loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ವಿಭಾಗದ ವಾರ್ಡ ನಂ.53 ನೇದ್ದರಲ್ಲಿ ಬರುವ ಕಮರಿಪೇಟ ಪೊಲೀಸ್ ಠಾಣೆ ಹತ್ತಿರು ಶನಿವಾರ ಸಂಜೆ ಬಿರುಗಾಳಿ ಸಮೇತ ಸುರಿದ ಬಾರಿ ಮಳೆಯಿಂದಾಗಿ ಸದರ ಪ್ರದೇಶದ ಸುತ್ತ ಮುತ್ತಲೂ ವಿದ್ಯುತ್ ಕಡಿತಗೊಂಡಿರುವದರಿಂದ ಅಲ್ಲದೇ ಸದರ ಪ್ರದೇಶದಲ್ಲಿ ನೀರಿನ ಸರಬರಾಜು ಸಮರ್ಪಕವಾಗಿ ಆಗದೇ ಇರುವದರಿಂದ ಆ ಪ್ರದೇಶದ 50-60 ನಾಗರೀಕರು ಇಂದು ದಿನಾಂಕ : 08-05-2017 ರಂದು ರಸ್ತೆ ಬಂದ ಮಾಡಿ ಪ್ರತಿಭಟನೆ ನಡೆಸಿದರು. ಈ ಕುರಿತು ಪಾಲಿಕೆಯ ಪೂಜ್ಯ ಮಹಾಪೌರರಾದ ಡಿ. ಕೆ. ಚವ್ಹಾಣ ರವರು ಸ್ಥಳಕ್ಕೆ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಅಧಿಕಾರಿಗಳಿಗೆ ಆದೇಶ ಮಾಡಿ ಆ ಪ್ರದೇಶ ನಾಗರೀಕರ ಸಮಸ್ಯೆಗಳನ್ನು ನಿವಾರಣೆ ಮಾಡಿದರು.

loading...