ಬುಡಕಟ್ಟು ಆದಿವಾಸಿ ಸಮೂದಾಯದ ರಾಜ್ಯ ಮಟ್ಟದ ಕಾರ್ಯಾಗಾರ

0
11
loading...

ಜೋಯಿಡಾ : ಶತಶತಮಾನಗಳಿಂದ ಅರಣ್ಯದಲ್ಲಿ ಅನೋನ್ಯವಾಗಿ ಬಾಳಿ ಬದುಕಿದ ನಮ್ಮ ಬುಡಕಟ್ಟುಗಳಿಗೆ ಇತ್ತಿಚಿನ ದಿನದಲ್ಲಿ ಅಲ್ಲಿನ ಪ್ರಾಣಿಗಳಿಗೆ ನೀಡುವ ಗೌರವ ಕೂಡಾ ಇಲ್ಲ. ನಮ್ಮ ನೆಲದಲ್ಲಿ ಬದುಕಲು ಅನ್ಯರ ಅನುಮತಿ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿ ಇದರ ವಿರುದ್ದ ಜನಾಂದೋಲನ ಆಗಬೇಕಿದೆ ಎಂದು ಸಾಹಿತಿ ಪತ್ರಕರ್ತ ಬಿ.ಎನ್.ವಾಸರೆ ಅಬಿಪ್ರಾಯ ಪಟ್ಟರು.
ಅವರು ಆದಿವಾಸಿ ಬುಡಕಟ್ಟುಗಳ ಅಭಿವೃದ್ದಿ ಕುರಿತ ಮೂರು ದಿನದ ರಾಜ್ಯ ಮಟ್ಟದ ಜಾಗೃತಿ ಶಿಬಿರದ ಸಮಾರೋಪ ಸಮಾರಂಬದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಬುಡಕಟ್ಟುಗಳ ಪರಿಶಿಷ್ಟ ಪಂಗಡಕ್ಕೆ ಎಂದೋ ಸೇರಬೇಕಾಗಿತ್ತು. ಆದರೆ ಇವರ ಹೋರಟಕ್ಕೆ ರಾಜಕೀಯ ಇಚ್ಚಾ ಶಕ್ತಿ ಕೊರೆತೆಯ ಇದೆ ಎನಿಸುತ್ತಿದೆ. ಹಣದಾಸೆಗೆ ಬುಡಕಟ್ಟುಗಳನ್ನು ಬಳಸಿಕೊಳ್ಳುವ, ರಾಜಕಿಯ ದಾಳವಾಗಿ ಬಳಕೆಯಾಗಿ ಹರಿದು ಹಂಚಿಹೋಗುತ್ತಿರುವ ಬುಡಕಟ್ಟು ಸಂಘಟನೆಯನ್ನು ಒಗ್ಗೂಡಿಸಿ ಹಕ್ಕಿಗಾಗಿ ಹೋರಾಟಮಾಡುವ ಅಗತ್ಯ ಇದೆ ಎಂದರು.
ಬುಡಕಟ್ಟುಗಳಿಗೆ ನೈಸರ್ಗಿಕ ಉತ್ಪನ್ನ ಬಳಕೆಗೆ ವಿರೋದಿಸುತ್ತಿರುವ ಅರಣ್ಯ ಇಲಾಖೆ, ಪ್ರವಾಸೋದ್ಯಮ ಚಟುವಟಿಕೆ ಮೂಲಕ ವ್ಯಾಪಾರೀಕರಣ ಆರಂಬಿಸಿದೆ ಎಂದು ಆರೋಪಿಸಿದರು. ಇದರಿಂದ ಸಮೂದಾಯ ಆದಾರಿತ ಪ್ರವಾಸೋದ್ಯಮಕ್ಕೆ ಅವಕಾಶ ಇಲ್ಲವಾಗಿದ್ದು, ಇಲಾಖೆಯ ಈ ಕ್ರಮ ವಿರೋದಿಸಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೈತಪ್ರಾಂತ ಸಂಘದ ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ, ಶಿಬಿರದಲ್ಲಿ ಬುಡಕಟ್ಟು ಸಮಸ್ಯೆ, ದೈನಂದಿನ ಸ್ಥಿತಿಗತಿ, ಪರಿಹಾರ ಕ್ರಮ ಕುರಿತು ಹೆಚ್ಚಿನ ಅಧ್ಯಯನ ಮಾಡಲು ಸಹಕಾರಿಯಾಯಿತು. ಇಲ್ಲಿನ ವಿಷಯ ಅನುಸರಿಸಿ ಮುಂದಿನ ಯೋಜನೆ ರೂಪಿಸಿಕೊಳ್ಳಲು ನಾವೆಲ್ಲರೂ ಸಿದ್ದರಾಗೋಣ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ದಾಂಡೇಲಿ ನಗರ ಸಭಾ ಸದಸ್ಯ ಡಿ.ಶ್ಯಾಮಸನ್, ಕಾಲೇಜು ಪ್ರಚಾರ್ಯ ಮಂಜೂನಾಥ ಶೆಟ್ಟಿ,ಉಪನ್ಯಾಸಕ ಪಿ.ಟಿ.ತಗಡಿನಮನೆ ಮಾತನಾಡಿದರು,
ಇದೆ ಸಂದರ್ಭದಲ್ಲಿ ಆದಿವಾಸಿ ಹಕುಗಳ ಸಮಿತಿ ರಾಜ್ಯ ಸಹ ಸಂಚಾಲಕ ಎಸ,ವೈ.ಗುರುಶಾಂತ, ರಾಜ್ಯದ ವಿವಿದೆಡೆಗಳಿಂದ ಬಂದ ಬುಡಕಟ್ಟು ಆದಿವಾಸಿ ಪ್ರತಿನಿದಿಗಳ ಕಾರ್ಯಾಗಾರದಲ್ಲಿ ಕೈಗೊಂಡ ನಿರ್ಣಯಗಳನ್ನು ಓದಿ ಹೇಳಿದರು.
ಸಮೂದಾಯ ಸಮಿತಿ ಸದಸ್ಯ ರಾಜೇಶ ಗಾವಡಾ ಸ್ವಾಗತಿಸಿದರೆ,ಆದಿವಾಸಿ ಹಕುಗಳ ಸಮನ್ವಯ ಸಮಿತಿ ತಾಲೂಕಾ ಸಂಚಾಲಕ ಪ್ರೇಮಾನಂದ ವೇಳಿಪ ವಂದನಾರ್ಪಣೆ ಮಾಡಿದರು. ವೇದಿಕೆಯಲ್ಲಿ ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವಕರ್, ರಾಜ್ಯ ಸಂಚಾಲಕ ಗಣೇಶ, ತಾಲೂಕಾ ಕುಣಬಿ ಅಧ್ಯಕ್ಷ ಪ್ರೇಮಾನಂದ ವೇಳಿಪ, ಪ್ರಮುಖರಾದ ಶಾಂತಾ ವೇಳಿಪ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here