ಉತ್ತಮ ನಾಗರಿಕರನ್ನಾಗಿಸುವುದೆ ಎಬಿವಿಪಿಯ ಪರಮೊಚ್ಚ ಗುರಿ

0
17
loading...

ಬೈಲಹೊಂಗಲ: ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕೆಯೊಂದಿಗೆ ರಾಷ್ಟ್ರಪ್ರೇಮ, ಭಾರತೀಯ ಸಂಸ್ಕøತಿಯನ್ನು ಬೆಳಿಸಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿಸುವದೆ ಎಬಿವಿಪಿಯ ಪರಮೊಚ್ಚ ಗುರಿ ಎಂದು ಎಬಿವಿಪಿ ಸಂಘಟನೆಯ ಹಿರಿಯ ರಾಜ್ಯ ಕಾರ್ಯಕಾರಣಿ ಸದಸ್ಯ ಫಕೀರಗೌಡ ಎಸ್.ಸಿದ್ದನಗೌಡರ ಹೇಳಿದರು.
ಪಟ್ಟನದ ಕೆಎಲ್‍ಈ ಸಂಸ್ಥೆಯ ಡಿಪ್ಲೋಮಾ ಕಾಲೇಜಿನಲ್ಲಿ ಆಯೋಜಿಸಿದ್ದ ಎಬಿವಿಪಿ 68ನೇ ವರ್ಷದ ಸಂಸ್ಥಾಪನಾ ದಿನಾಚಾರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ದೇಶದಲ್ಲಿ ಅತ್ಯಂತ ದೊಡ್ಡದಾದ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 9ನೇ ಜುಲೈ 1949 ರಲ್ಲಿ ಪ್ರಾರಂಭಗೊಂಡು 3.7ಮಿಲಿಯನ್ ವಿದ್ಯಾರ್ಥಿಗಳ ಸದಸ್ಯತ್ವ ಹೊಂದಿದೆ. ಬ್ರಿಟಿಷ್ ಮಾದರಿಯ ಶಿಕ್ಷಣದಿಂದ ಭಾರತೀಯ ಸನಾತನ ಸಂಸ್ಕøತಿ ಅಳಿವಿನಂಚಿಗೆ ಬರುತ್ತಿದ್ದು ತಂದೆ ತಾಯಿ, ಬಂಧು ಮಿತ್ರರ ಬಗ್ಗೆ ಇವತ್ತಿನ ವಿದ್ಯಾರ್ಥಿಗಳಲ್ಲಿ ವಿಶ್ವಾಸರ್ಹತೆ ಕಡಿಮೆಯಾಗಿ ಸಾಮರಸ್ಯ ಕಳೆದುಕೊಳ್ಳುತ್ತಿದಾರೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಸದೊಂದಿಗೆ ರಾಷ್ಟ್ರೀಯತೆಯ ಗುಣಗಳನ್ನು ಬೆಳಿಸಿ ಜಾತಿ ಮತಗಳಾಚೆ ರಾಷ್ಟ್ರನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನು ಸನ್ನದ್ದರನ್ನಾಗಿಸಿ ದೇಶಕ್ಕೆ ಮಾರಕವಾಗದೆ ಸ್ಮಾರಕವನ್ನಗಿಸುವ ತರಬೇತಿ ಎಬಿವಿಪಿ ನೀಡುತ್ತಿದೆ ಎಂದರು.
ಕೆಎಲ್‍ಈ ಸಂಸ್ಥೆಯ ನಿಕಟ ಪೂರ್ವ ಉಪಾಧ್ಯಕ್ಷರಾದ ಬಿ.ಎಸ್.ತಟವಾಟಿ ಕಾರ್ಯಕ್ರಮದ ಉದ್ಘಾಟನೆಗೊಳಿಸಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಶ್ರಮಪಟ್ಟರೆ ಮುಂದಿನ ಜೀವನ ಉಜ್ವಲವಾಗಲಿದೆ ಎಂದರು. ಕೆಎಲ್‍ಈ ಸಂಸ್ಥೆಯ ಡಿಪ್ಲೋಮಾ ಕಾಲೇಜಿನ ಪ್ರಾಚಾರ್ಯ ಎನ್.ಎಸ್.ಹೊರಡಿ ಅಧ್ಯಕ್ಷತೆ ವಹಿಸಿದ್ದರು. ಡಾ.ಸಿ.ಬಿ.ಗಣಾಚಾರಿ ಎಬಿವಿಪಿ ನಗರ ಉಪಾಧ್ಯಕ್ಷ ಎಚ್.ಆಯ್.ಸಂಕನ್ನವರ ಮಾತನಾಡಿದರು. ನಗರ ಅಧ್ಯಕ್ಷ ಪ್ರಾಚಾರ್ಯ ಸಂತೋಷ ಕಾರಿಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಮುಖಂಡ ಸಿದ್ದಾರೋಢ ಹೊಂಡಪ್ಪನವರ ವಂದಿಸಿದರು. ಬಸವರಾಜ ಕಟಕೋಳ ಕಾರ್ಯಕ್ರಮ ನಿರೂಪಿಸಿದರು.

loading...