ಕೇಂದ್ರ ಸರಕಾರದ ಯೋಜನೆ ಮನೆ ಮನೆಗೆ ತೆರಳಿ ಮತದಾರರಿಗೆ ತಿಳಿಸಿ

0
5
loading...

ಬೈಲಹೊಂಗಲ: ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತವಾಗಿ ನೀಡಿರುವ ಯೋಜನೆಗಳನ್ನು ಮನೆ ಮನೆಗೆ ತೆರಳಿ ಮತದಾರರಿಗೆ ತಿಳಿಸುವ ಮತ್ತು ಮುಂದಿನ ವಿಧಾನಸಭೆಯ ಚುಣಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 150+ ಸ್ಥಾನವನ್ನು ಗೆಲ್ಲುವ ತಯಾರಿಗೆ ವಿಸ್ತಾರಕ ಅಭಿಯಾನ ಮಹತ್ವದ್ದಾಗಿದೆ ಎಂದು ಮಂಡಳ ಪ್ರಧಾನ ಕಾರ್ಯದರ್ಶಿ ವಿರೇಶ ಹೊಳೆಪ್ಪನವರ ಹೇಳಿದರು.
ಬುಡರಕಟ್ಟಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗೋವನಕೊಪ್ಪದಲ್ಲಿ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರೈತ ಮೊರ್ಚಾ ಅಧ್ಯಕ್ಷ ಮಹಾಂತೇಶ ಕಮತ ಮಾತನಾಡಿ ಮೋದಿಯವರ ನೆತೃತ್ವದ ಕೇಂದ್ರ ಸರ್ಕಾರ ಬೆಳಗಾವಿ ಜಿಲ್ಲೆಯನ್ನು ನೀರು ನಿರ್ವಹಣೆಯ ಯೋಜನೆಗೆ ಆಯ್ಕೆ ಮಾಡಿರುವದು ಬರಗಾಲದಿಂದ ತತ್ತರಿಸಿದ ರೈತರಿಗೆ ಅನೂಕುಲವಾಗಲಿದೆ. ಫಸಲ ಭಿಮಾ ಯೋಜನೆಯು ರೈತರ ಪಾಲಿಗೆ ಆಶಾದಾಯಕವಾಗಿದೆ. ಆದರೆ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಸರಿಯಾದ ಮಾಹಿತಿಯನ್ನು ರೈತರಿಗೆ ತಿಳಿಸದೆ ರೈತರ ಜೀವನದ ಜೋತೆ ಚಲ್ಲಾಟವಾಟುತ್ತಿದ್ದಾರೆ ಎಂದು ಆಪಾದಿಸಿದರು.
ಕಾರ್ಯಕ್ರಮದಲ್ಲಿ ಬುಡರಕಟ್ಟಿ ಜಿಲ್ಲಾ ಪಂಚಾಯತಿ ವಿಸ್ತಾರಕ ಉಸ್ತುವಾರಿಗಳಾದ ಫಕೀರಗೌಡ ಎಸ್.ಸಿದ್ದನಗೌಡರ ಮಾತನಾಡಿ ಮಂಡಳ ವ್ಯಾಪ್ತಿಯ ಪ್ರತಿಯೊಂದು ಬೂತ್ ದಲ್ಲಿ ಕಾರ್ಯಕರ್ತರು ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಮಹಿತಿ ನೀಡುವದರೊಂದಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಕ್ರಮ ಕೈಗೊಳ್ಳಬೇಕು. ತಮಗೆ ಸಮಸ್ಯೆಗಳು ಬಗೆಹರಿಯದಿದ್ದರೆ ಪಕ್ಷದ ಪ್ರಮುಖರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.
ಬೂದಿಹಾಳ, ಕಡಚಗಟ್ಟಿ, ಹೀರೆಬೆಳ್ಳಿಕಟ್ಟಿ ಮತ್ತು ಬುಡರಕಟ್ಟಿ ಗ್ರಾಮಗಳ ಬೂತ್ ಮಟ್ಟದ ಸಭೆಗಳನ್ನು ಉದಯ ಕೋಟಬಾಗಿ, ಸೊಮಲಿಂಗ ಕೋಟಗಿ, ದೀಪಕ ಬಾವನ್ನವರ, ದುಂಡಯ್ಯ ನರೇಂದ್ರ, ರಾಮನಗೌಡ ಪಾಟೀಲ, ಸಿದ್ದಾರೋಢ ಹೊಂಡಪ್ಪನವರ,ಮಾರುತಿ ಹುಣಸಿಕಟ್ಟಿ, ಯಲ್ಲಪ್ಪ ನರೇಂದ್ರ ಹಾಗೂ ನೂರಾರು ಬಿಜೆಪಿ ಕಾಯಕರ್ತರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆದವು.

loading...