ಟ್ರಂಪ್ ವಿರುದ್ಧ ಪ್ರಕರಣ ದಾಖಲು

0
20
loading...

ವಾಷಿಂಗ್‍ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯಿಂದ ಬ್ಲಾಕ್ ಆದ ಟ್ವಿಟರ್ ಬಳಕೆದಾರರು ಟ್ರಂಪ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದು, ಅವರ ಟ್ವಿಟರ್ ಖಾತೆ ಸಾರ್ವಜನಿಕ ವೇದಿಕೆಗೆ ಸಮನಾಗಿರುತ್ತದೆ. ಆದ್ದರಿಂದ ಸಾರ್ವಜನಿಕರನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಪ್ರಕರಣ ದಾಖಲಿಸಿರುವವರು ವಾದಿಸಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾಲಯದ ನೈಟ್ ಫಸ್ಟ್ ಅಮೆಂಡ್ಮೆಂಟ್ ಇನ್ಸ್ಟಿಟ್ಯೂಟ್‍ನ ಪ್ರತಿನಿಧಿಗಳಲ್ಲಿ ಕೆಲವರನ್ನು ಡೊನಾಲ್ಡ್ ಟ್ರಂಪ್ ಟ್ವಿಟರ್ ನಲ್ಲಿ ನಿಷೇಧಿಸಿದ್ದರು.
ಅಮೆರಿಕ ಅಧಿಕಾರಿಗಳು, ಅಧ್ಯಕ್ಷರೊಂದಿಗೆ ನೇರವಾಗಿ ಮಾತನಾಡಲು ಟ್ವಿಟರ್ ಉತ್ತಮ ವೇದಿಕೆಯಾಗಿದೆ. ಟ್ವಿಟರ್ ಸಾರ್ವಜನಿ ವೇದಿಕೆಯಾಗಿದೆ, ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿದ್ದು, ಸರ್ಕಾರದ ಪ್ರಮುಖ ಘೋಷಣೆಗಳನ್ನು ಅಲ್ಲಿ ಟ್ವೀಟ್ ಮಾಡಿರುತ್ತಾರೆ, ಅವರ ಟ್ವೀಟರ್ ಖಾತೆಗೆ ಪ್ರತಿಯೊಬ್ಬರಿಗೂ ಪ್ರವೇಶವಿರಬೇಕು ಎಂದು ಕೇಸ್ ದಾಖಲಿಸಿರುವವರು ವಾದಿಸಿದ್ದಾರೆ.

loading...