ಭಾರತ-ಚೀನಾ ನಡುವೆ ಯುದ್ಧವಾಗುವುದಿಲ್ಲ: ದಲೈ ಲಾಮಾ

0
6
loading...

ನವದೆಹಲಿ: ಡೊಕ್ಲಾಮ್ ಬಿಕ್ಕಟ್ಟಿನಿಂದ ಭಾರತ-ಚೀನಾ ನಡುವೆ ಯುದ್ಧ ಉಂಟಾಗುವುದಿಲ್ಲ ಎಂದು ಬೌದ್ಧ ಧರ್ಮ ಗುರು ದಲೈ ಲಾಮ ಅಭಿಪ್ರಾಯಪಟ್ಟಿದ್ದಾರೆ. ಚೀನಾ ಯುದ್ಧೋನ್ಮಾದದಲ್ಲಿ ಮಾತನಾಡುತ್ತಿದೆ, ಆದರೆ ಅದು ತಾತ್ಕಾಲಿಕವಷ್ಟೇ ಎಂದು ದಲೈ ಲಾಮ ಹೇಳಿದ್ದಾರೆ.
ಚೀನಾ-ಭಾರತ ನೆರೆ ರಾಷ್ಟ್ರಗಳಾಗಿರುವುದರಿಂದ ಶಾಂತಿ ಹಾಗೂ ಸಹಬಾಳ್ವೆ ನಡೆಸುವುದು ಅಗತ್ಯವಾಗಿದೆ. ಡೊಕ್ಲಾಮ್ ಬಿಕ್ಕಟ್ಟು ತೀರಾ ಗಂಭೀರ ಸಮಸ್ಯೆ ಎಂದೆನಿಸುತ್ತಿಲ್ಲ, 1962 ರಲ್ಲಿ ಚೀನಾ ಕೊನೆಗೆ ತನ್ನ ಪಡೆಗಳನ್ನು ಹಿಂಪಡೆಯಲು ಒಪ್ಪಿತ್ತು, ಈಗಲೂ ಹಿಂದಿ-ಚೀನಿ ಭಾಯಿ ಭಾಯಿ ಒಂದೇ ಭಾರತ-ಚೀನಾ ನಡುವಿನ ಬಿಕ್ಕಟ್ಟನ್ನು ಹೋಗಲಾಡಿಸಲು ಇರುವ ಮಾರ್ಗ ಎಂದು ದಲೈ ಲಾಮ ಅಭಿಪ್ರಾಯಪಟ್ಟಿದ್ದಾರೆ.
ಶಾಂತಿ, ಸೌಹಾರ್ದತೆಯನ್ನು ಮುಂದುವರೆಸಲು ಇರುವ ಪರಿಹಾರವೆಂದರೆ ಮಾತುಕತೆಯೊಂದೇ. ಒಬ್ಬರಿಗೆ ಗೆಲುವು ಒಬ್ಬರಿಗೆ ಸೋಲು ಎಂಬುದು ಹಳೆಯ ಚಿಂತನೆ, ನಿಮ್ಮ ನೆರೆಯವರ ವಿನಾಶವೆಂದರೆ ಅದು ನಿಮ್ಮ ನಾಶವೂ ಆಗಿರುತ್ತದೆ ಎಂದು ದಲೈ ಲಾಮ ಹೇಳಿದ್ದಾರೆ.

loading...