ವೈದ್ಯಸಾಹಿತಿ ದೇವಲಾಪೂರ ಅವರಿಗೆ ಸನ್ಮಾನ

0
25
loading...

ಬೈಲಹೊಂಗಲ: ಪಟ್ಟಣದ ಬಸವರತ್ನ, ಶಿಕ್ಷಣರತ್ನ, ವೈದ್ಯಶ್ರೀ ಪ್ರಶಸ್ತಿ ಪುರಸ್ಕøತ ವೈದ್ಯಸಾಹಿತಿ ಡಾ|| ಶಿವಶಂಕರಪ್ರಸಾದ ಎಸ. ದೇವಲಾಪೂರ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ)ಯವರು ಶ್ರೀ ವರ್ತಿ ಸಿದ್ಧಬಸವೇಶ್ವರ ಸಭಾಭವನ ಬೈಲವಾಡದಲ್ಲಿ ಹಮ್ಮಿಕೊಂಡ 1081 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ನಿರ್ದೇಶಕ ಶ್ರೀ ಸುರೇಶ ಮೊಹ್ಲಿ ಮಾತನಾಡಿ ವೈದ್ಯಕೀಯ, ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆ, ಉತ್ತಮ ನಿರ್ವಹಣೆ ಹಾಗೂ ಸಾಧನೆ ಗುರುತಿಸಿ ಅವರನ್ನು ಸನ್ಮಾನಿಸಲಾಗಿದೆ ಎಂದರು. ಸಮಾರಂಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಶ್ರೀ ಅಶೋಕ ಕುಲಗೋಡ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಶ್ರೀ ವಿಠ್ಠಲ ಪಿಸೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ರೋಹಿಣಿ ಪಾಟೀಲ, ಬೈಲವಾಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಂಗವ್ವ ಗಾಡದ, ಶಂಕರಗೌಡ ಪಾಟೀಲ, ಚನಗೌಡ ಪಾಟೀಲ, ರಮೇಶ ಯಲ್ಲಪ್ಪಗೌಡರ, ವೇದಮೂರ್ತಿ ಗುರುವಯ್ಯ ಹಿರೇಮಠ ಹಾಗೂ ರಮೇಶ ಯಲ್ಲಪ್ಪಗೌಡರ ಉಪಸ್ಥಿತರಿದ್ದರು. ನಾಗರಾಜ ನಾಯ್ಕ ಸ್ವಾಗತಿಸಿದರು. ನಾಗೇಶ ಬೆಣ್ಣಿ ನಿರೂಪಿಸಿದರು. ಶ್ರೀಮತಿ ವಿಜಯಲಕ್ಷ್ಮೀ ರಾಯನಾಳ ವಂದಿಸಿದರು.

loading...