loading...

ಕನ್ನಡಮ್ಮ ಸುದ್ದಿ-ಮುಂಡರಗಿ: ತಾಲೂಕಾ ಸಾರ್ವಜನಿಕ ಹೋರಾಟ ವೇದಿಕೆ, ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆಯ ಜಂಟಿ ಕ್ರೀಯಾ ಸಮಿತಿ ಮತ್ತು ಸರ್ವ ವ್ಯಾಪಾರಸ್ಥರ ಸಂಘ ಮುಂಡರಗಿ ಆಶ್ರಯದಲ್ಲಿ ಇಂದು ದಿ:09 ರಂದು ಮಂಗಳವಾರ ಬೆಳಿಗ್ಗೆ 10:30 ಗಂಟೆಗೆ ಮುಂಡರಗಿ ಕನ್ನಿಕಾ-ಪರಮೇಶ್ವರಿ ದೇವಸ್ಥಾನದಿಂದ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ ದೆಹಲಿಗೆ ನಿಯೋಗ ತೆರಳಿತು.
ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆಯ ಜಂಟಿ ಕ್ರೀಯಾ ಸಮಿತಿ ಅಧ್ಯಕ್ಷ ಬಸವರಾಜ ನವಲಗುಂದ ಮಾತನಾಡಿ, ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷ ಗತಿಸಿ ಹೋದರು ಕೂಡಾ ಸಾರ್ವಕನಿರು ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳನ್ನು ಪಡೆಯಲು ದಿನನಿತ್ಯ ಬೀದಿಗಿಳಿದು ಪ್ರತಿಭಟನೆ ನಡೆಸಿದರು ಕೂಡಾ ಈ ದೇಶದ ಸರಕಾರಗಳು ಹೋರಾಟದ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಮಾಜಿ ರೈಲ್ವೆ ಮಂತ್ರಿಗಳಾದ ಜಾಫರ್ ಶರೀಫ, ಮಲ್ಲಿಕಾರ್ಜುನ ಖರ್ಗೆ, ಕೆ. ಮುನಿಯಪ್ಪ, ಬಸವರಾಜ ಪಾಟೀಲ ಯತ್ನಾಳ, ಸದಾನಂದಗೌಡ ಇವರೆಲ್ಲರು ಕರ್ನಾಟಕ ರಾಜ್ಯದ ಪ್ರತಿನಿಧಿಗಳಾಗಿ ಭಾರತ ಸರಕಾರದ ಕೇಂದ್ರ ರೈಲ್ವೆ ಇಲಾಖೆಯ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದರು ಕೂಡಾ ಉತ್ತರ ಕರ್ನಾಟಕ ಭಾಗದ ಸಾರ್ವಜನಿಕರ ಬಹುದಿನದ ಬೇಡಿಕಡಯಾದ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗವನ್ನು ರಚನೆ ಮಾಡಲು ಹಣ ಮಂಜೂರು ಪಡೆಯಲು ಆಗಲಿಲ.್ಲ ಈಗಾಗಲೇ, ಕರ್ನಾಟಕ ರಾಜ್ಯಕ್ಕೆ 16 ಹೊಸ ರೈಲ್ವೆ ಮಾರ್ಗಗಳು ಮಂಜೂರಾಗಿ ಸರ್ವೆ ಕಾಮಗಾರಿ ಮಾಡಿ ಹಣದ ಖರ್ಚಿನ ಯೋಜನಾ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದರು ಕೂಡಾ ಈ ಹಿಂದಿನ ಮುಂಗಡ ಪತ್ರದಲ್ಲಿ ಕೇಂದ್ರ ಸರಕಾರವು ಹಣ ಮಂಜೂರು ಮಾಡಿರುವುದಿಲ್ಲ. ಹಾಗಾಗಿ, ರೈಲ್ವೆ ಹೋರಾಟದ ನಿಯೋಗವು ದೆಹಲಿಗೆ ತೆರಳಿ ದಿನಾಂಕ:11/05/2017 ರಂದು ಜಂತರ್-ಮಂತರ್ ನಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ಗಮನ ಸೆಳೆದು 2018-19 ರ ಕೇಂದ್ರ ಸರಕಾರದ ಮುಂಗಡ ಪತ್ರದಲ್ಲಿ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗಕ್ಕೆ ಹಣ ಕಾಯ್ದಿರಿಸಬೇಕೆಂದು ಆಗ್ರಹಿಸಲು ನಿಯೋಗ ತೆರಳುತ್ತಿದ್ದು ಸಾರ್ವಜನಿಕರು ಈ ನಿಯೋಗಕ್ಕೆ ಬೆಂಬಲಿಸಬೇಕೆಂದು ಕರೆ ನೀಡಿದರು. ದೆಹಲಿ ಚಲೋ ರೈಲ್ವೆ ಹೋರಾಟಗಾರರ ನಿಯೋಗಕ್ಕೆ ಮುಂಡರಗಿ ಹಿರಿಯ ವರ್ತಕರಾದ ಹನುಮಂತಪ್ಪ ಆರ್. ಹೆಗ್ಡಾಳ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ನಿಯೋಗದಲ್ಲಿ ಎ.ಡಿ.ಕುಲಕರ್ಣಿ, ಎ.ಐ.ಮಾರನಬಸರಿ, ಪ್ರಕಾಶ ಕಾಲವಾಡ, ಶಂಕರಗೌಡ ಪಾಟೀಲ, ಬಸಪ್ಪ ವಡ್ಡರ ಭಾಗವಹಿಸಿದ್ದು ಬಿಳ್ಕೋಡಲು ಮುಂಡರಗಿ ವ್ಯಾಪರಸ್ಥರ ಸಂಘದ ಸದಸ್ಯರು, ಅನೇಕ ಸಾರ್ವಜನಿಕರು ಪಾಲ್ಗೊಂಡಿದ್ದರು.

loading...