loading...

ಕನ್ನಡಮ್ಮ ಸುದ್ದಿ-ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪದ ಅಡಿಯಲ್ಲಿ ಆಯೋಜಿಸಿದ್ದ ಕುಮಾರಿ ಸೃಷ್ಠಿ ಎಸ್. ಸುಗತೆ ಹಾಗೂ ಕುಮಾರಿ ಸುರಭಿ ಎಸ್. ಸುಗತೆ ಸಹೋದರಿಯರ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು. ದಾಸರಪದ, ವಚನ, ಭಾವಗೀತೆ ಹಾಗೂ ಭಕ್ತಿಗೀತೆಗಳು ಪ್ರೇಕ್ಷಕರನ್ನು ಸಂಗೀತದ ಕಡಲಿನಲ್ಲಿ ತೇಲಿಸಿದವು.
ಸೃಷ್ಠಿ ಹಾಗೂ ಸುರಭಿ ಕೇಂದ್ರೀಯ ವಿದ್ಯಾಲಯದಲ್ಲಿ ಒಂಬತ್ತನೆ ತರಗತಿಯಲ್ಲಿ ಓದುತ್ತಿದ್ದು ಕನ್ನಡವನ್ನು ಹೆಚ್ಚುಮಟ್ಟಿಗೆ ಓದಲು ಬರದೆ ಇರುವ ಇವರು ಇಂಗ್ಲೀಷ ಹಾಗೂ ಹಿಂದಿಯಲ್ಲಿ ವಚನ, ಭಾವಗೀತೆ, ಜಾನಪದ ಗೀತೆಗಳನ್ನು ಬರೆದುಕೊಂಡು ಸಂಗೀತ ಪ್ರಸ್ತುತಪಡಿಸಿದರು.
ಜಾನಪದ ಗಾಯಕ ಬಸವಲಿಂಗಯ್ಯ ಹಿರೇಮಠ, ಕ.ವಿ.ವ. ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ಶ್ರೀಶೈಲ ರಾಚಣ್ಣವರ, ಯಕ್ಕೇರಪ್ಪಾ ನಡುವಿನಮನಿ, ಸತೀಶ ತುರಮರಿ, ಲಿಂಗರಾಜ ಪಾಟೀಲ ಉಪಸ್ಥಿತರಿದ್ದರು. ಪ್ರಭು ಹಂಚಿನಾಳ ನಿರೂಪಿಸಿದರು.

loading...