loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ನಗರದ ಸೆಟ್ಲಮೆಂಟಿನ ಯಂಗ್ ಸ್ಟಾರ್ಸ ಸ್ಫೋಟ್ಸ ಮೈದಾನದಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಜಸನ್ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಪ್ರತಿ ತಂಡದಲ್ಲಿ ಐವರು ಆಟಗಾರರು ಆಡಲಿದ್ದಾರೆ. ಅಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಪಂದ್ಯಾವಳಿ ನಡೆಯಲಿದೆ. ಉಚಿತ ಪ್ರವೆಶವಿದ್ದು ಪಂದ್ಯಾವಳಿ ರಾಷ್ಟ್ರಮಟ್ಟದ ತಂಡಗಳಲ್ಲಿ ಆಡಿರುವ ಅನೇಕ ಕ್ರೀಡಾಪಟುಗಳು ಪಾಲ್ಗೊಳ್ಳುವರು. ಒಟ್ಟು 10ಕ್ಕೂ ಹೆಚ್ಚು ತಂಡಗಳು ಹೆಸರು ನೊಂದಾಯಿಸಿವೆ. ಆಸಕ್ತರು ಪಂದ್ಯಾವಳಿಯಲ್ಲಿ ಭಾಗವಹಿಸಲು ಫ್ರೇಂಡ್ಸ್ ಸರ್ಕಲಿನ ಜಸವಂತ ಜಾಧವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

loading...