ಮುಂಗಾರು ಹಂಗಾಮಿಗೆ ಬರದ ಕಾರ್ಮೋಡದ ಛಾಯೆ, ಆತಂಕದಲ್ಲಿ ರೈತ ಸಮುದಾಯ

0
22
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಜಿಲ್ಲೆಯಲ್ಲಿ ಜೂನ್ ಮೊದಲವಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು, ಮುಂಗಾರು ಬಿತ್ತನೆಗೆ ರೈತ ಸಮುದಾಯ ಎಲ್ಲ ಸಿದ್ಧತೆಯನ್ನು ಮಾಡಿಕೊಂಡು ಮುಂಗಾರು ಹಂಗಾಮಿನಲ್ಲಿ ಏಕದಳ ಮತ್ತು ದ್ವಿದಳ ಬೆಳೆಗಳನ್ನು ಬಿತ್ತಿ ಮಳೆ ಎದುರು ನೋಡುತ್ತಿದ್ದು, ಆದರೆ ಇದುವರೆಗೂ ಮಳೆಯ ಸುಳಿವು ಕಾಣುತ್ತಿಲ್ಲ.ಜಿಲ್ಲೆಯ ನಾಲ್ಕು ತಾಲೂಕುಗಳ 20 ಹೋಬಳಿಗಳ ಪೈಕಿ 9 ಹೋಬಳಿಗಳಲ್ಲಿ ಇದುವರೆಗೂ ಮಳೆಯೇ ಬಂದಿಲ್ಲ. ಸತತ ಮೂರು ವರ್ಷಗಳಿಂದ ಬರದ ಭವಣೆಗೆ ಸಿಳುಕಿ ಬೆಂಡಾಗಿರುವ ರೈತರು ಈ ಭಾರಿಯ ಮುಂಗಾರು ಮಳೆ ಮೇಲೆ ಬಹಳ ನಂಬಿಕೆ ಹೊಂದಿದ್ದರು, ಪ್ರಾರಂಭದಲ್ಲಿ ಜೂನನಲ್ಲಿ ಮಳೆಯ ಅರ್ಭಟ ಜೋರಾಗಿಯೇ ಇತ್ತು ವಾಡಿಕೆಗಿಂತ ಹೆಚ್ಚು ಮಳೆಯು ಸುರಿದು ಮುಂಗಾರು ಚಟುವಟಿಕೆಗಳು ನಡೆದು ಬಿತ್ತನೆ ಮಾಡಲಾಗಿತ್ತು.
ಗಂಗಾವತಿ ತಾಲೂಕಿನ ಹುಲಿಹೈದರ್, ಕಾರಟಗಿ, ಮರಳಿ, ನವಲಿ, ಹಾಗೂ ಸಿದ್ದಾಪೂರ ಹೋಬಳಿ ಕುಷ್ಟಗಿ ತಾಲೂಕಿನ ಹನಮನಾಳ, ತಾವರಗೇರ ಹೋಬಳಿ ಹಾಗೂ ಯಲಬುರ್ಗಾ ತಾಲೂಕಿನ ಯಲಬುರ್ಗಾ, ಕುಕನೂರ ವ್ಯಾಪ್ತಿಯಲ್ಲಿ ಇದುವರೆಗೂ ಮಳೆಯೇ ಬಂದಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಳೆ ಬಂದಿದ್ದರೂ ಅದು ಎಲ್ಲಕಡಯಲ್ಲಿ ಆಗಿಲ್ಲ ಕೆಲವು ಕಡೆ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದೆ.
ಬೆಳೆವಾರು ಮುಂಗಾರು ಹಂಗಾಮಿನ ಕ್ಷೇತ್ರವಾರು : ಏಕದಳ ಬೆಳೆಗಳು 145700 ಹೇಕ್ಟರ್ ಕ್ಷೇತ್ರ ಪೈಕಿ 83808 ಹೆ.ನಲ್ಲಿ ಮಾತ್ರ ಶೇ57.52% ರಷ್ಟು ಬಿತ್ತನೆಯಾಗಿದೆ ಅದರಂತೆ ದ್ವಿದಳ ಬೆಳೆಗಳ ಬಿತ್ತನೆ ಒಟ್ಟು 50000 ಹೇಕ್ಟರ್ ಪೈಕಿ 24726 ರಷ್ಟು ಶೇ 49.45% ಆಗಿದೆ.
ಬಿತ್ತಿದ ಬೆಳೆಗಳು ಒಣವೆ ಯಿಂದ ಒಣಗಿ ಹೋಗುತ್ತಿದ್ದು, ಇದುವರೆಗೂ ಮಳೆಯ ಸುಳಿವೆ ಇಲ್ಲ. ಜಿಲ್ಲೆಯಲ್ಲಿ ಮೂಡಕವಿದ ವಾತವಾರಣ ಇದ್ದು, ಮಳೆ ಬರುವ ಲಕ್ಷಣಗಳು ಕಂಡುಬರುತ್ತಿಲ್ಲ. ಇದು ರೈತ ಸಮುದಾಯವವನ್ನು ಮೊತ್ತಷ್ಟು ಆತಂಕಕ್ಕೆ ಎಡೆಮಾಡಿದೆ. ಮಳೆಯು ಇಲ್ಲ ಬಿತ್ತಿದ ಬೆಳೆಯುವ ಇಲ್ಲ, ಜನ ಜಾನುವಾರುಗಳು ಸಂಕಷ್ಟಕ್ಕೆ ಒಳಗಾಗಿವೆ. ಕುಡಿಯುವ ನೀರಿಗೆ ತೊಂದರೆ ಕಂಡುಬರುತ್ತಿದೆ. ಸತತ ನಾಲ್ಕು ವಾರುಗಳ ಕಾಲ ಮಳೆ ಬರದಿದ್ದರೆ ಬರ ಪ್ರದೇಶವೆಂದು ಸರ್ಕಾರ ಘೋಷಿಸಲು ಅವಕಾಶವಿದೆ ಎನ್ನಲಾಗಿದೆ.

loading...