ಚೀನಾದಲ್ಲಿ ಭಾರೀ ಭೂಕಂಪ

0
18
loading...

ಬೀಜಿಂಗ್: ಚೀನಾದ ಸಿಚುವಾನ್ ಪ್ರಾಂತ್ಯದ ಜಿಯುಜಾಯ್’ಗಾವು ಕೌಂಟಿಯಲ್ಲಿ6.5 ತೀವ್ರತೆಯ ಪ್ರಮಾಣದ ಭಾರೀ ಭೂಕಂಪವಾಗಿದ್ದು, ನೂರಾರು ಜನರು ಸಾವನ್ನಪ್ಪಿರುವ ಶಂಕೆಗಳು ವ್ಯಕ್ತವಾಗಿದೆ.
ಸರ್ಕಾರಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ವರೆಗೂ 88ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಇದರಲ್ಲಿ 7 ಮಂದಿ ಸಾವನ್ನಪ್ಪಿದ್ದು, 21 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದೆ. ಆದರೆ, ಕೆಲವು ವರದಿಗಳ ಪ್ರಕಾರ ಮೃತರ ಸಂಖ್ಯೆ 100ಕ್ಕೂ ಅಧಿಕಾವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸಾವನ್ನಪ್ಪಿರುವ 7 ಮಂದಿಯ ಪೈಕಿ 5 ಮಂದಿ ಪ್ರವಾಸಿಗರೆಂದು ಹೇಳಲಾಗುತ್ತಿದೆ.

loading...