loading...

ಕನ್ನಡಮ್ಮ ಸುದ್ದಿ-ಧಾರವಾಡ : ಐ.ಟಿ.ಐ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಾಗಿದೆ. ಪಾಲಕರು ಕೇವಲ ಪ್ರತಿಷ್ಠೆಗೆ ಮಕ್ಕಳಿಗೆ ಉಪಯೋಗವಿಲ್ಲದ ಶಿಕ್ಷಣ ನೀಡುವುದರ ಬದಲಿಗೆ ಅವರ ಪ್ರತಿಭೆಯನ್ನಾಧರಿಸಿ ಇಂತಹ ತಾಂತ್ರಿಕ ಕೋಸುಗಳಿಗೆ ಪ್ರವೇಶ ದೊರಕಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಹಾಗೂ ಧಾರವಾಡ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಸ್ಕಿಲ್ ಎಕ್ಸಪೋ 2017 ರ ಸಮಾರೋಪ ಸಮಾರಂಭದಲ್ಲಿ ವಸ್ತು ಪ್ರಧರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಸಿದರೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅದಕ್ಕೆ ಪೂರಕವಾಗಿ ಪಠ್ಯದ ಜೊತೆಗೆ ಇತರೆ ತರಬೇತಿ, ಸ್ಪರ್ಧೆಗಳಲ್ಲಿ ಅವರನ್ನು ತೊಡಗಿಸಿದರೆ ಐ.ಟಿ.ಐ ವಿದ್ಯಾರ್ಥಿಗಳು ಇತರರಿಗಿಂತ ಚೆನ್ನಾಗಿ ಸ್ವಾವಲಂಭಿ ಜೀವನ ನಡೆಸಬಲ್ಲರು. ಈ ರೀತಿ ಐ.ಟಿ.ಐ ಕಾಲೇಜುಗಳ ತಾಂತ್ರಿಕ ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಜೆ.ಎಸ್.ಎಸ್ ನ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಅಧ್ಯಕ್ಷತೆವಹಿಸಿ ಮಾತನಾಡಿ, ಕೇವಲ ಪಠ್ಯದ ಅಧ್ಯಯನದಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾದ್ಯವಿಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಅವರು ಪಾಲ್ಗೊಂಡಾಗ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸಲು ಸಾಧ್ಯ. ಐ.ಟಿ.ಐ ವಿದ್ಯಾರ್ಥಿಗಳಿಗೆ ತರಬೇತಿ ವಸ್ತು ಪ್ರದರ್ಶನ, ಉದ್ಯೋಗ ಮೇಳವನ್ನು ಆಯೋಜಿಸಿ ಅವರನ್ನು ಉತ್ತೇಜಿಸುವ ಕೆಲಸವಾಗಬೇಕು ಎಂದರು.
ಸರಕಾರಿ ಐ.ಟಿ.ಐ ಕಾಲೇಜಿನ ಪ್ರಾಚಾರ್ಯ, ಮಹಾವೀರ ಉಪಾದ್ಯೆ, ಉದ್ಯೋಗ ಮತ್ತು ತರಬೇತಿ ಇಲಾಖೆ ಬೆಳಗಾವಿ ವಿಭಾಗ ಹುಬ್ಬಳ್ಳಿಯ ಜಂಟೀ ನಿರ್ದೇಶಕರಾದ ಪಿ.ರಮೇಶ್ಯರವರು, ಸಹಾಯಕ ನಿರ್ದೇಶಕ ಈಶ್ವರಪ್ಪ ದ್ಯಾಮನಗೌಡರ, ಬಸವಪ್ರಭು ಹಿರೇಮಠ, ಆರ್.ಪಿ ಶಿಗ್ಗಾಂವಕರ್ ಉಪಸ್ಥಿತರಿದ್ದರು. ಜಿನದತ್ತ ಹಡಗಲಿ ನಿರೂಪಿಸಿದರು, ಶ್ರೀಮತಿ. ವಾಣಿ ಪುರೋಹಿತ ವಂದಿಸಿದರು.

loading...