ಬಿಎಸ್‍ವೈಗೆ ಸಿದ್ದು ಸವಾಲ್

0
24
loading...

ಬೆಂಗಳೂರು: ಹೋಟೆಲ್‍ನಿಂದ ತಿಂಡಿ ಕಟ್ಟಿಸಿಕೊಂಡು ಬಂದು ದಲಿತರ ಮನೆಯಲ್ಲಿ ತಿನ್ನುವ ನಾಟಕ ಮಾಡುವುದನ್ನು ಬಿಟ್ಟು ದಲಿತರ ಮನೆಗೆ ಪರಸ್ಪರ ಹೆಣ್ಣು ಕೊಡುವ ಮೂಲಕ ಸಂಬಂಧ ಬೆಳೆಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ನಗರದ ಕೊತ್ತನೂರಿನಲ್ಲಿ 65 ಎಂಎಲ್‍ಡಿ ಸಾಮಥ್ರ್ಯದ ನೀರು ಸಂಸ್ಕರಣಾ ಘಟಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಆ ಪಕ್ಷದ ನಾಯಕರಿಗೆ ಮನವರಿಕೆಯಾಗಿದೆ. ಅದಕ್ಕಾಗಿ ಮೌನವಹಿಸಿದ್ದಾರೆ.
ಇದಕ್ಕೂ ಮೊದಲು ಮಿಷನ್ 150 ಎಂದು ಯಡಿಯೂರಪ್ಪ ಹೇಳಿಕೊಂಡು ಬರುತ್ತಿದ್ದರು. ಈಗ ಸತ್ಯ ಅರಿವಾಗಿದೆ. ಅದಕ್ಕಾಗಿ ಮಾತೇ ಆಡುತ್ತಿಲ್ಲ ಎಂದು ಲೇವಡಿ ಮಾಡಿದರು.
ಹೋಟೆಲ್‍ನಲ್ಲಿ ತಿಂಡಿ ಕಟ್ಟಿಸಿಕೊಂಡು ಬಂದು ದಲಿತರ ಮನೆಯಲ್ಲಿ ತಿನ್ನುವ ನಾಟಕವಾಡುತ್ತಾರೆ. ಇದು ಜನರಿಗೆ ಅರ್ಥವಾಗುತ್ತಿದೆ. ಬಿಜೆಪಿಯವರು ಪ್ರಾಮಾಣಿಕ ಬದ್ಧತೆ ಇದ್ದರೆ ಅಂತಹ ಕೆಲಸ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

loading...