಾಸಕರು ಬೈಲಹೊಂಗಲ. ಬಸನಗೌಡ ಪಾಟೀಲ ಯತ್ತನಾಳ ಎಮ್‌.ಎಲ್‌.ಸಿ. ಶ್ರೀ ವಿವೇಕರಾವ್‌ ಪಾಟೀಲ ಎಮ್‌.ಎಲ್‌.ಸಿ. ಮುಖ್ಯ ಅಥಿತಿಗಳಾಗಿ ರಮೇಶ ಜಾರಕಿಹೋಳಿ ಸಚಿವರು ಕರ್ನಾಟಕ ಸರಕಾರ. ವಿನಯ ಕುಲಕರ್ಣಿ ಸಚಿವರು ಕರ್ನಾಟಕ ಸರಕಾರ. ಸರೇಶ ಅಂಗಡಿ ಸಂಸದರು ಬೆಳಗಾವಿ. ಮುರಗೇಶ ನಿರಾಣಿ ಮಾಜಿ ಸಚಿವರು. ಶಂಕರ ಬಿದರಿ. ಮತ್ತು ದೀಪಕ ಚಿಂಜೋರೆ. ಅಧ್ಯಕ್ಷರು ಲಿಂಗರಾಜ ಪಾಟೀಲ. ರಾಜ್ಯಾಧ್ಯಕ್ಷರು ಭಾರತೀಯ ಕೃಷಿಕ ಸಮಾಜ. ಶಿವನಗೌಡ ಪಾಟೀಲ. ರಾಜ್ಯಾಧ್ಯಕ್ಷರು ಯುವಘಟಕ ಭಾರತೀಯ ಕೃಷಿಕ ಸಮಾಜ. ಮಾಣಿಕ್ಯ ಚಿಲ್ಲೂರ ರಾಜ್ಯಾಧ್ಯಕ್ಷರು ಮಹಿಳಾ ಘಟಕ ಭಾರತೀಯ ಕೃಷಿಕ ಸಮಾಜ. ಭಾರತೀಯ ಕೃಷಿಕ ಸಮಾಜದ ಪದಾಧಿಕಾರಿಗಳಾದ ವೀರೇಶ ಸಜ್ಜನವರ. ಸಂಜಯ ಚೌದರಿ. ವೀರೇಶ ಹಿರೇಮಠ. ಮಹಾಂತೇಶ ತೋಟಗಿ. ಹರೀಶ ಹಾಗೂ ಮಂಜುನಾಥ. ಅತಿಥಿಗಳಾಗಿ ಬಸವರಾಜ ಮೇಳವಂಕಿ ತಹಸಿಲ್ದಾರ ಸವದತ್ತಿ.ಎಲ್‌.ಎಮ್‌.ಹೋಸಮನಿ ನಿರ್ದೇಶಕರು ಕೃಷಿ ಇಲಾಖೆ ಸವದತ್ತಿ. ಕೆ.ಲೊಕೇಶ ನಿರ್ದೇಶಕರು ತೋಟಗಾರಿಕೆ ಸವದತ್ತಿ. ಬಿ.ಎಸ್‌.ವಂಟಮೂರಿ. ಸಿ.ಪಿ.ಆಯ್‌. ಸವದತ್ತಿ. ರಾಜಶೇಖರ ಕಾರದಗಿ ಅಧ್ಯಕ್ಷರು ಯಲ್ಲಮ್ಮಾ ಪುರಸಭೆ ಸವದತ್ತಿ. ಮತ್ತು ಆನಂದ ಚೋಪ್ರಾ. ವಿಶ್ವಾಸ ವೈದ್ಯ. ಮಂಜುನಾಥ ಪಾಚರಂಗಿ. ಜಿಲ್ಲಾ ಪದಾಧಿಕಾರಿಗಳು ಮತ್ತು ತಾಲೂಕಾ ಪದಾಧಿಕಾರಿಗಳು ತಾಲೂಕಾ ಕ್ರೀಡಾಂಗಣದಲ್ಲಿ ನಡೆಯುವ ರೈತ ದಿನಾಚರಣೆ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮತ್ತು ರಾಜ್ಯ ಕೃಷಿ ವಿದ್ವಾಂಸರು ಮತ್ತು ಹಲವಾರು ಗಣ್ಯ ವ್ಯಕ್ತಿಗಳು ಪಾಲ್ಗೋಳತ್ತಿದ್ದು ಸಮಸ್ತ ರೈತ ಬಾಂಧವರು ಕಾರ್ಯಕ್ರಮಕ್ಕೆ ಆಗಮಿಸಿ ರೈತ ದಿನಾಚರಣೆಯಲ್ಲಿ ಪಾಲಗೋಳ್ಳಬೆಕೆಂದು ಭಾರತೀಯ ಕೃಷಿಕ ಸಮಾಜದ ಪದಾಧಿಕಾರಿಗಳು ತಿಳಿಸಿದ್ದಾರೆ.

ಇಂದು ಉಚಿತ ಆರೋಗ್ಯ ತಪಾಸಣೆ ಶಿಬಿರ

ಬೆಳಗಾವಿ.ಸೆ.17:ಇಲ್ಲಿಯ ವಿಜಯಾ ಆಸ್ಪತ್ರೆ ಹಾಗೂ ವಿಜಯಾ ಟ್ರಾಮಾ ಸೆಂಟರ್ನಲ್ಲಿ ಮಂಗಳವಾರ ಸೆ.18 ರಂದು ಅಸ್ಥಿ ಸಂಧಿವಾತ ರೋಗಿಗಳಿಗಾಗಿ ಉಚಿತ ಆರೊಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಖ್ಯಾತ  ಅಸ್ಥಿ ಸಂಧಿವಾತ ತಜ್ಞರಾದ ಡಾ.ಪ್ರಶಾಂತ ಎನ್.ಡಿ. ಇವರು  ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರೋಗಿಗಳ ತಪಾಸಣೆ ನಡೆಸಲಿದ್ದಾರೆ. ಅದಲ್ಲದೇ ಪ್ರತಿ ಮಂಗಳವಾರದಂದು  ಈ ತಜ್ಞರು ರೋಗಿಗಳ ಉಚಿತ ತಪಾಸಣೆ ನಡೆಸಲಿದ್ದು , ರೋಗಿಗಳು ಇದರ ಲಾಭ ಪಡೆದುಕೊಳ್ಳಬೇಕೆಂದು ವಿಜಯಾ ಆಸ್ಪತ್ರೆಯ ನಿರ್ದೆಶಕರಾದ ಡಾ. ರವಿ ಪಾಟೀಲ  ಅವರು ಕೋರಿದ್ದಾರೆ.

ಮಹಿಳೆಯರು ಸ್ವಯಂ ಉದ್ಯೌಗದಿಂದ ಆರ್ಥಿಕವಾಗಿ ಸಬಲರಾಗಲು ಕರೆ

ಘಟಪ್ರಬಾ: ಇಂದಿನ ಕಂಪೂಟರೀಕೃತ ಯುಗದಲ್ಲಿ ಮಹಿಳೆಯರು ಎಲ್ಲದರಲ್ಲೂ ಮುಂದೆ ಇದ್ದು ಸ್ವಯಂ ಉದ್ಯೌಗದಲ್ಲಿ ಮಹಿಳೆಯರು ತಮ್ಮನ್ನು ತಾವು ತೋಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು  ಅರಭಾಂವಿ ಬ್ಲಾಕ್ ಯುವ ಕಾಂಗ್ರೇಸ್ ಅಧ್ಯಕ್ಷ ಭರಮಾನಂದ ಉಪ್ಪಾರ ಹೇಳಿದರು. ಅವರು ಸಮೀಪದ ತುಕ್ಕಾನಟ್ಟಿ ಗ್ರಾಮದ ಸಮುದಾಯ ಕಲಿಕಾ ಕೇಂದ್ರದಲ್ಲಿ ಇತ್ತೀಚಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಸಂಘದ ವತಿಯಿಂದ ಆಯೋಜಿಸಲಾದ ಮಹಿಳಾ ಜ್ಞಾನ ವಿಕಾಸ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಸಂಘಗಳೇ ಮಹಿಳೆಯರಿಗೆ ಆಧಾರಸ್ಥಂಭವಾಗಿದ್ದು ಸಂಘಗಳ  ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭನೆ ಸಾಧಿಸಬೇಕು. ವ್ಯಸನ ಮುಕ್ತ ಗ್ರಾಮ ನಿರ್ಮಾಣ, ಆದರ್ಶ...

ಜಿಲ್ಲೆಯ ಜನರಿಗೆ ಸಜಾ, ಬೆಳಗಾವಿ ಜಿ.ಪಂ. ಸದಸ್ಯರ ಮಜಾ

ಬರ ಪರಿಸ್ಥಿತಿಯಿಂದ ರೈತರು ಕಂಗಾಲು, ಕುಡಿಯುವ ನೀರಿಗಾಗಿ ಜನಸಾಮಾನ್ಯರ ದುಂಬಾಲು, ಆದರೆ ಜಿಪಂ ಸದಸ್ಯರ ಪ್ರವಾಸದ ಕಮಾಲು   ಬೆಳಗಾವಿ,22- ಬೆಳಗಾವಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಬೇಸಿಗೆಗೆ ಮುನ್ನ ಜಿಲ್ಲೆಯ ನದಿಯ ಹಳ್ಳಗಳ ಬತ್ತಿ ಹೋಗಿವೆ. ಕುಡಿಯುವ ನೀರಿಗಾಗಿ ಜಿಲ್ಲೆಯ ಜನರು ಪರದಾಡುತ್ತಿರುವ ಪರಿಸ್ಥಿತಿಯಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿಯ ಸದಸ್ಯರು ಮಜಾ ಮಾಡಲು ಗೋವಾ ಪ್ರವಾಸಕ್ಕೆ ಹೊರಡಿರುವುದು ಅಚ್ಚರಿಯ ಸಂಗತಿಯಾಗಿದೆ. ಬೆಳಗಾವಿಯ ಜಿಲ್ಲಾ ಪಂಚಾಯತಿ ರಾಜ್ಯದಲ್ಲಿಯೇ ಅತಿ ದೊಡ್ಡ ಜಿಲ್ಲಾ ಪಂಚಾಯತಿಯಾಗಿದ್ದು, 86 ಸದಸ್ಯರ ಪೈಕಿ 57 ಸದಸ್ಯರು ಮಂಗಳವಾರ ರಾತ್ರಿ...

ರೈತರು ಆತಂಕಕ್ಕೆ ಒಳಗಾಗಬೇಡಿ : ಶಾಸಕ ಜಾರಕಿಹೊಳಿ

ಗೋಕಾಕ 05: ಹಿಡಕಲ್ ಜಲಾಶಯದಿಂದ ಈಗಾಗಲೇ ಘಟಪ್ರಭಾ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳಿಗೆ ನೀರನ್ನು ಹರಿಸಲಾಗಿದ್ದು, ರೈತರು ಯಾವುದಕ್ಕೂ ಆತಂಕಕ್ಕೆ ಒಳಗಾಗಬೇಡಿ. ತಾಲೂಕಿನ ಎಲ್ಲ ಸಾರ್ವಜನಿಕರಿಗೂ ಕುಡಿಯಲಿಕ್ಕೆ ನೀರು ಮುಟ್ಟಲಿದೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶನಿವಾರ ಘಟಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಹರಿಸುತ್ತಿರುವುದನ್ನು ಪರಿಶೀಲಿಸಿದ ಬಳಿಕ ಯಾದವಾಡ-ಕೊಪದಟ್ಟಿ ಬ್ರೀಜ್ ಕಮ್ ಬ್ಯಾರೇಜ್ ಬಳಿ ಅವರು ಮಾತನಾಡಿದರು. ಕಳೆದ ನಾಲ್ಕು ದಿನಗಳಿಂದ ಹಿಡಕಲ್ ಜಲಾಶಯದಿಂದ ನೀರು ಬರುತ್ತಲಿದೆ. ತಾಲೂಕಿನ ಎಲ್ಲ ನಾಗರೀಕರಿಗೂ ಕುಡಿಯುವ ನೀರು ಸಿಗಲಿದೆ. 10 ಸಾವಿರಕ್ಕೂ...

ಬರಗಾಲ ಕೈಕೊಟ್ಟ ಹಿಂಗಾರು ಮಳೆ: 1.63 ಲಕ್ಷ ಹೆಕ್ಟರ್ ಬೆಳೆ ನಾಶ

ರೈತರಿಗೆ ಬರದ ಬರೆ | ಸಾಲದ ಸುಳಿಗೆ ಅನ್ನದಾತ ಕೆ ಎಮ್. ಪಾಟೀಲ- ಬೆಳಗಾವಿ: ಹಿಂಗಾರು ಬೆಳೆಗೆ ಮಳೆ ಬಾರದೆ ಬರಗಾಲ ಆವರಿಸಿದ ಕಾರಣ ಜಿಲ್ಲೆಯಲ್ಲಿ 1, 63 ಲಕ್ಷಕ್ಕೂ ಹೆಚ್ಚು ಹೆಕ್ಟರ ಜಮೀನಿನಲ್ಲಿ ಸೆಪ್ಟೆಂಬರ್ ತಿಂಗಳ ಅಲ್ಪ ಸ್ವಲ್ಪ ಮಳೆಯಾದ ಹಿನ್ನಲೆಯಲ್ಲಿ ಜೋಳ, ಗೋವಿನ ಜೋಳ, ಗೋಧಿ, ಕಡಲೆ, ಸೂರ್ಯ ಕಾಂತಿ, ಕುಸುಬೆ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಗುರಿ ಪ್ರಕಾರ ಒಟ್ಟು 3,35,000 ಹೆಕ್ಟರ ಭೂಮಿಯಲ್ಲಿ ಬೆಳೆಯನ್ನು ಬಿತ್ತನೆಯ ಮಾಡುವ ಉದ್ದೇಶವನ್ನು ಹೊಂದಿತ್ತು ಅದರಂತೆ 3,00996 ಬಿತ್ತನೆ ಮಾಡಿದ್ದಾರೆ....

ವಿದ್ಯಾರ್ಥಿಗಳಿಗೆ ಸಸಿ ವಿತರಣೆ

ಬೆಳಗಾವಿ 15: ಸ್ಥಳಿಯ ಮಾಹಾಂತೇಶ ನಗರದ ಎಮ್.ಎಲ್.ಎ ಸರಕಾರಿ ಕನ್ನಡ ಮಾದರಿ ಶಾಲೆಯ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಕಾರ್ಯಕ್ರಮವು ಇಂದು ಜರುಗಿತು. ನಗರದ ಆನಂದ ಪೌಂಡೇಶನ ಹಾಗೂ ಅರಣ್ಯ ಇಲಾಖೆಯ ಸಯುಕ್ತಾಶ್ರಯದಲ್ಲಿ ಈ ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೋಲ್ಳಲಾಗಿತ್ತು ಮಹಾನಗರ ಸಭೆಯ ಸದಸ್ಯೆ ಪುಷ್ಪಾ ಪರ್ವತರಾವ ಇವರು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಸಾಗವಾಣಿ ಹಾಗೂ ತುಳಸಿಯ ಸುಮಾರು 520 ಸಸಿಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆನಂದ ಪೌಡೇಶನ ಅಧ್ಯಕ್ಷೆ ಲೀನಾ ಟೋಪಣ್ಣವರ, ಶಿವಲೀಲಾ ಹಿರೇಮಠ, ಶಾಲೆಯ ಮುಖ್ಯಾಧ್ಯಾಪಕ ಬಿ.ಜಿ.ಶಿವಪೂಜೆಮಠ, ಎಮ್.ಜಿ.ವಿಭೂತಿ, ಸೇರಿದಂತೆ...

ಜಿಡ್ಡುಗಟ್ಟಿದ ಅಧಿಕಾರಿಗಳನ್ನು ಎಚ್ಚರಿಸಿದ ಸ್ತ್ತ್ರೀಶಕ್ತಿ

ಎಸಿ ರೂಂನಲ್ಲಿ ಕುಳಿತುಕೊಳ್ಳದೇ ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದಿಸಿ- ಕಲ್ಲೌಳಿಕರ ಬೆಳಗಾವಿ 11: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡೆದೇ ಜಿಲ್ಲೆಯಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ತಮ್ಮ ತಮ್ಮ  ಇಲಾಖೆಯ ಕಾರ್ಯಚಟುವಟಿಕೆ, ಪ್ರಗತಿ ಪರೀಶೀಲನೆ ಮಾಡಬೇಕೆಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಶಾಂತಾ ಕೃಷ್ಣಾ ಕಲ್ಲೌಳಿಕರ  ಸೂಚಸಿದರು. ಅವರು ಗುರುವಾರ ನಡೆದ ಜಿಪಂ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ  ಅವರು ಅಧಿಕಾರಿಗಳು ಸಭೆಗಳಲ್ಲಿ ಅಂಕಿ-ಅಂಶಗಳನ್ನು ನೀಡದೆ ಜಿಲ್ಲೆಯಲ್ಲಿರುವ ಗ್ರಾಮಗಳಿಗೆ ಹಾಗೂ ಕ್ಷೇತ್ರ ಮಟ್ಟಕ್ಕೆ ತೆರಳಿ ತಮ್ಮ ಇಲಾಖೆಯ...

ಲಿಬರಲ್ .37 ಲಕ್ಷ ರೂ. ಲಾಭ ಸೊಸೈಟಿಗೆ

ಯಕ್ಸಂಬಾ 26- ಗ್ರಾಮದ ಲಿಬರಲ್ ಕೋ-ಆಪ್ ಕ್ರೆಡಿಟ್ ಸೊಸೈಟಿಗೆ 28.37 ಲಕ್ಷ ರೂ. ನಿವ್ವಳ ಲಾಭ ಗಳಿಸಿರುವುದಾಗಿ ಎಲ್.ಬಿ. ಖೋತ ಹೇಳಿದರು. ಅವರು ಸೊಸೈಟಿಯ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸೊಟೈಟಿಯು 2415 ಸದಸ್ಯರನ್ನು ಹೊಂದಿ 37.85 ಲಕ್ಷ ರೂ. ಶೇರು ಬಂಡವಾಳ, 2.52 ಕೋಟಿ ರೂ. ನಿಧಿ, 17.98 ಕೋಟಿ ಠೇವು ಸಂಗ್ರಹಿಸಿ 10.40 ಕೋಟಿ ರೂ. ಸಾಲ ವಿತರಿಸಿ 28.37 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಶೇ. 20 ರಷ್ಟು ಲಾಭಾಂಶ ವಿತರಿಸಲಾಗುವುದು ಎಂದರು....
loading...