ಬೆಳಗಾವಿ

Belgaum city and district news

ನೂತನ ಶಿಕ್ಷಣ ಸಚಿವರು ಅಧಿಕಾರ ಸ್ವೀಕಾರ: ಅಭಿನಂದನೆ ಸಲ್ಲಿಸಿದ ರಾವಿವಿ ಕುಲಸಚಿವ

ನೂತನ ಶಿಕ್ಷಣ ಸಚಿವರು ಅಧಿಕಾರ ಸ್ವೀಕಾರ: ಅಭಿನಂದನೆ ಸಲ್ಲಿಸಿದ ರಾವಿವಿ ಕುಲಸಚಿವ ಕನ್ನಡಮ್ಮ ಸುದ್ದಿ-ಬೆಳಗಾವಿ: ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಜಿ.ಟಿ‌ ದೇವೆಗೌಡ ಅವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪರವಾಗಿ ಶುಕ್ರವಾರ ಸಚಿವರ ಕಚೇರಿಯಲ್ಲಿ ಕುಲಪತಿ ಡಾ.ಎಸ್.ಬಿ. ಹೊಸಮನಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಲಸಚಿವ ಡಾ. ಸಿದ್ದು ಅಲಗುರ, ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡ ಉಪಸ್ಥಿತರಿದ್ದರು.

ನೂತನ ಶಿಕ್ಷಣ ಸಚಿವರು ಅಧಿಕಾರ ಸ್ವೀಕಾರ: ಅಭಿನಂದನೆ ಸಲ್ಲಿಸಿದ ರಾವಿವಿ ಕುಲಸಚಿವ

ನೂತನ ಶಿಕ್ಷಣ ಸಚಿವರು ಅಧಿಕಾರ ಸ್ವೀಕಾರ: ಅಭಿನಂದನೆ ಸಲ್ಲಿಸಿದ ರಾವಿವಿ ಕುಲಸಚಿವ ಕನ್ನಡಮ್ಮ ಸುದ್ದಿ-ಬೆಳಗಾವಿ: ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಜಿ.ಟಿ‌ ದೇವೆಗೌಡ ಅವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪರವಾಗಿ ಶುಕ್ರವಾರ ಸಚಿವರ ಕಚೇರಿಯಲ್ಲಿ ಕುಲಪತಿ ಡಾ.ಎಸ್.ಬಿ. ಹೊಸಮನಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಲಸಚಿವ ಡಾ. ಸಿದ್ದು ಅಲಗುರ, ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಎಸ್.ಬಿ.ಐ ಎಟಿಎಮ್ ನಲ್ಲಿ ಸುಟ್ಟ, ಹರಿದ ನೋಟುಗಳು ಪತ್ತೆ

ಎಸ್.ಬಿ.ಐ ಎಟಿಎಮ್ ನಲ್ಲಿ ಸುಟ್ಟ, ಹರಿದ ನೋಟುಗಳು ಪತ್ತೆ ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ಬಳಿ ಇರುವ ಹೆಚ್.ಎ.ಎಲ್ ಕಂಪನಿ ಬಳಿಯ ಎಟಿಎಂನಲ್ಲಿ ಸುಟ್ಟ ಹಾಗೂ ಹರಿದ ನೋಟುಗಳು ಗ್ರಾಹಕರಿಗೆ ದೊರೆತ್ತಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಶುಕ್ರವಾರ ಮುಂಜಾನೆ ಹೆಚ್ ಎ ಎಲ್ ಕಂಪನಿ ನೌಕರ ಭಗವಾನ್ ಎಂಬುವರು ಹಣ ಡ್ರಾ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ . ಕಣಗಲಾ ಗ್ರಾಮದ ಹೆಚ್.ಎ.ಎಲ್ ಕಂಪನಿ ಬಳಿಯ ಎಸ್.ಬಿ.ಐ ಎಟಿಎಂನಲ್ಲಿ ಆವಾಂತರ ಸೃಷ್ಟಿಯಾಗಿದೆ . ೨ ಸಾವಿರ ರೂ.ಮುಖಬೆಲೆಯ ಸುಟ್ಟು ಹಾಗೂ ಡ್ಯಾಮೇಜ್ ಆದ...

24 ರಂದು ಟಾರ್ಗೆಟ್‌ ಕೊಚಿಂಗ್ ಸೆಂಟರ್ ಉದ್ಘಾಟನೆ

24 ರಂದು ಟಾರ್ಗೆಟ್‌ ಕೊಚಿಂಗ್ ಸೆಂಟರ್ ಉದ್ಘಾಟನೆ . ಕನ್ನಡಮ್ಮ ಸುದ್ದಿ-ಬೆಳಗಾವಿ:ಬಡ ವಿಧ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲದ ದೃಷ್ಟಿಯಿಂದ ನಗರದಲ್ಲಿ ಟಾರ್ಗೆಟ್ ಕೊಚಿಂಗ್ ಸೆಂಟರ್ ಸಂಸ್ಥೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ಇದೆ 24 ರಂದು ರವಿವಾರ ಉದ್ಘಾಟನೆಯಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಕೃಷ್ಣ ತಿಳಿಸಿದರು . ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಎಲ್ಲ ತರಬೇತಿ ಕೇಂದ್ರಗಳಿಗಿಂತ ನಮ್ಮ ಸಂಸ್ಥೆ ಭಿನ್ನವಾಗಿದ್ದು ವಿಶೇಷವಾಗಿ ಅನಾಥ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು .ಈ ತರಬೇತಿ ಕೇಂದ್ರವನ್ನು ರವಿವಾರದಂದು ನಗರದ ಮಹಾಂತೇಶ ನಗರದ ಮಹಾಂತ ಭವನದಲ್ಲಿ...

ಪುಟ್ ಪಾತ್ ಮೇಲೆ ಮುರಿದು ಬಿದ್ದ ಮರ: ಕಣ್ಮುಚ್ಚಿ ಕುಳಿತ

ಕನ್ನಡಮ್ಮ  ಸುದ್ದಿ- ಬೆಳಗಾವಿ: ಕಳೆದ ಹದಿನೈದು ದಿನಗಳ ಹಿಂದೆ ಮಳೆಗಾಳಿಗೆ ಮರ ಮುರಿದು ರಸ್ತೆ ಮೇಲೆ‌ ಬಿದಿದ್ದರು ಸಹ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ. ಇದರಿಂದ ಪಾದಾಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ನಗರದ ತುಮಕೂರು ತಟ್ಟೆ ಇಡ್ಲಿ ಹೋಟೆಲ್ ಸಮೀಪದ ಚರ್ಚ ಪಕ್ಕದಲ್ಲಿ ಸುಮಾರು ಹದಿನೈದು ದಿನಗಳ ಹಿಂದೆ ಭಾರಿ ಮಳೆ ಗಾಳಿಯಿಂದ ಮರ ನೆಲಕ್ಕೆ ಉರಳಿದೆ. ಮರ ಪುಟ್ ಪಾತ್ ಮೇಲೆ ಬಿದಿದ್ದು ಪಾದಾಚಾರಿಗಳು ಅನಿವಾರ್ಯ ವಾಗಿ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.ಆದರೆ ಕೆಲ‌ ಶಾಲಾ ಮಕ್ಕಳು ರಸ್ತೆ ಯಲ್ಲಿ ಬರುವುದರಿಂದ ದೊಡ್ಡ ದೊಡ್ಡ ವಾಹನಗಳ ಸಂಚಾರ...

ಹತ್ತು ಲಕ್ಷ‌ ರೂ. ವೆಚ್ಚದಲ್ಲಿ ನೂತನ ಗಾರ್ಡನ್’ಗೆ ಶಾಸಕರಿಂದ ಭೂಮಿ ಪೂಜೆ

ಕನ್ನಡಮ್ಮ ಸುದ್ದಿ- ಬೆಳಗಾವಿ: ಉತ್ತರ ಕ್ಷೇತ್ರದಲ್ಲಿ ಅಭಿವೃದ್ಧಿ ಪಡೆಸುವ ಉದ್ದೇಶದಿಂದ ಶಾಸಕನಾಗಿದ್ದೆನೆ. ಕ್ಷೇತ್ರದಲ್ಲಿನ ಅರ್ಧಕ್ಕೆ ನಿಂತ ಗಾರ್ಡನಗಳನ್ನು ಅಭಿವೃದ್ಧಿ ಪಡೆಸುವ ಗುರಿ ಹೊಂದಿದ್ದೆನೆ ಎಂದು ಶಾಸಕ ಅನಿಲ ಬೆನಕೆ ಹೇಳಿದರು. ಅವರು ಶುಕ್ರವಾರದಂದು ನಗರದ ಚವಾಟಗಲ್ಲಿಯಲ್ಲಿ ನೂತನ ಗಾರ್ಡನಗೆ ಭೂಮಿ‌ ಪೂಜೆ ನೇರವೆರಿಸಿ ಮಾತನಾಡುದರು. ಕ್ಷೇತ್ರದಲ್ಲಿನ ಗಾರ್ಡನಗಳು ಹಿಂದಿನ ಶಾಸಕರ ನಿರ್ಲಕ್ಷ್ಯ ದಿಂದ ಅಭಿವೃದ್ಧಿ ಕಾಣದೆ ಕುಂಟಿತಗೊಂಡಿವೆ.ಅಲ್ಲದೆ ಕೆಲವು ಗಾರ್ಡನ್ ಕಾಮಗಾರಿ ಅರ್ಧಕ್ಕೆ ನಿಂತುಕೊಂಡಿವೆ ಅವುಗಳನ್ನು ಪೂರ್ಣಗೊಳಿಸಲಾಗುವುದು ಎಂದರು. ಈಗ ಚವಾಟಗಲ್ಲಿಯಲ್ಲಿ ಜನರ ಹಿತದೃಷ್ಟಿಯಿಂದ ನೂತನ ಗಾರ್ಡಗೆ ಚಾಲನೆ ನೀಡಲಾಗಿದೆ. ೧೦ಲಕ್ಷ ರೂ.ನಲ್ಲಿ ಗಾರ್ಡನ ಕಾಮಗಾರಿ...

ಯೋಗಾಭ್ಯಾಸ ನಡೆಸಿದ ಹಿರಿಯರು

ಯೋಗಾಭ್ಯಾಸ ನಡೆಸಿದ ಹಿರಿಯರು ಕನ್ನಡಮ್ಮ ಸುದ್ದಿ-ಬೆಳಗಾವಿ: ವಿಶ್ವ ಯೋಗ ದಿನದ ಅಂಗವಾಗಿ ನಗರದ ರಾಮತೀರ್ಥ ನಗರದ ಶಿವಾಲಯದ ಬಳಿ ಸರಕಾರಿ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ಯೋಗಾಭ್ಯಾಸ ಪ್ರಸ್ತುತ ಪಡಿಸಲಾಯಿತು. ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಗುರುವಾರ ಶ್ರೀ ಶರಣೆ ಗಂಗಾಂಬಿಕಾ ಮಹಿಳಾ ಮಂಡಳ ವತಿಯಿಂದ ಹಿರಿಯರು ಶಾಲಾ ಆವರಣದಲ್ಲಿ ಯೋಗಾಭ್ಯಾಸ ನಡೆಸಿ ಗಮನ ಸೆಳೆದರು. ಶಿಕ್ಷಕಿ ಶೋಭಾ ಅಂಗಡಿ ಯೋಗ ಪಟುಗಳಿಗೆ ಯೋಗಾಭ್ಯಾಸ ನೀಡಿದರು.

ಮಾತೃ ಭಾಷೆಯಲ್ಲಿ ಕಲಿತರೆ ದಡ್ಡರಾಗುವುದಿಲ್ಲ: ಸಂಸದ ಸುರೇಶ ಅಂಗಡಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಸರಕಾರಿ ಹಾಗೂ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಮಕ್ಕಳು ಕಲಿತರೆ ದಡ್ಡರಾಗುವುದಿಲ್ಲ. ಅದೆಷ್ಟೋ ವಿದ್ಯಾರ್ಥಿಗಳು ಮಾತೃ ಭಾಷೆಯಲ್ಲಿಯೇ ಕಲಿತು ಉನ್ನತ ಸ್ಥಾನಗಳಲ್ಲಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು. ಗುರುವಾರ ಸುವರ್ಣ ಸೌಧದ ಜಿಲ್ಲಾಡಳತ ವತಿಯಿಂದ ಜಾಣ ಜಾಣಿಯರಿಗೆ ಅಭಿನಂದನಾ ಸಮಾಂಭದಲ್ಲಿ ಮಾತನಾಡಿದವರು, ಪಾಲಕರಲ್ಲಿ ತಮ್ಮ ಮಕ್ಕಳು ಸರಕಾರಿ ಶಾಲೆಗಳಲ್ಲಿ ಕಲಿತರೆ ಜಾಣರಾಗುವುದಿಲ್ಲ ಎಂಬ ಭಾವನೆಯನ್ನು ತಗೆದುಹಾಕಬೇಕು ಎಂದರು. ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಜಿಯಾವುಲ್ಲಾ, ಜಿಲ್ಲಾ ಪಂಚಾಯತ ಸಿಇಒ ರಾಮಚಂದ್ರನ, ಡಿಸಿಪಿ ಸೀಮಾ ಲಾಟ್ಕರ್, ಪಾಲಿಕೆ ಆಯುಕ್ತ ಶಶಿಧರ ಕುರೇರ,...

ಖಾನಾಪುರ ಅರಣ್ಯ ಪ್ರದೇಶದಲ್ಲಿ ಗೌರಿ ಲಂಕೇಶ್ ಹತ್ಯೆ ‌ಆರೋಪಿ ವಿಚಾರಣೆ

ಖಾನಾಪುರ ಅರಣ್ಯ ಪ್ರದೇಶದಲ್ಲಿ ಗೌರಿ ಲಂಕೇಶ್ ಹತ್ಯೆ ‌ಆರೋಪಿ ವಿಚಾರಣೆ ಕನ್ನಡಮ್ಮ ಸುದ್ದಿ-ಬೆಳಗಾವಿ:ಹಿರಿಯ ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ತನಿಖೆಯನ್ನು ತೀವ್ರಗೊಳಿಸಿದ್ದು. ಹತ್ಯೆಗೂ ಮೊದಲು ವಾಗ್ಮೋರೆ ಬೆಳಗಾವಿಯಲ್ಲಿ ಬಂದೂಕು ತರಬೇತಿ ಪಡೆದಿದ್ದೇನೆ ಎಂದು ಬಾಯಿಬಿಟ್ಟಿದ್ದಾನೆ. ಸ್ಥಳೀಯ ಪೊಲೀಸರಿಗೆ ತನಿಖೆ ಮಾಹಿತಿ ನೀಡದೇ ಎಸ್​​​ಐಟಿ ಅಧಿಕಾರಿಗಳು ರಹಸ್ಯ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಎಸ್​ಐಟಿ ಅಧಿಕಾರಿಗಳು ವಾಗ್ಮೋರೆಯನ್ನು ಖಾನಾಪುರ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ವಾಗ್ಮೋರೆ ವಿರುದ್ಧ ಆರ್ಮ್ಸ್​ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಜಿಲ್ಲಾಡಳಿತದಿಂದ ಯೋಗ ದಿನ ಆಚರಣೆ

ಜಿಲ್ಲಾಡಳಿತದಿಂದ ಯೋಗ ದಿನ ಆಚರಣೆ ಕನ್ನಡಮ್ಮ ಸುದ್ದಿ- ಬೆಳಗಾವಿ: ಅಂತರಾಷ್ಟ್ರೀಯ ಯೋಗ ದಿನದ ನಿಮಿತ್ತವಾಗಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ,ಜಿಲ್ಲಾ ಆಯುಷ್ಯ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಇತರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಯೋಗ ದಿನ ಆಚರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಸದಸ್ಯ ಸುರೇಶ ಅಂಗಡಿ ಬೆಳಿಗ್ಗೆ ೭.೩೦ಕ್ಕೆ ನಗರದ ಗಾಂಧಿಭವನದಲ್ಲಿ ಚಾಲನೆ ನೀಡಿದರು. ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಜಿಪಂ.ಅದ್ಯಕ್ಷ ಆಶಾ ಐಹೊಳೆ, ಜಿಲ್ಲಾಧಿಕಾರಿ ಜಿಯಾವುಲ್ ಎಸ್, ಅಪರ ಜಿಲ್ಲಾಧಿಕಾರಿ ಬೂದೇಪ್ಪಾ, ಸಿಇಓ ರಾಮಚಂದ್ರನ್ ಆರ್, ಸೇರಿದಂತೆ ಎಲ್ಲ‌ ಸರ್ಕಾರಿ ಇಲಾಖೆ ಅಧಿಕಾರಿಗಳು ಯೋಗ‌ದಿನದಲ್ಲಿ ಭಾಗಿಯಾಗಿದ್ದರು.
loading...