loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ಹುಬ್ಬಳ್ಳಿ ನಗರದ ಹೊರ ವಲಯದಲ್ಲಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು , ಕೊಲೆ ಮಾಡಿದ ವ್ಯಕ್ತಿಯೂ ಬುಧವಾರವೇ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮ ಹತ್ಯೆಗೆ ಶರಣಾಗಿದ್ದಾರೆ. ನೂಲ್ವಿ ಗ್ರಾಮದ ಶಂಕರ ಗೌಡ ಧರ್ಮೆಗೌಡ (40) ಕೊಲೆಯಾಗಿದ್ದು ಹಳೆ ಹುಬ್ಬಳ್ಳಿಯ ನೇಕಾರ ನಗರ ನಿವಾಸಿ ಸುರೇಶ ಗದಗ(38) ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವಿಷಯದಲ್ಲಿ ಇಬ್ಬರಿಗೂ ವೈಮನಸ್ಸು ಇದ್ದ ಕಾರಣ ನೂಲ್ವಿ ಗ್ರಾಮದ ಬಸವರಾಜ ಸತ್ತೂರ ಎಂಬುವವರ ಜಮೀನಿನಲ್ಲಿ ಶಂಕರ ಗೌಡಾ ಎನ್ನುವವರನ್ನು ಕೊಲೆ ಮಾಡಿ ಸುರೇಶ ನಾಪತ್ತೆಯಾಗಿದ್ದರು. ನಂತರ ಜೈಲು ಸೇರುವ ಭಯದಿಂದ ರೈಲಿಗೆ ತಲೆ ಕೊಟ್ಟಿದ್ದಾರೆ. ಡಾ. ಮುಗಳಿ ಆಸ್ಪತ್ರೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡಿಕೊಂಡಿದ್ದ ಸುರೇಶ ಕೊಲೆ ಮಾಡಿದ ಬಳಿಕ ನೇರವಾಗಿ ನಗರದ ಕೇಂದ್ರ ರೈಲು ನಿಲ್ದಾಣಕ್ಕೆ ತೆರಳಿ ಏಫ್‍ಸಿಐ ಗೋದಾಮಿನ ಬಳಿ ಬಂದು ಚಲಿಸುತ್ತಿದ್ದ ಹುಬ್ಬಳ್ಳಿ ಬೆಂಗಳೂರು ರೈಲಿಗೆ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ರೇಲ್ವೇ ಪೋಲಿಸರು ತನಿಖೆ ಕೈಗೊಂಡಿದ್ದರು. ಅಷ್ಟರಲ್ಲಿಯೇ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ಬೆಳಕಿಗೆ ಬಂದಿದ್ದೂ ಅಲ್ಲದೇ ಬೆಂಡಿಗೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ನಮೂದಾಗಿದೆ,

loading...