ಬೆಳಗಾವಿ

Belgaum city and district news

ನಾಳೆ ಜಾಣ ಜಾಣಿಯರಿಗೆ ಪ್ರಶಸ್ತಿ ಪ್ರದಾನ : ಜಿಲ್ಲಾಧಿಕಾರಿ ಜಿಯಾವುಲ್ಲಾ

ಕನ್ನಡಮ್ಮ ಸುದ್ದಿ-ಬೆಳಗಾವಿ: 2017-18ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ 91ಕ್ಕಿಂತ ಮತ್ತು ಪಿಯುಸಿ 90 ಕ್ಕಿಂತ ಹೆಚ್ಚು ಅಂಕಗಳಿಸಿದ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಮತ್ತು ಸರ್ಕಾರಿ ವಸತಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾಳೆ ಪ್ರಶಸ್ತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಬುಧವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕರೆಯಲಾದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ್ ಸಿಇಒ ಆರ್ ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಬೂದಿಯಪ್ಪ ತಾಯನವರ ಇದ್ದರು.

27ರಂದು ಕೆಂಪೇಗೌಡ ಜಯಂತಿ ಆಚರಣೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಣೆ ಜೂನ್ 27 ರಂದು ಅಚ್ಚುಕಟ್ಟಾಗಿ ಆಚರಣೆ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಸೂಚನೆ ನೀಡಿದರು. ಬುಧವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೆಂಪೇಗೌಡರ ಜಯಂತಿ ಆಚರಣೆ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದವರು, ಜೂನ್ 27ರಂದು ಕೆಂಪೇಗೌಡವರ ಜಯಂತಿಯ ಅಂಗವಾಗಿ ಅಂದು ಸಂಜೆ 6 ಗಂಟೆಗೆ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮಹಾನಗರ ಆಯುಕ್ತರಾಗಿ ಶಶಿಧರ ಕುರೇರ ಅಧಿಕಾರ ಸ್ವೀಕಾರ

ಮಹಾನಗರ ಆಯುಕ್ತರಾಗಿ ಶಶಿಧರ ಕುರೇರ ಅಧಿಕಾರ ಸ್ವೀಕಾರ . ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಜ್ಯ ವಿಧಾನ ಸಭೆ ಚುನಾವಣಾ ಹಿನ್ನೆಲೆ ವರ್ಗಾವಣೆಯಾಗಿದ್ದ ಶಶಿಧರ ಕುರೇರ ಇಂದು ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಇಂದು ಪಾಲಿಕೆಯ ಸಭಾಂಗಣದಲ್ಲಿ ನಡೆದ ನೂತನ ಆಯುಕ್ತರ ಅಧಿಕಾರ ಸ್ವೀಕಾರ ಮತ್ತು ವರ್ಗಾವಣೆಗೊಂಡ ಆಯುಕ್ತರ ಬಿಳ್ಕೋಡುಗೆ ಸಮಾರಂಭ ಜರುಗಿತು. ನೂತನ ಆಯುಕ್ತರಾಗಿ ಶಶಿಧರ ಕುರೇರ ಅಧಿಕಾರ ಸ್ವೀಕರಿಸಿದರು. ವರ್ಗಾವಣೆಗೊಂಡ ಆಯುಕ್ತರಾದ ಕೃಷ್ಣಗೌಡ ತಾಯನ್ನವರ ಅಧಿಕಾರ ಹಸ್ತಾಂತರ ಮಾಡಿದರು ತಾಯನ್ನವರ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಹಾ ನಗರದ ಪಾಲಿಕೆ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಉಪ...

ನಗರದ ಟ್ರಾಫಿಕ್ ಸಮಸ್ಯೆ ನಿವಾರಿಸಿ: ಸುರೇಶ ಅಂಗಡಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಗೋಗಟೆ ವೃತ್ತದಲ್ಲಿ ಇನ್ನು ಒಂದು ಅಂಡರ್ ಬ್ರೀಜ್ (ಕೆಳ ಸೇತುವೆ) ನಿರ್ಮಾಣ ಮಾಡುವುದರಿಂದ ಅಲ್ಲಿಯ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸಹಾಯವಾಗುತ್ತದೆ ಎಂದು ಲೋಕಸಭೆ ಸದಸ್ಯ ಸುರೇಶ ಅಂಗಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಕಂಟೋನ್ಮೆಂಟ್, ಪಿಡ್ಲ್ಯೂಡಿ, ಪಾಲಿಕೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದವರು. ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ಡಾ.ಬೂದಿಯಪ್ಪ, ಪಾಲಿಕೆಯ ಆಯುಕ್ತ ಕೃಷ್ಣಗೌಡ ತಾಯ್ಯನವರ, ಕಂಟೋನ್ಮೆಂಟ್ ಸಿಇಒ ದಿವ್ಯ ಶ್ರೀರಾಮ, ಶಾಸಕ ಅನಿಲ ಬೆನಕೆ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದರು.

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ:ಸತೀಶ ಜಾರಕಿಹೊಳಿ

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ:ಸತೀಶ ಜಾರಕಿಹೊಳಿ ಕನ್ನಡಮ್ಮ ಸುದ್ದಿ-ಬೆಳಗಾವಿ:ಸಚಿವ ಸ್ಥಾನ ತಪ್ಪಿದ ಹಿನ್ನೆಲೆ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುವುದು ಸುಳ್ಳು ಎಂದು ಮಾಜಿ ಸಚಿವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಮಂಗಳವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ಹೈ ಕಮಾಂಡ್ ನನಗೆ ಪಕ್ಷದ ಜವಾಬ್ದಾರಿ ವಹಿಸಿದರೂ ನನಗೆ ಬೇಡ, ನಾನು ಬರುವ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇನೆ ಎಂದರು. ಸಚಿವ ಸ್ಥಾನ ದೊರೆಯದ ಹಿನ್ನಲೆ ಮಾನವ ಬಂಧುತ್ವ ವೇದಿಕೆ ಸಾಮಾಜಿಕ ಅನ್ಯಾಯದ ತಳಹದಿಯಲ್ಲಿ ರಾಜ್ಯದದಾದ್ಯಂತ ಪ್ರತಿಭಟನೆ...

ಕ್ಷೇತ್ರದ ಶಾಲಾ ಸಮಸ್ಯೆ ಆಲಿಸಿದ ಶಾಸಕ ಸತೀಶ ಜಾರಕಿಹೊಳಿ

ಕನ್ನಡಮ್ಮ ಸುದ್ದಿ- ಬೆಳಗಾವಿ: ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಸರಕಿಹೊಳಿಯವರು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಶಾಲಾ ಸಮಸ್ಯೆ ಗಳನ್ನು ಆಲಿಸಿದರು. ಮಂಗಳವಾರದಂದು ನಗರದ ಪಶು ಸಂಗೋಪನೆ ಇಲಾಖೆಯ ಕಟ್ಟಡದಲ್ಲಿ ನಡೆದ ಎಸ್ಡಿಎಂಸಿ ಶಾಲೆಯ ಕುಂದು ಕೊರತೆ ಸಭೆಯ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ಇದೇ ವೇಳೆ ಶಾಲಾ‌ ಶಿಕ್ಷಕರು ತಮ್ಮ ಶಾಲೆಯಲ್ಲಿ ಅನುಭವಿಸುತ್ತಿರುವ ಕಟ್ಟಡ, ಶೌಚಾಲಯ, ನೀರು, ಶಾಲಾ ಆವರಣದ ಗೊಡೆ, ಕಂಪ್ಯೂಟರ,ಕುಡಿಯುವ ನೀರು ಸೇರಿದಂತೆ ಭೌತಿಕ ಕೊರತೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಅವುಗಳನ್ನು ಪರಿಹರಿಸಬೇಕೆಂದು ಶಿಕ್ಷಕರು ಶಾಸಕ ಸತೀಶ ಜಾರಕಿಹೊಳಿಯವರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ.ಉಪಾಧ್ಯಕ್ಷ...

ಸಚಿವರಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ತಲಾ 4ಲಕ್ಷ ರೂ.ಗಳ ಚೆಕ್ ವಿತರಣೆ

  ಕನ್ನಡಮ್ಮ ಸುದ್ದಿ-ಗೋಕಾಕ: ಗೋಕಾಕ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಶಿಂದಿಕುರಬೇಟ ಗ್ರಾಮದ ಮಾಯಮ್ಮದೇವಿ ದೇವಸ್ಥಾನ, ಬೆಣಚಿನಮರಡಿ ಗ್ರಾಮದ ವಿಠ್ಠಲ ರುಕ್ಮಿಣಿ ದೇವಸ್ಥಾನ, ಅಜ್ಜನಕಟ್ಟಿ ಗ್ರಾಮದ ರಂಗಸಿದ್ದೇಶ್ವರ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯಿಂದ ಮಂಜೂರಾದ ತಲಾ 4ಲಕ್ಷ ರೂ.ಗಳ ಮೊತ್ತದ ಚೆಕ್ ಗಳನ್ನು ಸೋಮವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಗ್ರಾಮಗಳ ಹಿರಿಯರಾದ ಲಕ್ಕಪ್ಪ ಮಾಳಗಿ, ಶಿವಲಿಂಗ ಜಕ್ಕನ್ನವರ, ಯಲ್ಲಪ್ಪ ಜಕ್ಕನ್ನವರ, ಮಾಯಪ್ಪ ಮಾಯನ್ನವರ, ಸಿದ್ದಪ್ಪ ಮಾಯನ್ನವರ, ಕೆಂಚಪ್ಪ ಮಾಯನ್ನವರ...

ಏಜೆಂಟರ್ ಹಾವಳಿಗೆ ಬ್ರೇಕ್ ಹಾಕಿ:ಸಚಿವ ರಮೇಶ ಜಾರಕಿಹೊಳಿ ಎಚ್ಚರಿಕೆ

ಗೋಕಾಕ: ಕೆಲವೊಂದು ಸರ್ಕಾರಿ ಇಲಾಖೆಯಲ್ಲಿ ಏಜೆಂಟರ್ ಹಾವಳಿ ಹೆಚ್ಚಾಗಿದ್ದು ಅದನ್ನು ಅಧಿಕಾರಿಗಳು ತಡೆಗಟ್ಟಬೇಕೆಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅವರು ಸೋಮವಾರದಂದು ನಗರದ ನಗರಸಭೆ ಸಭಾಭವನದಲ್ಲಿ ಜರುಗಿದ ಮೂಡಲಗಿ ಮತ್ತು ಗೋಕಾಕ ತಾಲೂಕಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಹಲವಾರು ಯೋಜನೆಗಳನ್ನು ಬಡ ಜನರಿಗೆ ತಲುಪಿಸುವಂತಹ ಮಹತ್ತರ ಕಾರ್ಯ ಅಧಿಕಾರಿಗಳ ಮೇಲಿದ್ದು ಅದನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು. ನಮ್ಮ ವಿರುದ್ಧ ಕೆಲವರು ಅಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದು ಜಾತಿ ರಾಜಕಾರಣ,ಸುಳ್ಳು ಪ್ರಚಾರ, ಹಿಂದೂತ್ವ ಬಗ್ಗೆ...

ಕುಡಿಯುವ ನೀರಿನಲ್ಲಿ ಡ್ರೈನೆಜ್ ನೀರು: ಸ್ಥಳೀಯರ ಆಕ್ರೋಶ

ಕುಡಿಯುವ ನೀರಿನಲ್ಲಿ ಡ್ರೈನೆಜ್ ನೀರು: ಸ್ಥಳೀಯರ ಆಕ್ರೋಶ ಕನ್ನಡಮ್ಮ ಸುದ್ದಿ-ಬೆಳಗಾವಿ : ಕಳೆದ ಹದಿನೈದು ದಿನಗಳಿಂದ ನಗರದ ಬಡಕಲ್ಲಗಲ್ಲಿಯಲ್ಲಿ ನಿವಾಸಿಗಳಿಗೆ ಮನೆಯ ನಲ್ಲಿಯಲ್ಲಿ ಡ್ರೈನೆಜ್ ನೀರು ಪೂರೈಕೆಯಾಗುತ್ತಿದ್ದು, ಈ ಸಮಸ್ಯೆಯ ಬಗ್ಗೆ ತಿಳಿಸಿದರು ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ಸ್ಥಳಿಯರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯ ನಳದಲ್ಲಿ ಡ್ರೈನೆಜ್‌ ಬರುತ್ತಿದ್ದು,ಕಳೆದ ಹದಿನೈದು ದಿನಗಳಿಂದ ಅದೇ ನೀರನ್ನು ಸೇವನೆ‌ ಮಾಡುತ್ತಿದ್ದೆವೆ.ಆದರೆ ಒಂದು ವಾರದಿಂದ ಸಂಪೂರ್ಣ ವಾಸನೆ, ಕೊಳಚೆಯಾಗಿ ನಲ್ಲಿಯಲ್ಲಿ ನೀರು ಬರುತ್ತಿದೆ,ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದರೆ. ಗಮನ‌ ಹರಿಸುತ್ತಿಲ್ಲ ಒಬ್ಬರ ಮೇಲೆ ಒಬ್ಬರೂ ಅಧಿಕಾರಿಗಳ ಹೆಸರನ್ನು ಹೇಳುತ್ತಿದ್ದಾರೆ ಎಂದು...

ಹಲವು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಕುಂಟಿತ: ಬೆನಕೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸುವ ಮೂಲಕ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು. ಸೋಮವಾರದಂದು ರುಕ್ಮಿಣಿ ನಗರ ಸೇರಿದಂತೆ ಸುತ್ತಮುತ್ತಲಿನ ಭೇಟಿ ನೀಡಿ ರಸ್ತೆ, ಗಟಾರು, ಒಳಚರಂಡಿಗಳ ದುಸ್ತಿತಿಗಳ ಬಗ್ಗೆ ಸ್ಥಳಿಯರೊಂದಿಗೆ ಚರ್ಚಿಸಿದರು. ಇದೇ ವೇಳೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಇಲಾಖೆ ಹಾಗೂ ಮಾಜಿ ಶಾಸಕರ ನಿರ್ಲಕ್ಷ್ಯದಿಂದ ನಗರದ ಅನೇಕ ಪ್ರದೇಶಗಳಲ್ಲಿ ಅಭಿವೃಧ್ಧಿಯು ಕುಂಟಿತಗೊಂಡಿದ್ದು, ಅವುಗಳ ಪರಿಹಾರಕ್ಕಾಗಿ ಸಂಭಂದಿಸಿದ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುತ್ತೇನೆ ಹಾಗೂ ಆದಷ್ಟು ಬೇಗನೆ ಸಮಸ್ಯೆ ಪರಿಹರಿಸಲಾಗುವುದು...
loading...