Archive | ಧಾರವಾಡ RSS feed for this section

29 ರಂದು ಪ್ರಧಾನಿ ಮನಮೋನಸಿಂಗ್ ಹುಬ್ಬಳ್ಳಿಗೆ

ಹುಬ್ಬಳ್ಳಿ,ಏ.20- ಮೇ 5 ರಂದು ನಡೆಯಲಿರುವ ರಾಜ್ಯ ವಿಧಾನ ಸಭಾ ಚುನಾವಣಾ ಹಿನ್ನೆಲ ೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಪ್ರಧಾನಿ ಡಾ.ಮನಮೋಹನಸಿಂಗ್ ಅವರು ದಿ.29ರಂದು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಈ ಕುರಿತು ಚುನಾವಣಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾಹಿತಿ ನೀಡಿದ ಎಐಸಿಸಿ ಕಾರ್ಯದರ್ಶಿ ಅಶೋಕ ತನ್ವರ್, ಈ ಬಾರಿಯ ಚುನಾವಣೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಇದ್ದು, ಪಕ್ಷದ ಅಭ್ಯರ್ಥಿಗಳ ಕೈಬಲ ಪಡಿಸುವ ನಿಟ್ಟಿನಲ್ಲಿ ಪ್ರಧಾನಿಯವರು ಪ್ರಚಾರ ಕಾರ್ಯ ಹಮ್ಮಿಕೊಂಡಿರುವುದಾಗಿ ತಿಳಿಸಿದರು

Leave a comment Continue Reading →

ಮಾರಕ ರೋಗ ಏಡ್ಸ್ನಿಂದ ಮುಕ್ತವಾದ ಸಮಾಜ ನಿರ್ಮಿಸುವುದೇ ನಮ್ಮಲ್ಲರ ಗುರಿ

ಹೂವಿನಹಡಗಲಿ. ಏ.19: ಯುವಜನತೆಯ ಜವಾಬ್ದಾರಿಯುತ ಕರ್ತವ್ಯದಿಂದ ಏಡ್ಸ್ನಂತಹ ಮಾರಕರೋಗಗಳನ್ನು ನಿರ್ಮೂಲನೆ ಮಾಡಬಹುದೆಂದು ನಿವೃತ್ತ ಆರೋಗ್ಯಾಧಿಕಾರಿಗಳಾದ ಡಾ. ಕೆ.ಮಲ್ಲಿಕಾರ್ಜುನಗೌಡ ಹೇಳಿದರು. ಪಟ್ಟಣದ ಹೊರವಲಯದಲ್ಲಿರುವ ರಾಜೀವನಗರ ಸ್ಲಮ್ ಪ್ರದೇಶದ, ಜಿ.ಬಿ.ಆರ್ ಪದವಿ ಕಾಲೇಜಿನ ರಾಷ್ಟ್ತ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇಷ ಸೇವಾ ಶಿಬಿರದಲ್ಲಿ ಅವರು ಮಾತನಾಡಿದರು. ಏಡ್ಸ್ನ ಹುಟ್ಟು ಬೆಳವಣಿಗೆಯ ಬಗ್ಗೆ ಸುಧೀರ್ಘವಾಗಿ ಮಾತನಾಡಿದ ಅವರು ಏಡ್ಸ್ ರೋಗಿಗಳನ್ನು ಪ್ರೀತಿ-ಪ್ರೇಮದಿಂದ ನೋಡಬೇಕು. ಅವರ ಜೊತೆ ಊಟಮಾಡಿದರೆ, ಅಥವಾ ಮಾತನಾಡಿಸಿದರೆ, ಜೊತೆಯಲ್ಲಿ ವಾಸಮಾಡಿದರೂ, ಏಡ್ಸ್ ಹರಡುವುದಿಲ್ಲ. ಅವರನ್ನೂ ಮನುಷ್ಯರನ್ನಾಗಿ ಕಾಣಬೇಕೆಂದು ಕರೆನೀಡಿದರು. ಡಾ. [...]

Leave a comment Continue Reading →

ಬಿಜವಾಡರನ್ನು ಬಹುಮತದಿಂದ ಆಯ್ಕೆ ಮಾಡಲು ಬಿಎಸ್ವೈ ಕರೆ

ಹುಬ್ಬಳ್ಳಿ,ಏ.19- ಹುಬ್ಬಳ್ಳಿ-ಧಾರವಾಡ ಮಹಾನಗರಗಳನ್ನು ರಾಜ್ಯದಲ್ಲಿಯೇ ಮಾದರಿ ನಗರಗಳನ್ನಾಗಿ ಅಭಿವೃದ್ದಿಪಡಿಸಲು ತಾವು ಉತ್ಸುಕರಾಗಿದ್ದು, ಬರುವ ಮೇ 5 ರ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷದ ಪೂರ್ವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಬಿಜವಾಡ ಶಂಕರಪ್ಪ ಕಾಶಪ್ಪ ಅವರನ್ನು ಬಹುಮತದ ಮೂಲಕ ಆರಿಸಿ ತರಬೇಕೆಂದು ಮಾಜಿಮುಖ್ಯಮಂತ್ರಿ ಹಾಗೂ ಕೆಜೆಪಿ ಸಂಸ್ಥಾಪಕರಾದ ಬಿ.ಎಸ್.ಯಡಿಯೂರಪ್ಪನವರು ಕರೆ ನೀಡಿದರು. ಶುಕ್ರವಾರ ರಾತ್ರಿ ನಗರದ ದೇಸಾಯಿ ಓಣಿ ಬಸವೇಶ್ವರ ಸರ್ಕಲ್ನಲ್ಲಿ ಜರುಗಿದ ಬಹಿರಂಗ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ಈ ಚುನಾವಣೆಯಲ್ಲಿ ತಮ್ಮ ಪಕ್ಷವು ಅತ್ಯಂತ ಬಹುಮತದಿಂದ ಗೆಲುವು [...]

Leave a comment Continue Reading →

ಮುಂದಿನ ಚುನಾವಣೆಯಲ್ಲಿ ಎಚ್ಡಿ ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ

  ಹಳಿಯಾಳ,ಮ.21: ಪ್ರಸಕ್ತ ಸಾಲಿನಲ್ಲಿ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅತಿ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಧಿಕಾರಕ್ಕೆ ಬರಲಿದ್ದು, ಇಂತಹ ಯೋಜನೆಗಳನ್ನು ಮತ್ತು ರೈತ ಪರ ಯೋಜನೆಗಳನ್ನು ಸಹ ಜಾರಿಗೆ ತರಲು ಬದ್ಧವಿದೆ. ಆದರೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾಳಿನದಿ ನೀರಿನ ಯೋಜನೆ ಜಾರಿಯಾಗುವುದಿಲ್ಲ ಎಂದು ಸಭೆ-ಸಮಾರಂಭಗಳಲ್ಲಿ ಹೇಳುತ್ತಾ ತಪ್ಪು ಕಲ್ಪನೆ ನೀಡುತ್ತಿದ್ದಾರೆ. ನಾನು ಶಾಸಕನಾಗಿ ಮಾಡಿದ ಅನೇಕ ಕಾರ್ಯಗಳನ್ನು ನಾನೇ ಮಾಡಿದ್ದೇನೆ ಎಂದು ಬೆನ್ನುತಟ್ಟಿಕೊಳ್ಳುತ್ತಿರುವುದು ಖೇದದ ವಿಷಯ ಎಂದು ಶಾಸಕ ಸುನೀಲ ಹೆಗಡೆ ಹೇಳಿದರು. [...]

Leave a comment Continue Reading →

ಕಾಳಿನದಿ ನೀರು ಶೀಘ್ರದಲ್ಲಿ ನೀರಾವರಿಗೆ ಸರ್ಕಾರದ ಅಸ್ತು: ಶಾಸಕ ಸುನೀಲ

ಹಳಿಯಾಳ,ಮಾ.21: ಹಲವು ವರ್ಷಗಳ ಕನಸು ಸರ್ಕಾರ ನನಸು ಮಾಡಲು ಹೊರಟಿದ್ದು, ಹಳಿಯಾಳ ತಾಲೂಕಿನ ರೈತರಿಗೆ ನೀರಾವರಿಗಾಗಿ ಹಣ ಮೀಸಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಈ ಯೋಜನೆ ಜಾರಿಗೊಳಿಸಲು 200 ಕೋಟಿ ರೂ. ಹಣ ತೆಗೆದಿರಿಸಿದೆ ಎಂದು ಶಾಸಕ ಸುನೀಲ ಹೆಗಡೆ ತಿಳಿಸಿದರು. ಅವರು ಇಂದು ತಮ್ಮ ಮನೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅಧಿವೇಶನದ ಬಜೆಟ್ನಲ್ಲಿ ನೀರಾವರಿ ನಿಗಮಕ್ಕೆ ಹಣ ನೀಡಿದ್ದು, ಆ ಹಣದಲ್ಲಿ ಕಾಳಿನದಿಯಿಂದ ತಾಲೂಕಿನ ರೈತರಿಗೆ ನೀರು ಹಂಚಿಕೆಗೆ ಧಾರವಾಡ ನಿಗಮಕ್ಕೆ 200 ಕೋಟಿ ಬಿಡುಗಡೆ [...]

Leave a comment Continue Reading →

ಅನ್ನ ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕು ನಮಗಿಲ್ಲ: ಎಸ್. ಕೆ. ದಾನಕೈ

ಹುಬ್ಬಳ್ಳಿ: ಇಂದು ಅನ್ನದ ಪ್ರಸಾದ ಮಹಿಮೆ ಬಹು ದೊಡ್ಡದು. ಮದುವೆ, ಜವಳ, ಹುಟ್ಟು ಹಬ್ಬ, ದೀಡುನಮಸ್ಕಾರ, ಜಾತ್ರೆಗಳಲ್ಲಿ ಮಠಮಂದಿರಗಳಲ್ಲಿ ಊರಿನ ಕಾರ್ಯಕ್ರಮಗಳಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಹಬ್ಬ ಹರಿದಿನಗಳಲ್ಲಿ, ಅನೇಕ ಉತ್ಸವಗಳಲ್ಲಿ, ರಾಜಕೀಯ ಕಾರ್ಯಕ್ರಮಗಳಲ್ಲಿ, ಊಟ ಮಾಡುವಾಗ ಅನೇಕ ಪದಾರ್ಥಗಳನ್ನು ಕೆಡಿಸಿ ಹಾಳು ಮಾಡುತ್ತೇವೆ. ಅನ್ನ ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕು ನಮಗಿಲ್ಲ ತಿನ್ನುವ ಪ್ರತಿ ಕಾಳಿನ ಮೇಲೆ ತಿನ್ನುವವನ ಹೆಸರು ಬರೆದಿದೆ. ಇಂದು ಮನುಷ್ಯನ ಹೊಟ್ಟೆ ಸೇರುವ ಅನ್ನ ಕಸದ ತೊಟ್ಟೆ ಸೇರುತ್ತಿರುವುದು ವಿಷಾದದ ಸಂಗತಿಯಾಗಿದೆ. [...]

Leave a comment Continue Reading →

ಡಿಸಿಪಿ ಪ್ರತಾಪನ್ಷಿ ಸ್ಥಾನಕ್ಕೆ ಹಲವರ ಪೈಪೋಟಿ

ಹುಬ್ಬಳ್ಳಿ: ಲಿಖಡಕ್ ಖಾಕಿಳಿ ಅಧಿಕಾರಿಯೆಂದೇ ಹೆಸರು ಪಡೆದಿರುವ ಡಿಸಿಪಿ ಎಸ್.ಎಂ.ಪ್ರತಾಪನ್ ತಿಂಗಳಾಂತ್ಯಕ್ಕೆ ಸೇವೆಯಿಂದ ನಿವೃತ್ತರಾಗಲಿದ್ದು ಅವರ ಸ್ಥಾನಕ್ಕೆ ಹಲವರ ಹೆಸರು ಕೇಳಿ ಬರಲಾರಂಭಿಸಿವೆ. ಬೆಂಗಳೂರಿನಲ್ಲಿ ಡಿಸಿಪಿಯಾಗಿರುವ ಬಸವರಾಜ ಮಾಲಗತ್ತಿ, ಹೆಸ್ಕಾಂನಲ್ಲಿರುವ ಸಂಗೀತಾ, ಅಲ್ಲದೆ ಬಡ್ತಿ ನೀರಿಕ್ಷೆಯಲ್ಲಿರುವ ಈ ಹಿಂದೆ ದಕ್ಷಿಣ ಎಸಿಪಿಯಾಗಿ ಕಾರ್ಯನಿರ್ವಹಿಸಲಿರುವ ಎಸ್.ವಿ.ಗುಳೇದ ಹೆಸರು ಕೇಳಿ ಬರಲಾರಂಭಿಸಿದೆ. ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿಯಾಗಿರುವ ಶ್ರೀನಾಥ ಜೋಶಿಯವರೂ ಸಹ ಲಾ ಅ್ಯಂಡ್ ಆರ್ಡರ್ಗೆ ಬರಲು ಉತ್ಸುಕರಾಗಿದ್ದಾರೆಂದೂ ಹೇಳಲಾಗುತ್ತಿದೆ.    ಹುಬ್ಬಳ್ಳಿಯ ಶಾಂತಿ ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ [...]

Leave a comment Continue Reading →

ರೈಲ್ವೆ ನೇಮಕದಲ್ಲಿ ಅನ್ಯಾಯ: ಪ್ರತಿಭಟನೆ

ಹುಬ್ಬಳ್ಳಿ: ರೈಲ್ವೆ ಡಿ ಗ್ರೂಪ್ ಹುದ್ದೆ ನೇಮಕಾತಿಯಲ್ಲಿ ಕಾನೂನು ಉಲ್ಲಂಘಿಸಿಲಾಗಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ನೂರಾರು ಅಭ್ಯರ್ಥಿಗಳು ನಗರದಲ್ಲಿ ನೈರುತ್ಯ ರೈಲ್ವೆ ಪ್ರದಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. 2010ರಲ್ಲಿ 3007 ಡಿ ಗ್ರುಪ್ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಅರ್ಜಿ ಸಲ್ಲಿಸಿ, ದೈಹಿಕ, ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರನ್ನು ನೌಕರಿಗೆ ಪರಿಗಣಿಸಲಾಗಿಲ್ಲ. ಸುಮಾರು 200ಕ್ಕೂ ಅಧಿಕ ಅರ್ಹ ಅಭ್ಯರ್ಥಿಗಳಿಗೆ ನೌಕರಿ ನೀಡದೇ ವಂಚಿಸಲಾಗಿದೆ ಎಂದು ಆರೋಪಿಸಿದರು. ರೈಲ್ವೆ ಇಲಾಖೆಯ ಅಧಿಕಾರಿಗಳು ತಮ್ಮ ಸಂಬಂಧಿಕರಿಗೆ ಅನುಕೂಲ [...]

Leave a comment Continue Reading →

ಅನಧಿಕೃತ ಶೆಡ್ ತೆರವು: ವಾಗ್ವಾದ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಜಾಗ ಒತ್ತುವರಿ ವಿರೋಧಿಸಿದ ಗ್ರೀನ್ ಗಾರ್ಡನ್, ರಾಜಧಾನಿ ಕಾಲೊನಿ, ಶಿವಪುರ ಕಾಲೊನಿ, ವಿಕಾಸನಗರದ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರಲ್ಲದೇ ಗ್ರೀನ್ ಗಾರ್ಡನ್ ಉದ್ಯಾನದ ಬಳಿ ಅನಧಿಕೃತವಾಗಿ ನಿರ್ಮಿಸಿದ ಶೆಡ್ಗಳನ್ನು ತೆರವುಗೊಳಿಸಿದರು. ಈ ಸಂದರ್ಭ ಪ್ರತಿಭಟನಾಕಾರರು ಹಾಗೂ ಶೆಡ್ ಮಾಲೀಕರ ಮಧ್ಯೆ ವಾಗ್ವಾದ ನಡೆದು ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಗರದ ಗ್ರೀನ್ ಗಾರ್ಡನ್ ಬಳಿಯ ಕರಿಯಮ್ಮದೇವಿ ದೇವಸ್ಥಾನದಲ್ಲಿ ಸಭರ ನಡೆಸಿದ ಸ್ಥಳೀಯ ನಿವಾಸಿಗಳು ಅನಧಿಕೃತ ಶೆಡ್ಗಳನ್ನು ತೆರವುಗೊಳಿಸುವ ನಿರ್ಧಾರ ತೆಗೆದುಕೊಂಡರು. ನೂರಾರು [...]

Leave a comment Continue Reading →

ಚುನಾವಣೆಯಲ್ಲಿ ಮತಯಂತ್ರ ದುರ್ಬಳಕೆ : ಆರೋಪ

ಹುಬ್ಬಳ್ಳಿ: ಇತ್ತೀಚೆಗೆ ನಡೆದ ಹು.ಧಾ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮತದಾನದ ವೇಳೆ ವಾರ್ಡ ನಂ.27ರ ಮತಯಂತ್ರವನ್ನು ಅಧಿಕಾರಿಗಳಿಂದ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಈ ವಾರ್ಡನ ಪರಾಜಿತ ಅಭ್ಯರ್ಥಿಗಳಾದ ಕಾಂಗ್ರೆಸ್ ಪಕ್ಷದ ಶ್ರೀಮತಿ ಸುರಯ್ಯಾ ನದಾಫ ಹಾಗೂ ಬಿಎಸ್ಆರ್ ಕಾಂಗ್ರೆಸ್ನ ಮಂಜುಳಾ ಕಳ್ಳಿಮನಿ ಆರೋಪ ಮಾಡಿದರು. ಈ ಕುರಿತು ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಚುನಾವಣೆ ವೇಳೆ ನಡೆದ ಅಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಜಗದೀಶ ಶೆಟ್ಟರವರ ಸ್ವಕ್ಷೇತ್ರಕ್ಕೆ [...]

Leave a comment Continue Reading →